ಮಕ್ಕಳಿಗೆ ಇಷ್ಟವಾಗುವ ಬಣ್ಣ, ಬಣ್ಣದ ಫ್ರಾಕ್ – ಆಯ್ಕೆ ಹೇಗಿರಬೇಕು ಗೊತ್ತಾ?

Public TV
2 Min Read
frock 6

ಸಾಮಾನ್ಯವಾಗಿ ಮನೆಗಳಲ್ಲಿ ಪುಟ್ಟ ಹೆಣ್ಣು ಮಕ್ಕಳಿದ್ದರೆ, ಅವಳಿಗೆ ಚೆಂದದ ಡ್ರೆಸ್ ತೊಡಿಸಿ, ಮೇಕಪ್ ಮಾಡಲು ಪೋಷಕರು ಬಯಸುತ್ತಾರೆ. ಅದರಲ್ಲಿಯೂ ಮಗಳಿಗೆ ಡ್ರೆಸ್ ಮಾಡವುದರಲ್ಲಿ ತಾಯಂದಿರಿಗೆ ಅದೇನೋ ಒಂದು ರೀತಿ ಸಖತ್ ಖುಷಿ ನೀಡುತ್ತದೆ. ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳಿಗೆ ಫ್ರಾಕ್, ಶಾರ್ಟ್ಸ್, ಸ್ಕರ್ಟ್ಸ್, ಪಾರ್ಟಿ ಡ್ರೆಸ್, ಸ್ಟಿಚೆಡ್ ಸೀರೆ ಹೀಗೆ ಸಾಕಷ್ಟು ನಾನಾ ರೀತಿಯ ಡ್ರೆಸ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

frock 4

ಸಾಮಾನ್ಯವಾಗಿ ಪುಟ್ ಮಕ್ಕಳು ತಮ್ಮ ತಾಯಿಯನ್ನು ಮಿಮಿಕ್ರಿ ಮಾಡುತ್ತಾರೆ. ತಾಯಿ ಹಿಡಿದುಕೊಳ್ಳುವಂತೆ ಹ್ಯಾಂಡ್ ಬ್ಯಾಗ್ ಹಿಡಿದುಕೊಳ್ಳುವುದು, ಡ್ರೆಸ್ ತೊಡುವುದು ಹೀಗೆ ಅನೇಕ ವಿಚಾರಗಳನ್ನು ಅನುಸರಿಸುತ್ತಾರೆ. ಅಂತಹ ಮಕ್ಕಳಿಗೆ ಡ್ರೆಸ್ ಜೊತೆಗೆ ಹ್ಯಾಂಡ್ ಬ್ಯಾಗ್ ಸಿಕ್ಕರೆ ಫ್ರಾಕ್ ಧರಿಸಲು ಮತ್ತಷ್ಟು ಆಸಕ್ತಿ ತೋರಿಸುತ್ತಾರೆ. ಅಲ್ಲದೇ ಫ್ರಾಕ್ ಧರಿಸುವುದರ ಜೊತೆಗೆ ಹ್ಯಾಂಡ್ ಬ್ಯಾಗ್ ಮಕ್ಕಳಿಗೆ ಚಾರ್ಮ್ ಜೊತೆಗೆ ಸ್ಟೈಲಿಷ್ ಲುಕ್ ನೀಡುತ್ತದೆ. ಅಂತಹ ಮಕ್ಕಳಿಗೆ ಫ್ರಾಕ್ ಜೊತೆಗೆ ಸೂಟ್ ಆಗುವಂತಹ ಒಂದಷ್ಟು ಹ್ಯಾಂಡ್‍ಬ್ಯಾಗ್‍ನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

frock 5

ಫ್ಯಾನ್ಸಿ ಸ್ಲೀವ್‍ಲೆಸ್ ಮಿಡಿ ಫ್ರಾಕ್ ಡ್ರೆಸ್
ಬಿಳಿ ಮತ್ತು ಗ್ರೀನ್ ಶಾರ್ಟ್ ಒನ್-ಪೀಸ್ ಫ್ರಾಕ್ ಉದ್ದವಾದ ಹ್ಯಾಂಡ್ ಬ್ಯಾಗ್‍ನೊಂದಿಗೆ ಸುಂದರವಾಗಿ ಕಾಣಿಸುತ್ತದೆ. ಸ್ಲೀವ್‍ಲೆಸ್ ಹಾಗೂ ಡಬಲ್ ಕಲರ್ ನೆಕ್‍ಲೈನ್ ನಿಂದ ಈ ಫ್ರಾಂಕ್ ವಿನ್ಯಾಸಗೊಳಿಸಲಾಗಿದ್ದು, ಸೊಂಟಕ್ಕೆ ಬೆಲ್ಟ್ ಕೂಡ ನೀಡಲಾಗಿದೆ ಮತ್ತು ಇದರೊಂದಿಗೆ ನೀಡಿರುವ ಹ್ಯಾಂಡ್ ಬ್ಯಾಗ್ ಬ್ಲ್ಯಾಕ್ ಆ್ಯಂಡ್ ಗ್ರೀನ್ ಕಲರ್‍ದಾಗಿದೆ. ಈ ಬ್ಲ್ಯಾಕ್ ಕಲರ್ ಫ್ರಾಕ್‍ಗೆ ಒಂದು ಶೋಲ್ಡರ್ ಸೈಡ್ ಮಾತ್ರ ಸ್ಲೀವ್ಸ್ ನೀಡಲಾಗಿದೆ. ಒಂದು ಸೈಡ್ ನೀಡಲಾಗಿರುವ ಸ್ಲೀವ್ಸ್ ಒಂದು ಕೈ ಕೊನೆಯವರೆಗೂ ಬರುತ್ತದೆ.

