-50 ಗ್ರಾಂ ಚಿನ್ನ ದೋಚಿ ಪರಾರಿಯಾಗಲು ಪ್ಲಾನ್
ಬೆಂಗಳೂರು: ದೃಶ್ಯಂ ಸಿನಿಮಾ ನೋಡಿ ಪ್ರೇರಣೆಯಿಂದ ಮಹಿಳೆಯ ಕೊಲೆ ಮಾಡಿ 4 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯು ಕೊನೆಗೂ ಕೊತ್ತನೂರು (Kothanur) ಪೊಲೀಸರ ಬಲೆಗೆ ಬಿದ್ದಿದ್ದಾನೆ. ಲಕ್ಷ್ಮಣ್ ಬಂಧಿತ ಕೊಲೆ ಆರೋಪಿ.
ನಾಗೇನಹಳ್ಳಿಯ ಸ್ಲಂ ಬೋರ್ಡ್‌ನಲ್ಲಿರುವ ಇ-ಬ್ಲಾಕ್‌ನಲ್ಲಿ ಮೇರಿ (50) ಎಂಬ ಒಬ್ಬಂಟಿ ಮಹಿಳೆ ವಾಸವಿದ್ದರು. ಆರೋಪಿ ಲಕ್ಷ್ಮಣ್ ಕೂಡಾ ಅಲ್ಲೇ ವಾಸವಿದ್ದನು. ಒಂದೇ ಕಡೆ ಇದ್ದಿದ್ದರಿಂದ ಇಬ್ಬರ ಪರಿಚಯವಾಗಿತ್ತು. ಈ ವೇಳೆ ಮಹಿಳೆಯ ಬಳಿ ಸ್ವಲ್ಪ ಚಿನ್ನಾಭರಣವಿರುವ ಬಗ್ಗೆ ಲಕ್ಷ್ಮಣ್‌ಗೆ ತಿಳಿದಿತ್ತು. ಈ ವೇಳೆ ಲಕ್ಷ್ಮಣ್ ತಾನು ಮಾಡಿದ್ದ ಸಾಲ ತೀರಿಸಲು ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚುವ ಪ್ಲಾನ್ ಮಾಡಿದ್ದ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರೋಧಿಸಿ ರೈತರ ಸಭೆ – ಬೃಹತ್ ಪಾದಯಾತ್ರೆಗೆ ನಿರ್ಧಾರ
ದೃಶ್ಯಂ ಸಿನಿಮಾ ನೋಡಿದ್ದ ಲಕ್ಷ್ಮಣ್ ಅದರ ಮಾದರಿಯಲ್ಲೇ ತಪ್ಪಿಸಿಕೊಳ್ಳಲು ಉಪಾಯ ಕಂಡುಕೊಂಡಿದ್ದ. ಹಾಗಾಗಿ ತನ್ನ ಬಳಿ ಇದ್ದ 4 ಸಿಮ್ ಕಾರ್ಡ್ ಪೈಕಿ 3 ಸಿಮ್ ಕಾರ್ಡ್‌ಗಳನ್ನು ಡಿಜೆ ಹಳ್ಳಿಯಲ್ಲಿದ್ದ ಪತ್ನಿ ನಿವಾಸದಲ್ಲಿಟ್ಟಿದ್ದ. ಇದನ್ನೂ ಓದಿ: ಗ್ಯಾರಂಟಿಗೆ ಮುಕ್ಕಾಲು ಭಾಗ ಹಣ ಖರ್ಚು ಮಾಡಿದ್ರೆ ಆಡಳಿತ ಕಷ್ಟ: ರಂಭಾಪುರಿ ಶ್ರೀ ಅಸಮಾಧಾನ
2024 ನ.25ರಂದು ಮೇರಿ ಮನೆಯ ಕರೆಂಟ್ ಕಟ್ ಮಾಡಿ ಸರಿ ಪಡಿಸಲು ತನ್ನನ್ನ ಕರೆಯುತ್ತಾರೆ ಆಗ ಕೊಲೆ ಮಾಡಬಹುದು ಎಂದು ಲಕ್ಷ್ಮಣ್ ಹೊಂಚು ಹಾಕಿದ್ದ. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ 26ರಂದು ಕೊಲೆ ಮಾಡಿ, ಮಧ್ಯಾಹ್ನ 3 ಗಂಟೆಗೆ ಆಟೋದಲ್ಲಿ ಶವವನ್ನು ಹಾಕಿಕೊಂಡು ಬಾಗಲೂರಿನ ಹೊಸೂರು ಬಂಡೆಯ ಕಸ ಡಂಪಿಂಗ್ ಯಾರ್ಡ್ ಪಕ್ಕ ಬಿಸಾಡಿ ಬಂದಿದ್ದ. ಇದನ್ನೂ ಓದಿ: ಕೇಣಿಯಲ್ಲಿ ಖಾಸಗಿ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ – ಮಾ.15ರ ವರೆಗೆ ನಿಷೇಧಾಜ್ಞೆ ಮುಂದುವರಿಕೆ
ಮಹಿಳೆಯ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರಿಗೆ ಕೊಲೆ ದಿನ ಆರೋಪಿಯ ಟವರ್ ಲೊಕೇಶನ್ ಡಿಜೆ ಹಳ್ಳಿಯಲ್ಲಿ ಇದುದ್ದರಿಂದ ಪೊಲೀಸರಿಗೂ ಆತನ ಮೇಲೆ ಅನುಮಾನ ಮೂಡಿರಲಿಲ್ಲ. ಅಲ್ಲದೇ ಆತನು ಅದೇ ದಿನದಿಂದ ಕಾಣೆಯಾಗಿದ್ದ. ಇದನ್ನೂ ಓದಿ: 400 ಪ್ರಯಾಣಿಕರಿದ್ದ ಪಾಕ್ ರೈಲು ಹೈಜಾಕ್ – 120 ಮಂದಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು, 6 ಸೈನಿಕರ ಹತ್ಯೆ
ಇತ್ತೀಚೆಗೆ ಲಕ್ಷ್ಮಣ್ ಪ್ರೇಯಸಿಯ ಜೊತೆಗೆ ಸಂಪರ್ಕದಲ್ಲಿದ್ದ. ಆಕೆಯ ಜೊತೆಗೆ ದಿನವಿಡೀ ಮಾತಾಡಲು ಶುರು ಮಾಡಿದ್ದ. ಆ ನಂಬರ್ ಟ್ರೇಸ್ ಮಾಡಿದ ಪೊಲೀಸರಿಗೆ ಲಕ್ಷ್ಮಣ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಲಕ್ಷ್ಮಣ್‌ನನ್ನು ಬಂಧಿಸಿ ವಿಚಾರಿಸಿದಾಗ ಮಹಿಳೆ ಬಳಿಯಿದ್ದ 50 ಗ್ರಾಂ ಚಿನ್ನಕ್ಕಾಗಿ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬಾಗಲಕೋಟೆ ವಿಶ್ವವಿದ್ಯಾಲಯ ಕಾಲೇಜುಗಳನ್ನ ವಿಭಾಗ ಮಾಡ್ಬೇಡಿ- ವಿಧಾನ ಪರಿಷತ್‌ನಲ್ಲಿ ಬಿಜೆಪಿ ಆಗ್ರಹ
ಆರೋಪಿಯನ್ನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.