ಗದಗ: ಉತ್ತರ ಕರ್ನಾಟಕದಲ್ಲಿ ನೀರಿನ ಹಾಹಾಕಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ಜನರನ್ನ ಆ ದೇವರೇ ಕಾಪಾಡಬೇಕು. ಶಾಲೆಗೆ ಹೋಗೋ ಮಕ್ಕಳು ಶಾಲೆ ಬಿಟ್ಟು ಎರಡು ಮೂರು ಕಿಲೋ ಮೀಟರ್ ದೂರ ನಡೆದು ಮನೆಗೆ ನೀರು ಹೊತ್ತು ತರಬೇಕು.
Advertisement
ಒಂದು ವೇಳೆ ನೀರು ತರದೇ ಇದ್ದರೆ ಅಪ್ಪ-ಅಮ್ಮ ಹೊಡಿತಾರೆ. ಶಾಲೆಗೆ ಹೋಗದೆ ಇದ್ದರೆ ಮೇಷ್ಟ್ರು ಹೊಡಿತಾರೆ ಅಂತಾ ವಿದ್ಯಾರ್ಥಿನಿಯೊಬ್ಬಳು ಪಬ್ಲಿಕ್ ಟಿವಿ ಕ್ಯಾಮರಾ ಮುಂದೆ ಕಣ್ಣೀರು ಹಾಕಿದ್ದಾಳೆ.
Advertisement
Advertisement
ಈ ಗ್ರಾಮಕ್ಕೆ ಯಾರು ಹೆಣ್ಣು ಕೊಡಲ್ವಂತೆ. ಹಾಗೋ ಹೀಗೋ ಒಪ್ಪಿಸಿ ಮದುವೆ ಮಾಡಿಕೊಂಡು ಬಂದ್ಮೇಲೆ ಅವರು ನೀರಿಗಾಗಿ ಕಷ್ಟ ಅನುಭವಿಸಬೇಕು. ಇದಲ್ಲದೆ, ನೀರು ತಂದಿಡದೆ ಇದ್ದರೆ ಮಧ್ಯಾಹ್ನದಿಂದ ಏನ್ ಮಾಡ್ತಿದ್ದಿ? ಅಂತಾ ಬಾಯಿಗೆ ಬಂದಂಗೆ ಬೈಯ್ದು ಗಂಡ ಹೊಡಿತಾನೆ ಅಂತಾ ಗ್ರಾಮದ ಕೆಲ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.