ಬೀಜಿಂಗ್: ಮುಂದಿನ ತಿಂಗಳಿಂದ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾ ಆಯೋಜನೆಗೆ ಚೀನಾ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾದ ಡ್ರ್ಯಾಗನ್ ಹಣ್ಣುಗಳಲ್ಲೂ ಕೊರೊನಾ ವೈರಸ್ ಅಂಶ ಇರುವುದು ಪತ್ತೆಯಾಗಿದೆ.
ಈ ಹಣ್ಣುಗಳನ್ನು ಖರೀದಿಸಿದ ಎಲ್ಲಾ ಸೂಪರ್ ಮಾರ್ಕೆಟ್‍ಗಳನ್ನು ಚೀನಾ ಸರ್ಕಾರ ಬಂದ್ ಮಾಡಿಸಿದೆ. ಅಲ್ಲದೆ ಜನವರಿ 26ರವರೆಗೆ ವಿಯೆಟ್ನಾಂನಿಂದ ಹಣ್ಣುಗಳ ಆಮದಿಗೆ ನಿರ್ಬಂಧ ಹೇರಲಾಗಿದೆ. ಈ ಹಣ್ಣು ಖರೀದಿಸಿರುವವರು ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ಸೂಚಿಸಿಲಾಗಿದೆ. ಇದನ್ನೂ ಓದಿ: ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?
Advertisement
Advertisement
ಝೇಜಿಯಾಂಗ್ ಮತ್ತು ಜಿಯಾಂಗ್‍ಕ್ಸಿ ಪ್ರಾಂತ್ಯ ಸೇರಿದಂತೆ 9 ನಗರಗಳಿಂದ ಸಂಗ್ರಹಿಸಲಾದ ಡ್ರ್ಯಾಗನ್ ಹಣ್ಣುಗಳಲ್ಲಿ ವೈರಸ್ ಇರುವುದು ಪತ್ತೆಯಾಗಿರುವುದು ಖಚಿತವಾಗಿದೆ ಎಂದು ವರದಿಯೊಂದು ತಿಳಿಸಿದೆ. ಇದನ್ನೂ ಓದಿ: ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್
Advertisement
Advertisement
ಹಣ್ಣುಗಳಿಂದ ಕೊರೊನಾ ವ್ಯಾಪಿಸುವ ಬಗ್ಗೆ ಸಾಕ್ಷ್ಯಾಧಾರಗಳು ಇಲ್ಲ. ಆದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವಿದೇಶದಿಂದ ಆಮದು ಮಾಡಿಕೊಳ್ಳಲಾದ ಎಲ್ಲಾ ಆಹಾರ ಪದಾರ್ಥಗಳು ಮತ್ತು ಹಣ್ಣುಗಳನ್ನು ತೀವ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ.