ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಬೇಸಿಗೆ ಆರಂಭ ಆಗುತ್ತಿದ್ದಂತೆ ಈ ವರ್ಷ ಕುಡಿಯುವ ನೀರಿನ ಸಮಸ್ಯೆ (Drinking Water Problem) ಹೆಚ್ಚಾಗಿಯೇ ಇದ್ದು ಒಬ್ಬರಿಗೆ ಒಂದೇ ಕ್ಯಾನ್ ನೀರು ಮಾತ್ರ ನೀಡಲಾಗುತ್ತಿದೆ.
ಬೋರ್‌ವೆಲ್‌ನಲ್ಲಿ ನೀರಿಲ್ಲ, ಕಾವೇರಿ ನೀರು (Cauvery Water) ಸರಿಯಾಗಿ ಬರುತ್ತಿಲ್ಲ, ಟ್ಯಾಂಕರ್ ನೀರಿನ ಬೆಲೆ ದುಬಾರಿಯಾದ ಕಾರಣ ಈಗ ಬಹುತೇಕ ಮಂದಿ ಶುದ್ಧ ನೀರಿನ (Purified Water) ಘಟಕದತ್ತ ಚಿತ್ತ ಹರಿಸಿದ್ದಾರೆ. ಇಲ್ಲೂ ನೀರಿನ ಅಭಾವದ ಜೊತೆ ಎಲ್ಲರಿಗೂ ನೀರು ಕೊಡಬೇಕಾಗಿರುವುದರಿಂದ ಹೊಸ ನಿಯಮ ಶುರುವಾಗಿದ್ದು ಒಬ್ಬರಿಗೆ ಒಂದೇ ಕ್ಯಾನ್ ನೀರು ನೀಡಲಾಗುತ್ತದೆ. ನಗರದ ಹಲವೆಡೆ ಅದರಲ್ಲೂ ರಾಜರಾಜೇಶ್ವರಿ ನಗರದ ಆರ್‌ಓ ಪ್ಲಾಂಟ್‌ನಲ್ಲಿ ಈ ಬೋರ್ಡ್ ಕಾಣಸಿಗುತ್ತಿದೆ. ಇದನ್ನೂ ಓದಿ: ಮುಕ್ಕಾಲು ಗಂಟೆಯಲ್ಲಿ ಬರೋಬ್ಬರಿ 10 ಬಸ್ಸಿನಲ್ಲಿ ಬಾಂಬರ್ ಸಂಚಾರ!
Advertisement
Advertisement
ಜನರು ಒಂದೇ ಬಾರಿಗೆ ಮೂರು-ನಾಲ್ಕು ಕ್ಯಾನ್ ಕುಡಿಯುವ ನೀರು ಒಯ್ಯುತ್ತಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ಬೋರ್‌ವೆಲ್ ಬತ್ತಿ ಶುದ್ಧ ನೀರಿನ ಘಟಕಗಳಲ್ಲಿ ನೀರಿನಲ್ಲದೇ ಪರದಾಟ ಶುರುವಾಗಿದೆ. ಹೀಗಾಗಿ ಒಬ್ಬರಿಗೆ ಒಂದೇ ಕ್ಯಾನ್ ನೀರು ಎಂಬ ನಿಯಮ ಆರ್‌ಓ ಪ್ಲಾಂಟ್‌ನಲ್ಲಿ ಜಾರಿಯಾಗಿದೆ. ಈಗಾಗಲೇ ಕೆಲವು ಕಡೆ ಬೆಳಗ್ಗೆ 8 ರಿಂದ ರಾತ್ರಿ 8 ವರೆಗೆ ನೀರು ಬಿಡಲಾಗುತ್ತಿತ್ತು. ಇದೀಗ ಬೆಳಗ್ಗೆ ಎರಡು ಗಂಟೆ ಸಂಜೆ ಎರಡು ಗಂಟೆ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಕಡೆ ಆರ್‌ಓ ಪ್ಲಾಂಟ್ ನೀರಿಲ್ಲದೆ ಬಂದ್ ಆಗಿವೆ. ಇದನ್ನೂ ಓದಿ: ಆಪರೇಷನ್ ಕಮಲ ಮಾಡಲು ಬಿಜೆಪಿ ಪ್ರಭಾವಿ ವ್ಯಕ್ತಿಯಿಂದ ಆಫರ್: ಬಿ.ಆರ್.ಪಾಟೀಲ್
Advertisement
ಮಹಾನಗರಿ ಬೆಂಗಳೂರಿನ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳೇ ಸದ್ಯಕ್ಕೆ ಜೀವಾಳ. ಇಲ್ಲಿ ನೀರು ಸಿಕ್ಕರೆ ನೆಮ್ಮದಿ. ಇಲ್ಲೂ ನೀರು ಸಿಗದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.