ಡ್ರಾಮಾ ಜ್ಯೂನಿಯರ್ ಪಟ್ಟ ಪಡೆದ ಸಮೃದ್ಧಿ: ಲಕ್ಷ ಲಕ್ಷ ಬಹುಮಾನ ಪಡೆದ ಡ್ರಾಮಾ ಕ್ವೀನ್

Public TV
2 Min Read
FotoJet 3 20

ರ್ನಾಟಕದ ಅತಿ ದೊಡ್ಡ ಮಕ್ಕಳ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆ ಗೆ ಅದ್ಧೂರಿಯಾಗಿ ತೆರೆ ಬಿದ್ದಿದೆ . ಜೀ ಕನ್ನಡ ವಾಹಿನಿ ಹೆಮ್ಮೆಯಿಂದ ಪ್ರಸ್ತುತ ಪಡಿಸಿದ್ದ ಈ ಶೋ ಸತತ 23 ವಾರಗಳ ಕಾಲ ಇಡೀ ಕರುನಾಡನ್ನು ರಂಜಿಸಿ ಇಂದು ಕರ್ನಾಟಕದ ಮನೆಮನೆಯ ಮುದ್ದಾದ ಕಾರ್ಯಕ್ರಮವಾಗಿದೆ. ಇನ್ನು ಈ ಸೀಸನ್ ನ ವಿಜೇತರಾಗಿ ಕುಂದಾಪುರದ ಸಮೃದ್ಧಿ ಎಸ್ ಮೊಗವೀರ್ ರವರು ಹೊರಹೊಮ್ಮಿದ್ದಾರೆ.

FotoJet 2 38

ತಮ್ಮ ಅದ್ಭುತ ಅಭಿನಯದ ಮೂಲಕ ಮನಸೂರೆಗೊಂಡಿದ್ದ 15 ಮಕ್ಕಳು ಫೈನಲ್ ಗೆ ಆಯ್ಕೆಯಾಗಿದಿದ್ದು ವಿಶೇಷವಾಗಿತ್ತು. ಅವರಲ್ಲಿ ನಾಲ್ಕು ಮಕ್ಕಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದ್ದು ತ್ರಿವಳಿ ರತ್ನಗಳು ಉತ್ತಮರಲ್ಲಿ ಅತ್ಯುತ್ತಮರನ್ನು ವಿಜೇತರನ್ನಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಮಗುವಿಗೂ ಪದಕ ನೀಡುವ ಮೂಲಕ ಉಳಿದ 11 ಪ್ರತಿಭೆಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಗುಣಮಟ್ಟ ಹಾಗು ವಿಶೇಷತೆಗೆ ಸಾಕ್ಷಿಯಂತೆ  ಇಬ್ಬರು ಪ್ರತಿಭೆಗಳು ಚಾಮರಾಜನಗರದ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ಸಮಬಲ ಸಾಧಿಸಿಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ ಹಾಗು ತಲಾ ಮೂರು ಲಕ್ಷ ರೂಪಾಯಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

FotoJet 4 13

ಇನ್ನು  ಮಂಗಳೂರಿನ ವೇದಿಕ್ ಅವರು ಮೂರನೇ ಸ್ಥಾನ ಪಡೆದು ಜನಮೆಚ್ಚುಗೆಗಳಿಸಿದರು. ಈ ಸೀಸನ್ ವಿಶಿಷ್ಟ ಪ್ರತಿಭೆಯಾಗಿ ವೇದಿಕೆಗೆ ಆಗಮಿಸಿದ ರಾಯಚೂರಿನ ಕುಳ್ಳ ಸಿಂಗಂ ಖ್ಯಾತಿಯ ಅರುಣ್ ಅವರಿಗೆ ವಿಶೇಷ ಬಹುಮಾನವಾಗಿ ಒಂದು ಲಕ್ಷ ರುಪಾಯಿ ನಗದು ಬಹುಮಾನವನ್ನು ಸಹ ನೀಡಿ  ವೇದಿಕೆ ಸಾರ್ಥಕತೆ ಮೆರೆಯಿತು. ಅಷ್ಟೇ ಅಲ್ಲದೆ ಈ ಎಲ್ಲಾ ಬಹುಮಾನಗಳು ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಆಗುತ್ತಿರುವುದು ವಿಶೇಷ. ಈ ಶೋ ನಿರ್ದೇಶಕ ಹಾಗು ಜೀ ಕನ್ನಡ ವಾಹಿನಿಯ ನಾನ್ ಫಿಕ್ಷನ್ ಮುಖ್ಯಸ್ಥರಾದ ಶರಣಯ್ಯ ಅವರು ಮಾತನಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದ ಎಲ್ಲಾ ಕಾರ್ಮಿಕರನ್ನು, ಮೆಂಟರ್ ರನ್ನು, ತೀರ್ಪುಗಾರರನ್ನು , ಕ್ಯಾಮರಾ ಮ್ಯಾನ್ಗಳನ್ನು, ಸ್ಕಿಟ್ ಬರಹಗಾರರಿಗೆ ಪ್ರಶಂಸೆ ನೀಡಿದರು.

FotoJet 1 46

ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ರವರು ಮಾತನಾಡಿ ಎಲ್ಲಾ ಮಕ್ಕಳಿಗೂ ಅಭಿನಂದಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿ ವೀಕ್ಷಕರನ್ನು ನಕ್ಕು ನಗಿಸಲು  ಕಾಮಿಡಿ ಕಿಲಾಡಿಗಳು ಸೀಸನ್ 4 ಶುರುವಾಗಲಿದೆ ಎಂದು ಮಾಹಿತಿ ನೀಡಿದರು.  ಜೊತೆಗೆ  ಎಂದಿನಂತೆ ಈ ಸೀಸನ್ ನಲ್ಲೂ  ನಿರ್ದೇಶಕ  ಯೋಗರಾಜ್ ಭಟ್,  ನವರಸನಾಯಕ ಜಗ್ಗೇಶ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ರವರು ತೀರ್ಪುಗಾರರಾಗಿ ಮುಂದುವರೆಯುತ್ತಾರೆ ಜೊತೆಗೆ ಮಾಸ್ಟರ್ ಆನಂದ್  ನಿರೂಪಕರಾಗಿರುತ್ತಾರೆ ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *