ಬೆಂಗಳೂರು; ನಗರದಲ್ಲಿಂದು ಪಬ್ಲಿಕ್ ಟಿವಿ ಡ್ರೀಮ್ ಸ್ಕೂಲ್ ಎಕ್ಸ್ ಪೋಗೆ ಚಾಲನೆ ನೀಡಲಿದೆ. ಈ ಎಕ್ಸ್ ಪೋದಲ್ಲಿ ಏನೆಲ್ಲಾ ಸಿಗ್ಬೋದು ಅನ್ನೋದನ್ನ ನೀವು ಸಹ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ನಿಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು..? ಶಿಕ್ಷಣ ನೀಡುವ ಶಾಲೆಗಳು ಯಾವುದು..? ಎಲ್ಲಿ ಓದಿದರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು..? ಈ ರೀತಿ ಯೋಚನೆ ಮಾಡ್ತಿರೋ ಪೋಷಕರಿಗೆ ಡ್ರೀಮ್ ಸ್ಕೂಲ್ ಎಕ್ಸ್ ಪೋವನ್ನು ಪಬ್ಲಿಕ್ ಟಿವಿ ಆಯೋಜಿಸಿದೆ.
Advertisement
ಪಬ್ಲಿಕ್ ಟಿವಿ ಕಳೆದ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ವಿದ್ಯಾಪೀಠ ಕಾರ್ಯಕ್ರಮ ಆಯೋಜಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ವಿವಿಧ ಕೋರ್ಸ್ ಗಳ ಬಗ್ಗೆ, ಶಿಕ್ಷಣ ಸಂಸ್ಥೆಗಳ ಮಾಹಿತಿ ಪಡೆದಿದ್ದರು. ಈ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿ ಡ್ರೀಮ್ ಸ್ಕೂಲ್ ಎಕ್ಸ್ ಪೋ ಆಯೋಜಿಸಿದೆ. ಇಂದು ಹಾಗೂ ನಾಳೆ ಬೆಂಗಳೂರಿನ ಕುಮಾರ್ ಕೃಪ ರಸ್ತೆಯ ಲಲಿತ್ ಅಶೋಕ್ ಹೋಟೆಲ್‍ನ ಕಾಳಿಂಗ ಹಾಲ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಡ್ರೀಮ್ ಸ್ಕೂಲ್ ಎಕ್ಸ್‌ಪೋಗೆ ಭೇಟಿ ನೀಡಿ ಪರಿಹಾರವನ್ನು ಕಂಡುಕೊಳ್ಳಿ
Advertisement
2 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಹೆಸರಾಂತ ಅಂತರಾಷ್ಟ್ರೀಯ ಶಾಲೆಗಳು, ವಸತಿ ಶಾಲೆಗಳು, ಕಿಂಡರ್ ಗಾರ್ಡನ್, ಮಾಂಟೆಸ್ಸರಿ ಸ್ಕೂಲ್‍ಗಳ, ಮಾಹಿತಿ ಹಾಗೂ ವೈಜ್ಞಾನಿಕ ಕಲಿಕೆಗೆ ನೆರವಾಗುವ ಎಲ್ಲ ಮಾಹಿತಿಗಳನ್ನು ಒಂದೇ ವೇದಿಕೆ ಸಿಗಲಿದೆ.
Advertisement
ಈ ಎಕ್ಸ್ ಪೋದಲ್ಲಿ 20ಕ್ಕೂ ಹೆಚ್ಚು ಶಾಲೆಗಳು ವಿಶೇಷ ಉಪನ್ಯಾಸಗಳು, ಡ್ರಾಯಿಂಗ್ ಸ್ಪರ್ಧೆ, ಕ್ವಿಜ್, ಮ್ಯಾಜಿಕ್ ಶೋ, ಸ್ಥಳದಲ್ಲಿ ಅಡ್ಮಿಷನ್ಸ್ ಸಹ ಮಾಡಬಹುದು. ಬೆಳಗ್ಗೆ 9.30ರಿಂದ ಸಂಜೆ 6:30ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv