ಮಡಿಕೇರಿ: ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಕಾರಿನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರಿನ ಚಾಲಕ, ಮಾಲೀಕ ಮೃತಪಟ್ಟ ಘಟನೆ ದಕ್ಷಿಣ ಕನ್ನಡ (Dakshina Kannada) ಗಡಿಭಾಗವಾದ ಸಂಪಾಜೆ ಗ್ರಾಮದ ದೊಡ್ಡಡ್ಕ ಬಳಿ ನಡೆದಿದೆ.
ವಿರಾಜಪೇಟೆ ಕರ್ನಾಟಕ ಸಂಘದ ಸದಸ್ಯರು, ಕೊಡಗು (Kodagu) ಖಾಸಗಿ ಬಸ್ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷರಾಗಿದ್ದ ಗಣೇಶ್ (64) ಸಾವನ್ನಪ್ಪಿದ ದುರ್ದೈವಿ. ಗಣೇಶ್ ಅವರು ತಮ್ಮ ಪುತ್ರನನ್ನು ಮಂಗಳೂರಿನ ಏರ್ಪೋರ್ಟ್ಗೆ ಬಿಟ್ಟು ಹಿಂತಿರುಗಿ ಬರುತ್ತಿದ್ದ ಸಂದರ್ಭ ನಡೆದ ಅಪಘಾತ ನಡೆದಿದೆ. ಇದನ್ನೂ ಓದಿ: ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ – ಆಗಸ್ಟ್ 27ಕ್ಕೆ ಮತ್ತೆ ವಿಚಾರಣೆ
- Advertisement
ಘಟನೆಯಲ್ಲಿ ಗಣೇಶ್ ಎದೆ ಭಾಗಕ್ಕೆ ಗಂಭೀರವಾಗಿ ಗಾಯವಾಗಿತ್ತು. ಅವರನ್ನು ಸುಳ್ಯದ (Sullia) ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ – ಸಾಲುಗಟ್ಟಿ ನಿಂತಿರುವ ವಾಹನಗಳು
- Advertisement
ಕಾರಿನಲ್ಲಿದ್ದ ಗಣೇಶ್ ಅವರ ಪುತ್ರಿ, ಅಳಿಯ ಮತ್ತು ಮರ್ತೋವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧಿಸಿದಂತೆ ಮಡಿಕೇರಿ (Madikeri) ಗ್ರಾಮಾಂತರ ಠಾಣೆಯ ಹಾಗೂ ಸುಳ್ಯದ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?