ತುಮಕೂರು: ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಿವಕುಮಾರ ಸ್ವಾಮೀಜಿಗಳು ಮಧ್ಯಾಹ್ನ 1.40 ಕ್ಕೆ ಮಠ ತಲುಪಿದ್ದಾರೆ.
ಮಠಕ್ಕೆ ಆಗಮಿಸಿದ ಶ್ರೀಗಳನ್ನು ಹಳೆ ಮಠದ ಪ್ರವೇಶ ದ್ವಾರದಿಂದ ವ್ಹೀಲ್ ಚೇರ್ ಮೂಲಕ ಕೋಣೆಗೆ ಕರೆದೊಯ್ಯಲಾಯಿತು. ಶ್ರೀಗಳು ಗುಣಮುಖರಾಗಿ ಮಠಕ್ಕೆ ಮರಳುತ್ತಿರುವ ಸಂಗತಿ ತಿಳಿದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ರು. ಕಾರಿನಿಂದ ಇಳಿಯುತ್ತಿದ್ದಂತೆ ನಡೆದಾಡುವ ದೇವರನ್ನು ಕಂಡು ಭಕ್ತ ಸಮೂಹ ಕಣ್ಣುತುಂಬಿಕೊಂಡರು.
Advertisement
ತಮ್ಮ ಆಶೀರ್ವಾದ ಪಡೆಯಲು ಕಾದು ಕುಳಿತ ಭಕ್ತರಿಗೆ ಶ್ರೀಗಳು ನಿರಾಸೆ ಮಾಡಲಿಲ್ಲ. ಹಳೇ ಮಠದಲ್ಲೇ ಭಕ್ತಾದಿಗಳ ದರ್ಶನಕ್ಕೆ ಅನುವು ಮಾಡಿಕೊಡುವಂತೆ ಆಡಳಿತ ಮಂಡಳಿಗೆ ಹೇಳಿದ್ರು. ಅದರಂತೆ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ಶ್ರೀಗಳ ಆಶೀರ್ವಾದ ಪಡೆದು ಪುನೀತರಾದರು.
Advertisement
ಪಿತ್ತನಾಳದಲ್ಲಿ ಸೋಂಕು ತಗುಲಿದ್ದ ಪರಿಣಾಮ ಶುಕ್ರವಾರ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎಂಡೋಸ್ಕೋಪಿ ಮೂಲಕ ಸ್ಟಂಟ್ ಬದಲಾವಣೆ ಮಾಡಲಾಗಿತ್ತು. ಶೀಘ್ರವೇ ಚೇತರಿಸಿಕೊಂಡ ಶ್ರೀಗಳನ್ನು ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
Advertisement
ಶ್ರೀಗಳ ಡಿಸ್ಚಾರ್ಜ್ ಬಳಿಕ ಮಾತನಾಡಿದ ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ. ರವೀಂದ್ರ, ಶ್ರೀಗಳ ಚೇತರಿಕೆ ನಿಜಕ್ಕೂ ಮ್ಯಾಜಿಕ್ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶುಕ್ರವಾರ 10 ಗಂಟೆಗೆ ಶ್ರೀಗಳು ಆಸ್ಪತ್ರೆಗೆ ಬಂದಿದ್ರು. ನಿನ್ನೆ ನೀಡಿರುವ ಚಿಕಿತ್ಸೆ ಕ್ಲಿಷ್ಟಕರವಾಗಿದ್ರೂ ಅವರು ಶೀಘ್ರವೇ ಚೇತರಿಸಿಕೊಂಡ್ರು. ನಿನ್ನೆ ರಾತ್ರಿ ನಮಗೆ ಹಿತವಚನ ನೀಡಿದ್ರು. ಯಾವುದೇ ವ್ಯಕ್ತಿಗೆ ಇಂಥ ಚಿಕಿತ್ಸೆ ಮಾಡಿದ್ರೆ ಕ್ಯೂರ್ ಆಗೋದು ಕಡಿಮೆ. ಆದ್ರೆ ಶ್ರೀಗಳು ನಿರೀಕ್ಷೆಗೂ ಮೀರಿ ಗುಣಮುಖರಾಗಿದ್ದಾರೆ. ಇದು ವೈದ್ಯಲೋಕಕ್ಕೆ ಅಚ್ಚರಿ ಅಂದ್ರು.