ಮಳೆಗಾಲದಲ್ಲಿ ಮಹಿಳೆಯರು ಗಮನಿಸಬೇಕಾದ ಡ್ರೆಸ್ಸಿಂಗ್ ಟಿಪ್ಸ್!

Public TV
2 Min Read
Rainy Season Dressing 1

ಅಂತೂ ಇಂತೂ ಮಳೆಗಾಲವೂ ಶುರುವಾಯಿತು. ಈ ಮಳೆಗಾಲದಲ್ಲಿ ಮನೆಯಲ್ಲಿ ಕೂತು ಬಿಸಿ ಬಿಸಿ ಕಾಫಿ, ಟೀ ಜೊತೆ ಬಜ್ಜಿ ಬೋಂಡಾ ತಿಂದು ಕಾಲ ಕಳೆಯೋದು ಒಂದು ಖುಷಿಯಾದ್ರೆ. ಮನೆಯಿಂದ ಹೊರಗೆ ಕಾಲಿಟ್ಟಾಗ ಈ ಚಿತ್ರಣವೇ ಬದಲಾಗುತ್ತದೆ. ಜಿಟಿ ಜಿಟಿ ಸುರಿಯುವ ಮಳೆ, ರಸ್ತೆಯಲ್ಲಿ ನಿಂತ ಕೆಸರು ನೀರಿನಿಂದ ಹೊರಗಡೆ ಹೋಗುವಾಗ ಯಾವ ಬಟ್ಟೆ ಹಾಕೋದು ಯಾವ ಶೂ ಹಾಕೋದು ಅನ್ನೋದೇ ದೊಡ್ಡ ತಲೆನೋವುವಾಗಿದೆ.

ಈ ಮಳೆಗಾಲದಲ್ಲಿ (Rainy Season) ಬಟ್ಟೆ ಕೇವಲ ಅಂದ ಹೆಚ್ಚಿಸೋದು ಮಾತ್ರವಲ್ಲ. ಮಳೆಗೆ ಸರಿಹೊಂದುವಂತೆ ಹಾಗೂ ದೇಹಕ್ಕೆ ಬೆಚ್ಚಗಿನ ಫೀಲ್ ನೀಡುವುದು ಸಹ ತುಂಬಾ ಮುಖ್ಯ. ಹಾಗಾಗಿ ನಾವು ಬಟ್ಟೆಗಳ ಆಯ್ಕೆಯಲ್ಲಿ ಕೊಂಚ ಚ್ಯೂಸಿಯಾಗಿರಬೇಕು. ಮಳೆಗಾಲದಲ್ಲಿ ಬಟ್ಟೆ ಆಯ್ಕೆ ಹೇಗಿರಬೇಕೆಂದರೆ ಧರಿಸಲು ಕಂಫರ್ಟ್‌ ಇರಬೇಕು. ನೋಡಲು ಸುಂದರವಾಗಿ ಕಾಣುವಂತೆ ಇರಬೇಕು.

Rain

ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿ
ಮಳೆಗಾಲದಲ್ಲಿ ಹೊರಗಡೆ ಹೋಗುವಾಗ ಗಾಢ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಬೇಕು. ಕೆಂಪು, ಕಪ್ಪು, ಕಡು ನೀಲಿ, ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಯಾಕೆಂದರೆ ತಿಳಿ ಬಣ್ಣದ ಡ್ರೆಸ್‌ಗಳನ್ನು ಧರಿಸುವುದರಿಂದ ಕೆಸರು ನೀರಿನ ಕಲೆಗಳು, ವಾಹನದ ಗ್ರೀಸ್‌ ಕಲೆಗಳು ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಡಾರ್ಕ್‌ ಕಲರ್‌ನ ಬಟ್ಟೆಗಳನ್ನು ಧರಿಸುವುದು ಅತ್ಯಂತ ಉತ್ತಮವಾಗಿದೆ.

Dark Dresses

ಲೆಹಂಗಾ, ಅನಾರ್ಕಲಿ ಡ್ರೆಸ್‌ಗಳು ಬೇಡ
ಇನ್ನು ಈ ಮಾನ್ಸೂನ್‌ ಸಮಯದಲ್ಲಿ ಉದ್ದನೆಯ ಬಟ್ಟೆಗಳನ್ನು ಧರಿಸುವುದನ್ನು ಅವಾಯ್ಡ್‌ ಮಾಡಬೇಕು. ಲೆಹಂಗಾ, ಅನಾರ್ಕಲಿ ಅಥವಾ ಜೀನ್ಸ್‌ ಪ್ಯಾಂಟ್‌ಗಳನ್ನು ಬಳಸದೇ ಇರುವುದು ಉತ್ತಮ. ಲೆಹಂಗಾ, ಸೀರೆ, ಅನಾರ್ಕಲಿ ಬಟ್ಟೆಗಳು ಮಳೆಯಲ್ಲಿ ಒದ್ದೆಯಾದರೆ ತುಂಬಾ ಭಾರವೆನಿಸುತ್ತದೆ. ಅಲ್ಲದೇ ಬಳಿಕ ಅನ್‌ಕಂಪರ್ಟ್‌ ಫೀಲ್‌ ಸಹ ನೀಡುತ್ತದೆ. ಜೀನ್ಸ್‌ ಪ್ಯಾಂಟ್‌ಗಳು ಮಳೆಗಾಲದಲ್ಲಿ ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ. ಆದ್ದರಿಂದ ಇಂತಹ ಬಟ್ಟೆಗಳನ್ನು ಧರಿಸದೇ ಇರುವುದು ಒಳ್ಳೆಯದು.

