ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ

Advertisements

ಕಲಬುರಗಿ: ಚರಂಡಿ ವಿಷಯಕ್ಕೆ ಆರಂಭಗೊಂಡ ಜಗಳದಲ್ಲಿ ಓರ್ವ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಆರು ಜನರು ಗಾಯಗೊಂಡ ದಾರುಣ ಘಟನೆ ಚಿತ್ತಾಪುರ ತಾಲೂಕಿನ ಮುಡಬೂಳ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ್ ಸಂಗಾವಿ(32) ಕೊಲೆಯಾದ ಯುವಕ. ಮುಡಬೂಳ ಗ್ರಾಮದಲ್ಲಿ ಮನೆಯ ಎದುರಿನ ಚರಂಡಿ ವಿಷಯವಾಗಿ ಭಾನುವಾರ ಮಧ್ಯಾಹ್ನ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಮತ್ತೆ ಅದೇ ವಿಷಯವಾಗಿ ರಾತ್ರಿಯೂ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ. ಪರಿಣಾಮ ಕೆಲವರು ಸಂಗಾವಿ ಕುಟುಂಬದವರ ಮೇಲೆ ಮಾರಕಾಸ್ತ್ರ, ಕಲ್ಲು ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮನೆಯ ಬಾಗಿಲನ್ನು ಕಲ್ಲುಗಳಿಂದ ಹೊಡೆದು ಮುರಿದು ಹಾಕಿದ್ದಾರೆ. ಇದನ್ನೂ ಓದಿ: ಸರಣಿ ಅಪಘಾತ: ಬಿಎಂಟಿಸಿ, ಟೆಂಪೋ ನಡುವೆ ಸಿಲುಕಿದ ಆಟೋ 

Advertisements

ಸಂಗಾವಿಯನ್ನು ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಅವರ ಮನೆಯಲ್ಲಿದ್ದ ಆರು ಜನರ ಸ್ಥಿತಿ ಗಂಭೀರ ಗಾಯವಾಗಿದ್ದು, ಅವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮನೆಯ ತುಂಬೆಲ್ಲಾ ರಕ್ತದ ಹೊಳೆ ಹರೆದಾಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ನಂತರ ದುಷ್ಕರ್ಮಿಗಳು ತೆಲೆ ಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಇದನ್ನೂ ಓದಿ:  ದಿನಗೂಲಿ ನೌಕರರ ಮಕ್ಕಳಿಗಾಗಿ ಬಿಬಿಎಂಪಿಯಿಂದ ರಾತ್ರಿ ಸ್ಕೂಲ್

Advertisements

ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisements
Exit mobile version