ಬೆಂಗಳೂರು: ಮಹಿಳಾ ಉಪನ್ಯಾಸಕಿಯರು ಇನ್ನು ಮುಂದೆ ಸೀರೆ ಉಟ್ಟು ಪಾಠ ಮಾಡಬೇಕೆಂಬ ಆದೇಶವೊಂದು ಶಿಕ್ಷಣ ಇಲಾಖೆಯಿಂದ ಪ್ರಕಟವಾಗಿದೆ.
ಎಲ್ಲಾ ಖಾಸಗಿ ಅನುದಾನಿತ ಕಾಲೇಜು, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕಿಯರು ಸೀರೆ ಧರಿಸಿ ಬರುವುದು ಕಡ್ಡಾಯ ಎಂದು ಮೈಸೂರು ವಿಭಾಗದ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
Advertisement
ಆದೇಶದಲ್ಲಿ ಏನಿದೆ?
ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರು ತರಗತಿಗಳಲ್ಲಿ ಪಾಠ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾರೆ. ವಾಟ್ಸಪ್ ಮತ್ತು ಫೇಸ್ ಬುಕ್ ನೋಡಿ ಕಾಲ ಕಳೆಯುತ್ತಾರೆ. ಮತ್ತು ಮಹಿಳಾ ಉಪನ್ಯಾಸಕಿಯರು ಚೂಡಿದಾರ್ ಧರಿಸಿ ಕಾಲೇಜಿಗೆ ಬರುತ್ತಾರೆ ಎಂದು ಕೋಲಾರದ ಆರ್. ಸತೀಶ್ ಕುಮಾರ್ 2015ರ ಜುಲೈನಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದ್ದರು.
Advertisement
ಈ ದೂರಿನ ನಂತರ ಕಾಲೇಜಿನ ಆವರಣದಲ್ಲಿ ಈಗಾಗಲೇ ಮೊಬೈಲ್ ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಕಾಲೇಜುಗಳಲ್ಲಿ ಉಪನ್ಯಾಸಕರುಗಳು ತರಗತಿಗಳಲ್ಲಿ ಮೊಬೈಲ್ ಬಳಸುವುದನ್ನು ತಟೆಗಟ್ಟುವಂತೆ ಹಾಗೂ ಮಹಿಳಾ ಉಪನ್ಯಾಸಕರುಗಳು ಸೀರೆಯನ್ನು ಧರಿಸಿ ಕಾಲೇಜಿಗೆ ಬರುವಂತೆ ಅಗತ್ಯ ಕ್ರಮ ತಗೆದುಕೊಳ್ಳುವಂತೆ ತಿಳಿಸಿ ತೆಗೆದುಕೊಂಡ ಕ್ರಮದ ಬಗ್ಗೆ ವರದಿಯನ್ನು ಕಳುಹಿಸಿಕೊಡಬೇಕು. ಮೊಬೈಲ್ ಫೋನ್ ಜೊತೆಗೆ ಡ್ರೆಸ್ ಕೋಡ್ ನಿಯಮವು ಸಹ ಜಾರಿಗೆ ಮಾಡಲಾಗಿದೆ ಎನ್ನುವ ಅಂಶ ಈ ಆದೇಶದಲ್ಲಿದೆ.
Advertisement
ಮೊಬೈಲ್ ನಿಷೇಧ ಸರಿ ಆದ್ರೆ ಡ್ರೆಸ್ ಕೋಡ್ ಯಾಕೆ? ನಾವು ಈ ರೀತಿಯ ಡ್ರೆಸ್ ಧರಿಸಬೇಕೆಂದು ಇಲಾಖೆ ನಿರ್ಧರಿಸುವುದು ಸರಿಯಲ್ಲ ಎಂದು ಮಹಿಳಾ ಪದವಿ ಕಾಲೇಜು ಪ್ರಾಧ್ಯಾಪಕರ ಸಂಘದ ಉಪಾಧ್ಯಕ್ಷೆ ಕಾವಲಮ್ಮ ಪ್ರತಿಕ್ರಿಯಿಸಿದ್ದಾರೆ.
Advertisement