Anarkali

ಶಾರ್ಟ್‌ ಡ್ರೆಸ್‌ಗಳು ಉತ್ತಮ
ಮಳೆಗಾಲದಲ್ಲಿ ಹೆಚ್ಚು ಉದ್ದವಾಗಿರುವ ಬಟ್ಟೆಗಳ ಬದಲಾಗಿ ಶಾರ್ಟ್‌ ಡ್ರೆಸ್‌ಗಳನ್ನು ಧರಿಸಬೇಕು. ಇದು ಮಳೆಯಿಂದ ನಿಮ್ಮ ಬಟ್ಟೆಗಳು ಒದ್ದೆಯಾಗಿ ಕಿರಿಕಿರಿ ಉಂಟು ಮಾಡುವುದನ್ನು ತಪ್ಪಿಸುತ್ತದೆ. ಆದ್ದರಿಂದ ಸಿಂಪಲ್‌ ಕುರ್ತಾ, ಶಾರ್ಟ್‌ ಡ್ರೆಸ್‌, ಲೆಗ್ಗಿನ್ಸ್‌ ಅಥವಾ ಕಾಟನ್‌ ಪ್ಯಾಂಟ್‌ ಧರಿಸುವುದರಿಂದ ಉತ್ತಮ ಅನುಭವ ನೀಡುತ್ತದೆ.

Short Dress

ಮೇಕಪ್‌ ಬಗ್ಗೆಯೂ ಗಮನವಿರಲಿ
ಇನ್ನೂ ಹುಡುಗಿಯರಿಗೆ ಈ ಮಳೆಗಾಲದಲ್ಲಿ ಮೇಕಪ್‌ದೇ ಚಿಂತೆಯಾಗಿರುತ್ತದೆ. ಮಳೆಗೆ ಒದ್ದೆಯಾಗಿ ಮೇಕಪ್‌ ಹಾಳಾಗಬಹುದೆಂಬ ಭಯವಿದ್ದರೆ, ಆದಷ್ಟು ಲೈಟ್‌ ಮೇಕಪ್‌ನ್ನು ಮಾಡಬೇಕು. ಇಲ್ಲದಿದ್ದರೆ ವಾಟರ್‌ ಪ್ರೂಫ್‌ ಮೇಕಪ್‌ಗಳನ್ನು ಧರಿಸುವುದರಿಂದ ಮಳೆಗಾಲದಲ್ಲಿ ಚಿಂತೆಯಿಲ್ಲದೆ ಸುತ್ತಾಟಬಹುದಾಗಿದೆ. ಇನ್ನು ಈ ವೇಳೆ ಡಾರ್ಕ್‌ ಲಿಪ್‌ಸ್ಟಿಕ್‌ ಧರಿಸುವುದರಿಂದ ಮಳೆಗಾಲದಲ್ಲಿ ಒದ್ದೆಯಾದರೂ ಆಡ್‌ ಆಗಿ ಕಾಣುವುದಿಲ್ಲ. ಲೈಟ್ ಫೌಂಡೇಶನ್, ವಾಟರ್ ಪ್ರೂಫ್ ಮಸ್ಕರಾ ಮತ್ತು ಟಿಂಟೆಡ್ ಲಿಪ್ ಬಾಮ್ ಉತ್ತಮ ಆಯ್ಕೆಗಳಾಗಿವೆ.

Makeup Items

ಸ್ಲೀಪ್, ಶೂಗಳನ್ನು ಅವಾಯ್ಡ್ ಮಾಡಿ
ಮಳೆಗಾಲದಲ್ಲಿ ಕೇವಲ ಬಟ್ಟೆ ಮಾತ್ರವಲ್ಲ ಚಪ್ಪಲಿ ಆಯ್ಕೆ ಕೂಡ ಅಷ್ಟೇ ಇಂಪಾರ್ಟೆಂಟ್. ಮಳೆಗಾಲದಲ್ಲಿ ಸ್ಲಿಪ್ಪರ್ ಬಳಕೆಯಿಂದ ಬಟ್ಟೆಗಳು ಕೊಳೆಯಾಗುತ್ತದೆ. ಸ್ಲಿಪ್ಪರ್ ಗಳನ್ನು ಬಳಸಿದರೆ, ಅದರಿಂದ ಬಟ್ಟೆಗಳಿಗೆ ಕೆಸರು ನೀರು ಬಿದ್ದು ಹಾಳುಮಾಡುತ್ತದೆ. ಅದಕ್ಕಾಗಿ ರಬ್ಬರ್ ಶೂಗಳು, ಉಂಗುಷ್ಠವಿರುವ ಚಪ್ಪಲಿಗಳ ಅಥವಾ ಬೆಲ್ಟ್ ಚಪ್ಪಲಿಗಳ ಬಳಕೆ ಒಳ್ಳೆಯದು.

Slippers

ಮಳೆಗಾಲದಲ್ಲಿ ಯಾವಾಗಲೂ ತೆಳುವಾಗಿರುವ, ಕಾಟನ್ ಡ್ರೆಸ್ ಹಾಗೂ ಒಣಗಿಸಲು ಸುಲಭವಾಗುವ ಬಟ್ಟೆಗಳನ್ನು ಧರಿಸಬೇಕು. ಮಾನ್ಸೂನ್ ಸಮಯದಲ್ಲಿ ಮಹಿಳೆಯರು ಆರಾಮದಾಯಕ ಮತ್ತು ಸ್ಟೈಲಿಶ್ ಆಗಿ ಕಾಣಲು ಸರಿಯಾದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

Share This Article