frock 2

ಒನ್ ಶೋಲ್ಡರ್ ಸ್ಲೀವ್ಸ್ ಫುಲ್ ಮಿಡಿ
ಸ್ಯಾಟಿನ್ ಬಟ್ಟೆಯಿಂದ ಕಪ್ಪು ಬಾಡಿಕಾನ್ ಫ್ರಾಕ್ ಅನ್ನು ತಯಾರಿಸಲಾಗುತ್ತದೆ. ಒಂದು ಸೈಡ್ ಮಾತ್ರ ಈ ಫ್ರಾಕ್‍ಗೆ ಸ್ಲೀವ್ಸ್ ಇದ್ದು, ಅಂತ್ಯದವರೆಗೂ ಬರುತ್ತದೆ. ಫ್ರಾಕ್‍ನ ಮೇಲಿನ ಭಾಗವನ್ನು ಸೀಕ್ವಿನ್ ಮಾಡಲಾಗಿದೆ ಮತ್ತು ಇದಕ್ಕೆ ಮ್ಯಾಚ್ ಆಗುವಂತಹ ಹ್ಯಾಂಡ್ ಬ್ಯಾಗ್ ನೀಡಲಾಗಿದೆ. ಇದು ಉದ್ದ ಮಿಡಿಯಾಗಿದ್ದು, ಈ ಫ್ರಾಕ್ ಕೈನಲ್ಲಿಯೇ ತೊಳೆಯಬಹುದಾಗಿದೆ.  ಇದನ್ನೂ ಓದಿ: ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

frock 1

ಮೊಣಕಾಲಿನವರೆಗಿನ ಫ್ರಾಕ್
ಈ ಫ್ರಾಕ್ ಕಾಟನ್ ಬಟ್ಟೆಯಿಂದ ತಯಾರಿಸಲಾಗಿದ್ದು, ಫ್ರಾಕ್ ತುದಿಗಳಲ್ಲಿ, ಸೊಂಟದ ಮೇಲೆ ರಫಲ್ಸ್ ನೀಡಲಾಗಿದೆ. ಈ ಸುಂದರವಾಗಿರುವ ಡ್ರೆಸ್‍ಗೆ ನೆಕ್‍ಬ್ಯಾಂಡ್ ಮತ್ತು ಬೆಲ್ಟ್‍ನಂತಿರುವ ಬ್ಯಾಂಡ್ ಸೊಂಟಕ್ಕೆ ನೀಡಲಾಗಿದೆ. ಇದಕ್ಕೆ ನೀಡಿರುವ ಹ್ಯಾಂಡ್ ಬ್ಯಾಗ್ ಹಸಿರು ಮತ್ತು ಕೆಂಪು ಬಣ್ಣಗಳಿಂದ ಕೂಡಿರುತ್ತದೆ.

frock

ಫ್ಲವರ್ ಪ್ರಿಂಟ್‍ನ ಮಲ್ಟಿ ಕಲರ್ ಫ್ರಾಕ್ ಮತ್ತು ಹ್ಯಾಂಡ್ ಬ್ಯಾಗ್
ಹಳದಿ ಮತ್ತು ಗುಲಾಬಿ ಬಣ್ಣದ ಫ್ರಾಕ್ ಇದಾಗಿದ್ದು, ಕಿತ್ತಳೆ ಮತ್ತು ಬಿಳಿ ಬಣ್ಣದ ಫ್ಲವರ್ ಡಿಸೈನ್ ಅನ್ನು ಫ್ರಾಕ್ ಮೇಲೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಕಾಟನ್ ಫ್ರಾಕ್ ಟ್ರೆಡಿಷನಲ್ ಲುಕ್ ನೀಡುತ್ತದೆ. ಇದರ ಹ್ಯಾಂಡ್ ಬ್ಯಾಗ್ ಅನ್ನು ಸಹ ಫ್ರಾಕ್‍ಗೆ ಸೂಟ್ ಆಗುವಂತೆ ಹಳದಿ ಬಣ್ಣದಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಈ ಫ್ರಾಕ್‍ಗೆ ರೌಂಡ್ ನೆಕ್ ಡಿಸೈನ್ ನೀಡಲಾಗಿದ್ದು, ಕೈನಿಂದಲೇ ತೊಳೆಯಬಹುದಾಗಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

Frock 3

Share This Article
Leave a Comment

Leave a Reply

Your email address will not be published. Required fields are marked *