ಚಿಕ್ಕೋಡಿ : ಕಲುಷಿತ ನೀರು (Contaminated Water) ಸೇವಿಸಿ 30 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nipani) ತಾಲೂಕಿನ ಕಸನಾಳ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ 30 ಜನರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು,ಕುಡಿಯುವ ನೀರಲ್ಲಿ (Drinking Water) ಕೊಳವೆಯಲ್ಲಿ, ಪೈಪ್ ಒಡೆದು ಕೊಳಚೆ ನೀರು ಮಿಶ್ರಣದ ನೀರು ಸೇವಿಸಿರುವವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ . ಇದನ್ನೂ ಓದಿ: Telangana| ಬ್ಯಾಂಕ್‌ನಲ್ಲಿದ್ದ 13.6 ಕೋಟಿ ಮೌಲ್ಯದ 19 ಕೆಜಿ ಚಿನ್ನಾಭರಣ ದರೋಡೆ
ಗ್ರಾಮದ ಬೋರವೆಲ್ ಮೂಲಕ ನಳಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನಲ್ಲಿ ಕಲುಷಿತ ನೀರು ಮಿಶ್ರಣದ ನೀರು ಸೇವಿಸಿ ಅಸ್ವಸ್ಥಗೊಂಡ 10 ಕ್ಕೂ ಹೆಚ್ಚು ಜನರಿಗೆ ನಿಪ್ಪಾಣಿ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲವರನ್ನು ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ತಾಲೂಕು ವೈದ್ಯಾಧಿಕಾರಿಗಳ ತಂಡ ಠಿಕಾಣಿ ಹೂಡಿದೆ.