ಬೆಂಗಳೂರು: ಶುದ್ಧ ಕುಡಿಯುವ ನೀರಿನ (Drinking Water) ಘಟಕದಲ್ಲಿ ಮೋರಿ ನೀರು ಮಿಕ್ಸ್ ಆಗಿ ಕುಡಿದ ಜನ್ರ ಆರೋಗ್ಯ ಏರುಪೇರಾಗಿದೆ. ನಮ್ಗೆನಾಗುತ್ತೋ ಅಂತ ಆಸ್ಪತ್ರೆಗಳತ್ತ ಹೋಗ್ತಿದ್ದಾರೆ. ಇಷ್ಟೆಲ್ಲಾ ಅವಾಂತರ, ಆತಂಕಕ್ಕೆ ಕಾರಣವಾಗಿದ್ದು ರಾಜಾಜಿನಗರ ಕ್ಷೇತ್ರದ ಶಿವನಗರ ವಾರ್ಡ್‍ನಲ್ಲಿ.
Advertisement
ಚರಂಡಿ (Drainage) ಯ ಕೊಳಚೆಯಲ್ಲಿರೋ ಬೊರ್ವೆಲ್ (Borewell) ಮೂಲಕವೇ ಈ ವಾಟರ್ ಪ್ಲಾಂಟ್ ಗೆ ನೀರು ಪೂರೈಕೆಯಾಗುತ್ತೆ. ವಾಟರ್ ಪ್ಲಾಟ್ ನಲ್ಲಿ ಶುದ್ಧೀಕರಣವಾದ ಬಳಿಕ, 5 ರೂಪಾಯಿ ಕಾಯಿನ್ ಮೂಲಕ ಜನ ನೀರನ್ನು ಹಿಡಿದುಕೊಳ್ತಾರೆ. ಆದರೆ ಕಳೆದ ಎಂಟು ದಿನಗಳಿಂದ ಮೋರಿಯ ನೀರು, ಬೊರ್ವೆಲ್ ನೀರಿಗೆ ಮಿಶ್ರಣವಾಗಿ, ವಾಟರ್ ಪ್ಲಾಂಟ್ ಗೆ ಸಪ್ಲೈ ಆಗ್ತಿದೆ. ವಿಷ್ಯ ಗೊತ್ತಿಲ್ದೇ ಕುಡಿದ ಏರಿಯಾದ ಜನ್ರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮೈ- ಕೈ ನೋವು, ಗಂಟಲು ನೋವು, ತಲೆಬಾರ ದಂತಹ ಸಮಸ್ಯೆಗಳಿಗೆ ಒಳಗಾಗಿದ್ದಾರೆ.
Advertisement
Advertisement
ವಾಟರ್ ಪ್ಲಾಂಟ್ ನೊಳಗೆ, ನೀರು ಶುದ್ಧೀಕರಣ ಆಗುವ ಸಾಧನಗಳಲ್ಲಿ ಪಾಚಿ ಕಟ್ಟಿಕೊಂಡಿದ್ದು, ನೀರು ಸೋರಿಕೆಯಾಗ್ತಿದೆ. ನೀರು ಕೊಳಚೆ ವಾಸನೆ ಬರ್ತಿದ್ದು, ಜನ ಬಾಟಲ್ ಗಳಲ್ಲಿ ನೀರನ್ನ ಹಿಡ್ಕೊಂಡು ವಾಟರ್ ಪ್ಲಾಂಟ್ ಸಿಬ್ಬಂದಿಗೆ ಕೊಡುತ್ತಿದ್ದಾರೆ. ಇಷ್ಟು ದಿನ ವಿಷ್ಯ ಗೊತ್ತಿಲ್ದೇ ನೀರು ಕುಡಿದ ಜನ ಇದೀಗಾ ಸ್ಥಳೀಯ ಶಾಸಕ ಸುರೇಶ್ ಕುಮಾರ್ ಮೇಲೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಸಿಲಿನ ಬೇಗೆಗೆ ಕಂಗಾಲಾದ ಕರಾವಳಿ ಜನ- ಉ.ಕ ಜಿಲ್ಲೆಯ 150 ಗ್ರಾಮಗಳಲ್ಲಿ ನೀರಿನ ಅಭಾವ
Advertisement
ಘಟನೆಯ ಗಂಭೀರತೆಯನ್ನ ಅರಿತ ನಮ್ಮ ವರದಿಗಾರರು ಸ್ಥಳದಿಂದಲೇ ಕ್ಷೇತ್ರದ ಶಾಸಕರಿಗೆ ಕರೆ ಮಾಡಿದ್ರು. ಕರೆ ಮಾಡಿದ ಅರ್ಧ ಘಂಟೆಯಲ್ಲಿ ಸ್ಥಳಕ್ಕೆ BBMP, BWSSB, ವಾಟರ್ ಪ್ಲಾಂಟ್ ಸಿಬ್ಬಂದಿ ಬಂದು ಕಾಮಗಾರಿ ಶುರು ಮಾಡಿದ್ರು. ಪಬ್ಲಿಕ್ ಟಿವಿ ಈ ಸೂಪರ್ ಫಾಸ್ಟ್ ಇಂಪ್ಯಾಕ್ಟ್ ಗೆ ಜನ ಧನ್ಯವಾದ ತಿಳಿಸಿದ್ರು.
ನಗರದಲ್ಲಿ ಬಹುತೇಕ ವಾಟರ್ ಪ್ಲಾಂಟ್ ಗಳಲ್ಲಿ ನೀರು ರುಚಿಯಾಗಿ ಇಲ್ಲದಿರೋದು, ವಾಸನೆ ಬರೋ ಪ್ರಕರಣಗಳು ಆಗಾಗ ಬೆಳಕಿಗೆ ಬರ್ತಿರುತ್ತೆ. ಅದೇನೆ ಆಗ್ಲಿ ಶುದ್ದಿಕುಡಿಯುವ ನೀರನ ಘಟಕಗಳಲ್ಲಿ ನೀರು ಕುಡಿಯುವ ಮುನ್ನ ನೀವೊಮ್ಮೆ ಹುಷಾರ್.