ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜಕೀಯ ಜೀವನದ ಕೊನೆ ಆಟದಲ್ಲಿ ಮಗನ ಗೆಲುವಿಗೆ ಸಂಕಲ್ಪ ತೊಟ್ಟಿರುವಂತಿದೆ. ಮತ್ತೊಂದೆಡೆ ಡಾ.ಯತೀಂದ್ರ (Dr. Yathindra) ಸಿದ್ದರಾಮಯ್ಯ ಪರವಾಗಿ ಅಖಾಡಕ್ಕೆ ಇಳಿದಿದ್ದರಂತೆ.
ಅಪ್ಪನ ರಾಜಕೀಯ ಉತ್ತುಂಗದ ಜೊತೆಗೆ ತಮ್ಮ ರಾಜಕೀಯ ಭವಿಷ್ಯದ ಸೇಫ್ ಗೇಮ್‍ಗೆ ಪ್ಲಾನ್ ಮಾಡಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಅಲ್ಲೊಂದು ಕೈ ನೋಡೋಣ ಆಗದಿದ್ದರೆ ಇದು ಇದ್ದೇ ಇದೆ ಎಂಬ ಹೊಸ ಲೆಕ್ಕಾಚಾರ ಶುರು ಮಾಡಿದ್ದಾರಂತೆ.
Advertisement
Advertisement
ತಂದೆ ಸಿದ್ದರಾಮಯ್ಯ ಪರವಾಗಿ ಡಾ.ಯತೀಂದ್ರ ಅಖಾಡಕ್ಕಿಳಿದಿದ್ದಾರೆ. ತಂದೆಗೆ ಕೊನೆ ಚುನಾವಣೆಯಲ್ಲಿ ವರುಣಾ ಕ್ಷೇತ್ರ (Varuna Constituency) ಬಿಟ್ಟು ಕೊಡುವ ಸಾಧ್ಯತೆ ಇದೆ. ಅತ್ತ ಕೋಲಾರದ್ಲೂ ಸೀಕ್ರೆಟ್ ಸರ್ವೇ ಆರಂಭಿಸಿರುವ ಯತೀಂದ್ರ, ಕೋಲಾರದಲ್ಲಿ ಸಿದ್ದರಾಮಯ್ಯ ಸೇಫ್ ಆದ್ರೆ ವರುಣಾದಲ್ಲಿ ಯತೀಂದ್ರ ಸೇಫ್ ಎಂಬ ಲೆಕ್ಕಾಚಾರವಿದೆ. ಇದನ್ನೂ ಓದಿ: ರಾಜಕೀಯ ಎದುರಾಳಿಗಳಿಗೆ ಸಿದ್ದರಾಮಯ್ಯ ಪ್ರತ್ಯಾಸ್ತ್ರ- ಕ್ಷೇತ್ರ ಘೋಷಣೆ ಮುಂದೂಡಿಕೆಗೆ ಮಾಸ್ಟರ್‌ಪ್ಲಾನ್
Advertisement
ಸಿದ್ದರಾಮಯ್ಯ ಕೊನೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನ ಅಪ್ಪನಿಗೆ ಬಿಟ್ಟು ಕೊಡಲು ಮುಂದಾಗಿದ್ದಾರೆ. ಅದರ ಮಧ್ಯದಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆಗೂ ಒತ್ತಡ ಹೆಚ್ಚುತ್ತಿದೆ. ಹಾಗೇನಾದರು ಸಿದ್ದರಾಮಯ್ಯಗೆ ಕೋಲಾರ ಸೇಫಾಗಿದೆಯಾ….?, ಇದನ್ನ ತಿಳಿಯರು ಕೋಲಾರದಲ್ಲಿ ಡಾ.ಯತೀಂದ್ರ ಸೀಕ್ರೆಟ್ ಸರ್ವೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
Advertisement
ಅಪ್ಪನ ವಿಚಾರದಲ್ಲಿ ರಿಸ್ಕ್ ತಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಕೋಲಾರದಲ್ಲಿ ಡಾ.ಯತೀಂದ್ರ ಟೀಂ ಕಂಪ್ಲೀಟ್ ಸರ್ವೆ ನಡೆಸುತ್ತಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಸೇಫಾದರೆ ವರುಣಾದಲ್ಲಿ ಯತೀಂದ್ರ ಸೇಫ್ ಅನ್ನೋದು ಈ ಸರ್ವೆಯ ಲೆಕ್ಕಾಚಾರವಾಗಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಸಂಪೂರ್ಣ ಸೇಫ್ ಎನ್ನಿಸಿದರೆ ಯತೀಂದ್ರ ವರಿಣಾದಿಂದ ಸ್ಪರ್ಧೆ ಮಾಡಬಹುದು. ಇಲ್ಲದಿದ್ದರೆ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
ಅಪ್ಪನಿಗಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾದ ಡಾ.ಯತೀಂದ್ರ ಕೊನೆಯ ಪ್ರಯತ್ನವಾಗಿ ಕೋಲಾರದಲ್ಲಿ ಸೀಕ್ರೆಟ್ ಸರ್ವೆ ಆರಂಭಿಸಿದ್ದಾರೆ. ಹಾಗೇನಾದರೂ ಸರ್ವೆ ಪ್ರಕಾರ ಕೋಲಾರ ಸೇಫ್ ಆದರೆ ಅಪ್ಪ ಮಗ ಇಬ್ಬರ ಸ್ಪರ್ಧೆ ಬಗ್ಗೆಯೂ ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.