ಬೇಸಿಗೆಯ (Summer) ತಾಪಮಾನ ಅಧಿಕಗೊಳ್ಳುತ್ತಿದೆ. ಅತಿಯಾದ ಬಿಸಿಲಿನಿಂದಾಗಿ ಜನರಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಸಮಯದಲ್ಲಿ ನೀರು, ಜ್ಯೂಸ್ ಸೇರಿದಂತೆ ಇತರೆ ತಂಪು ಪಾನೀಯಗಳನ್ನು ಸೇವಿಸುವುದು ದೇಹಕ್ಕೆ ಒಳ್ಳೆಯದು. ಅದರಲ್ಲೂ ಪ್ರತಿನಿತ್ಯ ಒಂದು ಗ್ಲಾಸ್ ಕಬ್ಬಿನ ಹಾಲನ್ನು (Sugarcane) ಸೇವಿಸುವುದರಿಂದ ಅನೇಕ ಸಮಸ್ಯೆಗಳಿಂದ ದೂರ ಇರಬಹುದಾಗಿದೆ.
ಚರ್ಮಕ್ಕೆ ಒಳ್ಳೆಯದು: ಕಬ್ಬಿನ ರಸದಲ್ಲಿ ಉತ್ಕರ್ಷಣ ನಿರೋಧಕಗಳು, ಮೆಗ್ನೀಸಿಯಮ್, ಕಬ್ಬಿಣ ಹಾಗೂ ಇತರ ಎಲೆಕ್ಟ್ರೋಲೈಟ್‍ಗಳು ಹೇರಳವಾಗಿರುತ್ತದೆ. ಇವೆಲ್ಲವೂ ಕಾಂತಿಯುತ ಚರ್ಮಕ್ಕೆ (Skin) ಅವಶ್ಯಕವಾಗಿರುತ್ತದೆ. ಜೊತೆಗೆ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ದೇಹದಲ್ಲಿನ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ಕಾಣುವುದನ್ನು ಕಡಿಮೆಗೊಳಿಸುತ್ತದೆ.
Advertisement
Advertisement
ಮೂತ್ರದ ಸೋಂಕನ್ನು ತಡೆಯುತ್ತೆ: ಬೇಸಿಗೆಯಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಮೂತ್ರ ಸೋಂಕಿನ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಮೂತ್ರ ಸೋಂಕನ್ನು ತಡೆಗಟ್ಟಬಹುದು, ಕಿಡ್ನಿ ಸ್ಟೋನ್ ತಡೆಗಟ್ಟಲು ಸಹಕಾರಿಯಾಗಿದೆ.
Advertisement
ಮೊಡವೆಗೆ ಮುಕ್ತಿ: ಬೇಸಿಗೆಯಲ್ಲಿ ಬೇವರುವುದರಿಂದ ಮೊಡವೆ ಸಮಸ್ಯೆ ಹೆಚ್ಚಾಗುವುದು ಸಹಜ. ಆದರೆ ನೀವು ದಿನಾ ಒಂದು ಲೋಟ ಕಬ್ಬಿನ ರಸ ಕುಡಿಯುವುದರಿಂದ ಮೊಡವೆ ಸಮಸ್ಯೆ ತಡೆಗಟ್ಟಬಹುದು. ಅಲ್ಲದೇ ಕಬ್ಬಿನ ರಸವನ್ನು ಅರಿಶಿಣದೊಂದಿಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ.
Advertisement
ಕ್ಯಾನ್ಸರ್ ವಿರುದ್ಧ ಹೋರಾಡುತ್ತೆ: ಕಬ್ಬಿನ ರಸದಲ್ಲಿ ಕಂಡುಬರುವ ಫ್ಲೇವೊನ್‍ಗಳು ಕ್ಯಾನ್ಸರ್ ಕೋಶಗಳ ಉತ್ಪಾದನೆ ಹಾಗೂ ಹರಡುವಿಕೆಯನ್ನು ನಿಲ್ಲಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಇದನ್ನೂ ಓದಿ: ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ
ಬಾಯಿಯ ದುರ್ವಾಸನೆ ತಡೆ: ಬಾಯಿಯ ದುರ್ವಾಸನೆ ಪೋಷಕಾಂಶಗಳ ಕೊರತೆಯಿಂದಲೂ ಉಂಟಾಗುತ್ತದೆ. ಪ್ರತಿದಿನ ಕಬ್ಬಿನ ರಸ ಕುಡಿಯುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು. ಇದನ್ನೂ ಓದಿ: PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು