ನೀವು ಈಗಷ್ಟೆ ಬಟ್ಟೆ ಖರೀದಿ ಮಾಡಿದ್ದೀರಾ? ನಿಮ್ಮ ಹೊಸ ಬಟ್ಟೆ ನಿಮ್ಮ ಸೈಜ್‌ಗೆ ಹೊಂದಿಕೊಳ್ಳುತ್ತಿಲ್ಲವೆ? ಅಥವಾ ನಿಮ್ಮ ಹಳೆ ಬಟ್ಟೆಗಳೇ ಕೊನೆ ಕ್ಷಣದಲ್ಲಿ ಕೈ ಕೊಡುತ್ತಿದೆಯೆ? ಇಂತಹ ಸನ್ನಿವೇಶದಲ್ಲಿ ನಿಮ್ಮ ಬಳಿ ಟೈಲರ್ ಬಳಿ ಹೋಗುವಷ್ಟು ಸಮಯ ಇಲ್ಲವಾದಲ್ಲಿ ಇಲ್ಲಿರುವ ಕೆಲವು ಡ್ರೆಸ್ಸಿಂಗ್ ಹ್ಯಾಕ್‌ಗಳು ಕೊನೇ ಕ್ಷಣದಲ್ಲಿ ಖಂಡಿತವಾಗಿಯೂ ನಿಮ್ಮ ಸಹಾಯಕ್ಕೆ ಬರುತ್ತದೆ.
ಪ್ಯಾಂಟ್ ಲೆಂತ್ ಹ್ಯಾಕ್:
ನಿಮ್ಮಪ್ಯಾಂಟ್ ಆಂಕಲ್ ಗಿಂತ ಉದ್ದ ವಾಗಿದ್ದರೆ ಅದು ಖಂಡಿತವಾಗಿಯೂ ನಿಮಗೆ ಅಂದವಾಗಿ ತೋರುವುದಿಲ್ಲ. ನಿಮ್ಮ ಹೊಸ ಪ್ಯಾಂಟ್ ಅರ್ಜೆಂಟ್ ಆಗಿ ಆಲ್ಟರ್ ಆಗಬೇಕಿದ್ದರೆ ಹೀಗೆ ಮಾಡಿ.
Advertisement
Advertisement
ನಿಮಗೆ ಈ ಹ್ಯಾಕ್‌ನಲ್ಲಿ ಅಗತ್ಯ ಬೀಳುವುದು ಕೇವಲ ಎರಡು ರಬ್ಬರ್ ಬ್ಯಾಂಡ್‌ಗಳು. ನೀವು ಪ್ಯಾಂಟ್ ಧರಿಸಿರುವಾಗಲೇ ಆಂಕಲ್‌ನ ಕೊನೆಯಲ್ಲಿ ರಬ್ಬರ್ ಬ್ಯಾಂಡ್ ಅನ್ನು ಪ್ಯಾಂಟ್‌ಗೆ ಬಂಧಿಸಿ. ಹೆಚ್ಚಿಗೆ ಉದ್ದದ ಭಾಗವನ್ನು ಮಡಿಕೆಯಾಗಿ ಒಳ ಭಾಗದೆಡೆ ಮಡಚಿ. ರಬ್ಬರ್ ಬ್ಯಾಂಡ್ ಹೊರ ಭಾಗದಲ್ಲಿ ತೋರುವಂತಿರಬಾರದು. ಎರಡೂ ಕಾಲುಗಳ ಲೆಂತ್ ಅನ್ನು ಮಡಚಿದರೆ ಆಯ್ತು. ನಿಮ್ಮ ಪ್ಯಾಂಟ್‌ಅನ್ನು ಪರ್ಫೆಕ್ಟ್ ಆಗಿ ಆಂಕಲ್ ಲೆಂತ್‌ನಲ್ಲಿ ಈ ರೀತಿಯಾಗಿ ನಿಲ್ಲಿಸಬಹುದು. ಇದನ್ನೂ ಓದಿ: ಮಹಿಳೆಯರು ಚಳಿಗಾಲದಲ್ಲಿ ಧರಿಸಬಹುದಾದ 5 ಸ್ಟೈಲಿಶ್ ಕ್ಯಾಪ್‍ಗಳು
Advertisement
ಓವರ್ ಸೈಸ್ ಶರ್ಟ್ ಅನ್ನು ಪರ್ಫೆಕ್ಟ್ ಫಿಟ್ ಮಾಡಿ:
ಇತ್ತೀಚೆಗೆ ಓವರ್ ಸೈಸ್ ಟಿ-ಶಟ್‌ಗಳ ಟ್ರೆಂಡ್ ನಡೆಯುತ್ತಿದ್ದರೂ ಪರ್ಫೆಕ್ಟ್ ಫಿಟ್‌ಗಳ ಫ್ಯಾಶನ್ ಎಂದಿಗೂ ಹಳೆಯದಾಗುವುದಿಲ್ಲ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ಓವರ್ ಸೈಸ್ ಶರ್ಟ್ಅನ್ನು ಪರ್ಫೆಕ್ಟ್ ಫಿಟ್ ಮಾಡಲು ಒಂದು ಒಳ್ಳೆಯ ಉಪಾಯ ಅದರ ಸ್ಲೀವ್ಸ್ ಅನ್ನು ಚಿಕ್ಕದಾಗಿ ಮಾಡುವುದು. ನಿಮ್ಮ ಶರ್ಟ್‌ನ ಸ್ಲೀವ್ಸ್ ಉದ್ದವಾಗಿದ್ದರೆ ಅದನ್ನು ಮಡಿಕೆಗಳಾಗಿ ಹೊರಭಾಗದಲ್ಲೇ ಮಡಚಿ. ಅದು ಸರಿಯಾಗಿ ಕೂರುತ್ತಿಲ್ಲ ಎಂಬ ಸಮಸ್ಯೆ ಎದುರಾದರೆ, ಮಡಿಕೆಯಾಗಿ ಮಡಚಿದ ರೀತಿಯಲ್ಲೇ ಒಂದೆರಡು ಬಾರಿ ಐರನ್ ಮಾಡಿ. ಈಗ ನಿಮ್ಮ ಶರ್ಟ್ ಪರ್ಫೆಕ್ಟ್ ಫಿಟ್ ಇಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಸಣ್ಣದಾಗಿ ಕಾಣಿಸುತ್ತದೆ.
