Connect with us

Bengaluru City

ಮತ್ತೆ ಶುರು ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಹವಾ!

Published

on

ಬೆಂಗಳೂರು: ರಿಯಾಲಿಟಿ ಶೋಗಳಲ್ಲಿ ನಿರೀಕ್ಷೆಗೂ ಮೀರಿ ತನ್ನದೇ ಸಂಚಲನ ಮೂಡಿಸಿದ ವಾಹಿನಿ ಜೀ ಕನ್ನಡ ಪ್ರೇಕ್ಷಕರ ಬೇಕು ಬೇಡಗಳನ್ನು ಅರ್ಥೈಸಿಕೊಂಡು ಇಲ್ಲಿಯವರೆಗೂ ಹತ್ತು ಹಲವು ಸದಭಿರುಚಿಯ ವಿಭಿನ್ನ ಪ್ರಯೋಗಗಳನ್ನು ಮಾಡುತ್ತ ಹೊಸ ದಾಖಲೆಗಳಿಗೆ ನಾಂದಿ ಹಾಡುತ್ತಿದೆ. ರಿಯಾಲಿಟಿ ಶೋ ಚಿತ್ರೀಕರಣ ಮತ್ತು ಪ್ರಸಾರ ಎರಡೂ ಜನರಿಂದ ದೂರವಾಗಿ ನಡೆಯುವಂತ ಪ್ರಕ್ರಿಯೆ. ಇಲ್ಲಿ ಪ್ರೇಕ್ಷಕರಿಗೂ ನಟರಿಗೂ ನೇರ ಮುಖಾಮುಖಿ ಇರುವುದಿಲ್ಲ. ಆದರೆ ರಂಗಭೂಮಿ ಜನರ ನೇರಸಂಪರ್ಕಕ್ಕೆ ಮತ್ತು ಸಂವಹನಕ್ಕೆ ಒಳಪಡುವಂತದ್ದು.

ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ ಮುಗ್ಧ ಮನಸ್ಸಿನ ಮಕ್ಕಳ ನಟನಾ ಕೌಶಲ್ಯಕ್ಕೆ ಮತ್ತು ಅವರ ಅಭಿನಯ ಸಾಮರ್ಥ್ಯಕ್ಕೆ ವೇದಿಕೆಯನ್ನು ಒದಗಿಸುವ ಒಂದು ಉತ್ತಮ ಶೋ. ಈ ಶೋ ಕೇವಲ ಮನರಂಜನೆಯನ್ನಷ್ಟೇ ನೀಡದೇ, ವಿನೂತನ, ವಿಭಿನ್ನ ಪ್ರಯೋಗಗಳನ್ನು ಮಾಡಿ ಹೊಸ ದಾಖಲೆಗಳಿಗೆ ನಾಂದಿ ಹಾಡಿದೆ. ಅಭಿನಯದ ಜೊತೆಗೆ ರಂಗಭೂಮಿಯ ವಿವಿಧ ಮಜಲುಗಳನ್ನು ಪರಿಚಯಿಸುವುದರ ಜೊತೆಗೆ ಸಾಮಾಜಿಕ ಸಂದೇಶಗಳನ್ನು ನೀಡುತ್ತ ಪ್ರೇಕ್ಷಕರಿಂದ ಇದೊಂದು ಅದ್ಭುತವಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕನ್ನಡ ಚಿತ್ರರಂಗಕ್ಕೆ ಹತ್ತು ಹಲವು ಬಾಲ ಕಲಾವಿದರನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಆರಂಭವಾದ ಡ್ರಾಮಾ ಜ್ಯೂನಿಯರ್ಸ್ ಸೀಸನ್ 1 ಮತ್ತು ಸೀಸನ್ 2 ಎಂಬ ಅತ್ಯದ್ಭುತ ಯಶಸ್ಸಿನ ಕಾರ್ಯಕ್ರಮವನ್ನು ಪರಿಚಯಿಸಿದ್ದಲ್ಲದೇ, ಅದು ಕರ್ನಾಟಕವಲ್ಲದೇ ದೇಶ ವಿದೇಶದ ಕನ್ನಡಿಗರಲ್ಲೆರೂ ಅದರ ಒಂದು ಭಾಗವಾಗುವಂತೆ ಮಾಡಿದ ಕೀರ್ತಿ ಜೀ ವಾಹಿನಿಗೆ ಸಲ್ಲುತ್ತದೆ. ಅದರ ಮುಂದುವರಿದ ಅಧ್ಯಾಯವೆಂಬಂತೆ ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಆರಂಭಗೊಳ್ಳುತ್ತಿದ್ದು ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಸಾಕ್ಷಿಯಾಗುತ್ತಿದೆ.

ಕರ್ನಾಟಕದಾದ್ಯಂತ 30 ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಅಭಿನಯ ಕೌಶಲ್ಯದ ಹಿನ್ನೆಲೆಯುಳ್ಳ 30 ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದು, ಆ 30 ಮಕ್ಕಳು ಮೆಗಾ ಆಡಿಷನ್ ನಲ್ಲಿ ಭಾಗಿಯಾಗಲು ತಯಾರಾಗಿದ್ದಾರೆ. ಹೊಸ ಹೊಸ ಪ್ರಯೋಗಗಳು, ಹೊಸ ಪ್ರಯತ್ನದೊಂದಿಗೆ ಹಿಂದೆಂದೂ ನೋಡಿರದಂತ, ಹಿಂದೆಂದೂ ಕೇಳಿರದಂತ ಮನರಂಜನೆ ಈ ಒಂದು ಕಾರ್ಯಕ್ರಮದಲ್ಲಿ ನಿಮಗಾಗಿ ಎದುರುಗೊಳ್ಳುತ್ತಿದೆ.

ಇನ್ನುಳಿದಂತೆ ಕಾರ್ಯಕ್ರಮಕ್ಕೆ ಅಂದದ ಮೆರುಗೆಂಬಂತೆ ತೀರ್ಪುಗಾರರಾಗಿ ಜೂಲಿ ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು ಹಾಗು ವಿಜಯರಾಘವೇಂದ್ರ ಇದ್ದಾರೆ. ಮಕ್ಕಳಿಂದ ಹಿಡಿದು ವಯೋಮಾನದವರಿಗೆಲ್ಲರಿಗು ಪ್ರೀತಿ ಪಾತ್ರರಾದ ಮಾಸ್ಟರ್ ಆನಂದ್ ತಮ್ಮ ಮಾತಿನ ಚಟಾಕಿಯ ಮೂಲಕ ನಿರೂಪಣೆಯನ್ನು ನೀಡಲಿದ್ದಾರೆ. ಅಂದುಕೊಂಡಿರುವಂತೆ ಎಲ್ಲವೂ ಅತ್ಯದ್ಭುತವಾಗಿ ಸಜ್ಜುಗೊಳ್ಳುತ್ತಿದ್ದು, ಪ್ರೇಕ್ಷಕರಿಗೆ ವಿವಿಧ ಆಯಾಮಗಳಲ್ಲಿ ಮನರಂಜನೆ ನೀಡಲು ಸಜ್ಜಾಗಿ ಬರ್ತಾ ಇದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್ 3 ಸ್ಪರ್ಧಿಗಳು ಇನ್ನು ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ತಪ್ಪದೆ ಹಾಜರಾಗುತ್ತಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *