ಬೀದರ್: ಪ್ರತಿದಿನ ಮದ್ಯ (Alcohol) ಸೇವಿಸಿ ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನು (Husband) ಪೋಷಕರ ಜೊತೆ ಸೇರಿ ಪತ್ನಿ ಕೊಲೆ ಮಾಡಿದ ದಾರುಣ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಬಾಚೆಪಳ್ಳಿ ಗ್ರಾಮದಲ್ಲಿ ನಡೆದಿದೆ.
ಶ್ರೀಧರ್ ಶಿವರಾಜ್ (30) ಕೊಲೆಯಾದ ಪತಿ. ಕುಡಿದು ಬಂದು ಈತ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದು ಪೋಷಕರ ಜೊತೆ ಸೇರಿ ಪತಿಯನ್ನು ಪತ್ನಿ ಸವಿತಾ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಖರ್ಜೂರದೊಳಗೆ ಇಟ್ಟು ಸಾಗಿಸುತ್ತಿದ್ದ 172 ಗ್ರಾಂ ಚಿನ್ನ ಏರ್‌ಪೋರ್ಟ್‌ನಲ್ಲಿ ವಶಕ್ಕೆ
ಕಳೆದ ಐದಾರು ವರ್ಷಗಳ ಹಿಂದೆ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ಚಾಲಕನ ಕೆಲಸ ಮಾಡುತ್ತಿದ್ದ ಪತಿ ಶ್ರೀಧರ್ ಕುಡಿದು ಬಂದು ಪ್ರತಿ ದಿನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಪೋಷಕರನ್ನು ಕರೆಸಿಕೊಂಡು ಹಗ್ಗದಿಂದ ಪತಿಯ ಕೈಕಾಲು ಕಟ್ಟಿ ಹಾಕಿ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಮಡಿಕೇರಿಯ ಇಗ್ಗುತಪ್ಪ, ನಾಲಾಡಿ ಬೆಟ್ಟದಲ್ಲಿ ಕಾಡ್ಗಿಚ್ಚು – 20 ಎಕ್ರೆಗೆ ಬೆಂಕಿ
ಹಲ್ಲೆ ಮಾಡಿದ ಬಳಿಕ ಮೂವರೂ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಪತಿ ಶ್ರೀಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಆಹಾರ ಪ್ರಿಯರಿಗೆ ಶಾಕ್ – ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