Advertisement
ಲೂಸ್ ಜೀನ್ಸ್ ಟೈಟ್ ಮಾಡುವ ಹ್ಯಾಕ್:
ನಿಮ್ಮ ಜೀನ್ಸ್ ಲೂಸ್ ಆಗಿದ್ದರೆ, ನಿಮ್ಮ ಸೊಂಟದಲ್ಲಿ ಅದು ಕೂರುತ್ತಿಲ್ಲವೆಂದಾದರೆ ಹೀಗೆ ಮಾಡಿ. ಜೀನ್ಸ್ ವೆಸ್ಟ್ ಬಟನ್ ಹಿಂದಿನ ಬೆಲ್ಟ್ ಲೂಪ್‌ಗೆ ಸಿಕ್ಕಿಸಿ ನಂತರ ಹುಕ್ ಹೋಲ್‌ಗೆ ಬಂಧಿಸಿ. ಈಗ ಲೂಸ್ ಪ್ಯಾಂಟ್ ಟೈಟ್ ಆಗಿರುತ್ತದೆ. ಆದರೆ ಅದರ ಲುಕ್ ಹಾಳಾಯ್ತು ಎಂದು ನಿಮಗೆ ಎನಿಸಿದರೆ ಔಟ್ ಶರ್ಟ್ ಮಾಡಿ. ಇದರಿಂದ ನೀವು ಹ್ಯಾಕ್ ಬಳಸಿರುವ ಸಂಗತಿ ಯಾರಿಗೂ ತಿಳಿಯುವುದಿಲ್ಲ. ಇದನ್ನೂ ಓದಿ: ಯೋಗ ಸಂದೇಶದ ಮೂಲಕ ಹೊಸ ವರ್ಷ ಬರಮಾಡಿಕೊಂಡ ವಿದ್ಯಾರ್ಥಿಗಳು
ಟೈಟ್ ಜೀನ್ಸ್ ಪರ್ಫೆಕ್ಟ್ ಫಿಟ್ ಮಾಡಿ:
ನಿಮ್ಮ ಜೀನ್ಸ್ ಟೈಟ್ ಆಗಿದ್ದರೆ, ಪ್ಯಾಂಟ್‌ನ ಬಕ್ಕಲ್ ಹೋಲ್‌ಗೆ ಸಿಕ್ಕಿಸಲು ಕಷ್ಟವಾಗುತ್ತಿದ್ದರೆ, ಒಂದು ರಬ್ಬರ್ ಬ್ಯಾಂಡ್ ತೆಗೆದುಕೊಂಡು ಹೋಲ್‌ಗೆ ಗಂಟು ಹಾಕಿ ನಂತರ ಬಟನ್‌ಗೆ ಸಿಕ್ಕಿಸಿ. ರಬ್ಬರ್ ಬ್ಯಾಂಡ್ ಕಾಣಿಸದಂತೆ ನಂತರದಲ್ಲಿ ನೀವು ಬೆಲ್ಟ್ ಬಳಸಬಹುದು.
ಕಾಲರ್‌ಅನ್ನು ಪರ್ಫೆಕ್ಟ್ ಆಗಿ ಕೂರಿಸಿ:
ಶರ್ಟ್ ಅಥವಾ ಪೋಲೋ ಟಿ-ಶರ್ಟ್‌ನ ಕಾಲರ್ ಸರಿಯಾಗಿಕೂರದೇ ಇರುವುದು ಪ್ರತಿ ಹುಡುಗರೂ ಎದುರಿಸುವ ಒಂದು ಸಾಮಾನ್ಯ ಸಮಸ್ಯೆ. ಈ ಸಂದರ್ಭದಲ್ಲಿ ನೀವು ಡಬಲ್ ಸೈಡ್ ಸ್ಟಿಕ್ಕಿ ಟೇಪ್ ಬಳಸಿ ಅದನ್ನು ಸರಿಯಾಗಿ ಕೂರುವಂತೆ ಮಾಡಬಹುದು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?
ಒಂದು ವೇಳೆ ನಿಮ್ಮ ಬಳಿ ಡಬಲ್ ಸೈಡ್ ಟೇಪ್ ಇಲ್ಲವೆಂದರೆ, ಅದನ್ನು ಖರೀದಿಸುವ ಸಮಯವೂ ನಿಮ್ಮಲ್ಲಿ ಇಲ್ಲ ಎಂದಾದರೆ, ಒಂದು ಉಪಾಯವಿದೆ. ಶರ್ಟ್‌ನ ಎಲ್ಲಾ ಬಟನ್‌ಗಳನ್ನೂ ಬಂಧಿಸಿ (ಬಟನ್ ಅಪ್ ಮಾಡಿ). ನಿಮ್ಮ ಕಾಲರ್ ತನ್ನಷ್ಟಕೆ ನೀಟ್‌ಆಗಿ ಕೂರುತ್ತದೆ.