ಲಕ್ನೋ: ಮದ್ಯ (Alcohol) ಸೇವಿಸಿದ್ದಕ್ಕೆ ಅವಮಾನಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಮಗಳ (Daughter) ಮದುವೆಗೆ (Marriage) ಕೆಲವೇ ಗಂಟೆಗಳು ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಸುನೀಲ್ ಕುಮಾರ್ ದ್ವಿವೇದಿ (58) ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಲಕ್ನೋದ ಹೊರವಲಯದಲ್ಲಿರುವ ಮೋಹನ್‍ಲಾಲ್‍ಗಂಜ್ ಪ್ರದೇಶದ ಟಿಕ್ರಾಸಾನಿ ಗ್ರಾಮದ ತನ್ನ ಮನೆಯಲ್ಲಿ ಈ ಘಟನೆ ನಡೆದಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ಕೋಣೆಗೆ ಹೋಗಿ ನೋಡಿದಾಗ ಸುನೀಲ್ ಕುಮಾರ್ ಶವವಾಗಿ ಪತ್ತೆ ಆಗಿದ್ದಾನೆ.
ಸುನೀಲ್ ಕುಮಾರ್ ತನ್ನ ಮಗಳ ಮದುವೆಗೆ ಕೆಲವೇ ಗಂಟೆಗಳಿರುವಾಗಲೇ ಮದ್ಯ ಸೇವಿಸಿ ಮದುವೆ ಮನೆಗೆ ಬಂದಿದ್ದ. ಅಷ್ಟೇ ಅಲ್ಲದೇ ಮದುವೆಗೆ ಬಂದಿದ್ದ ಸಂಬಂಧಿಗಳಿಗೆಲ್ಲ ಸುನೀಲ್ ಕುಮಾರ್ ಬೈದಿದ್ದ. ತಂದೆಯ ವರ್ತನೆಯನ್ನು ನೋಡಿದ್ದ ಆತನ ಪುತ್ರ ಬೈದು ಅವಮಾನ ಮಾಡಿದ್ದ. ಇದರಿಂದಾಗಿ ಸುನೀಲ್ ಕುಮಾರ್ ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ
ಘಟನೆಗೆ ಸಂಬಂಧಿಸಿದಂತೆ ಸುನೀಲ್ ಕುಮಾರ್‌ನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಾನು ಲೂಟಿ ಹೊಡೆದು ರಾಜಕೀಯ ಮಾಡಿಲ್ಲ, ಅಕ್ರಮ ಮಾಡಿ ಜೀವನ ಮಾಡಿಲ್ಲ: HDK