ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌತೆಲಾ ಹೆಸರಲ್ಲಿ ಹೊಸ ಡ್ರಿಂಕ್ ಲಾಂಚ್ ಆಗಿದೆ. ಗೋವಾದ ಕ್ಲಬ್ ಊರ್ವಶಿ ರೌತೆಲಾ ಹೆಸರಲ್ಲಿ ಹೊಸ ಡ್ರಿಂಕ್ ಆರಂಭ ಮಾಡಿದೆ. ಕ್ಲಬ್ ಈ ಡ್ರಿಂಕ್ ಗೆ ‘ಊರ್ವಶಿ ರೌತೆಲಾ ಶಾಟ್’ ಎಂದು ಹೆಸರಿಡಲಾಗಿದೆ.
ಊರ್ವಶಿ ಹೆಸರಿನ ಡ್ರಿಂಕ್ ಕುಡಿಯಲು ಗ್ರಾಹಕರು ನಮ್ಮ ಕ್ಲಬ್ ನತ್ತ ಆಕರ್ಷಿತರಾಗುತ್ತಿದ್ದಾರೆ. ಸದ್ಯದ ಗೋವಾದ ಮಾರುಕಟ್ಟೆಯಲ್ಲಿ ಈ ರೀತಿಯ ಟೆಕ್ನಿಕ್ ಅವಶ್ಯವಿತ್ತು. ಊರ್ವಶಿಯವರು ಯಾವಾಗಲೂ ಫಿಟ್ ಮತ್ತು ಲವಲವಿಕೆಯಿಂದ ಇರುತ್ತಾರೆ. ಹಾಗಾಗಿ ಡ್ರಿಂಕ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ ಎಂದು ಕ್ಲಬ್ ಸಿಬ್ಬಂದಿ ಹೇಳಿದ್ದಾರೆ. ಇದನ್ನೂ ಓದಿ: ಹಿಂಭಾಗಕ್ಕೆ ಬೋನಿ ಕಪೂರ್ ಟಚ್ – 5 ತಿಂಗಳ ಬಳಿಕ ಊರ್ವಶಿ ಮೌನ ಸ್ಫೋಟ
ನನ್ನ ಹೆಸರಿನಲ್ಲಿ ಡ್ರಿಂಕ್ ಆರಂಭವಾಗಿರುವ ವಿಷಯ ಕೇಳಿ ಸಂತೋಷವಾಯ್ತು. ಕ್ಲಬ್ ಅವರ ಈ ಹೊಸ ಡ್ರಿಂಕ್ ಗೆ ಉತ್ತಮ ಸ್ಪಂದನೆ ದೊರೆಯಲಿ. ನನ್ನ ವೃತ್ತಿ ಜೀವನದಲ್ಲಿ ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಜನರಿಗೆ ಹತ್ತಿರವಾಗಲು ಇದು ಮತ್ತಷ್ಟು ಸಹಾಯವಾಗಲಿದೆ ಎಂದು ಊರ್ವಶಿ ರೌತೆಲಾ ಕ್ಲಬ್ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಚಿತ್ರ-ವಿಚಿತ್ರ ಡ್ರೆಸ್ ತೊಟ್ಟುಕೊಂಡ ಊರ್ವಶಿ
ಈ ಮೊದಲು ಕಿಲಾಡಿ ಅಕ್ಷಯ್ ಕುಮಾರ್ ಮತ್ತು ನಟಿ ರಿಚಾ ಚಡ್ಡಾ ಹೆಸರಿನಲ್ಲಿ ಡ್ರಿಂಕ್ ಲಾಂಚ್ ಮಾಡಲಾಗಿದೆ. ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಶೋಯೆಬ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಬಿಡುಗಡೆ ಬಳಿಕ ಒಂದು ಬಗೆಯ ಕಾಕೆಟಲ್ ಗೆ ‘ಶೋಯೆಬ್‍ಟಿನಿ’ ಎಂದು ಹೆಸರಿಡಲಾಗಿತ್ತು. ಫುಕರೆ ಖ್ಯಾತಿಯ ನಟಿ ರಿಚಾ ಚಡ್ಡಾ ಅವರ ಹೆಸರನಲ್ಲಿ ಮುಂಬೈನಲ್ಲಿ ಕಾಕೆಟೆಲ್ ಲಾಂಚ್ ಮಾಡಲಾಗಿತ್ತು. ಇದನ್ನೂ ಓದಿ: ಫೋಟೋ ಶೂಟ್ ವೇಳೆ ಊರ್ವಶಿ ಎಡವಟ್ಟು-ಸೊಂಟದ ಪಟ್ಟಿಯೇ ಕಳಚಿ ಬಿತ್ತು