ನವದೆಹಲಿ: ಸ್ಫೋಟಕ ಸಾಗಣೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಲಕ್ನೋ ಮೂಲದ ಮಹಿಳಾ ವೈದ್ಯೆ ಡಾ. ಶಾಹೀನ್ ಅರೆಸ್ಟ್ ಆಗಿದ್ದಾಳೆ. ಮಗಳ ಕೃತ್ಯದ ಬಗ್ಗೆ ತಂದೆ ಸೈಯದ್ ಅಹ್ಮದ್ ಅನ್ಸಾರಿ ಪ್ರತಿಕ್ರಿಯಿಸಿದ್ದಾರೆ.
ನನಗೆ 3 ಮಕ್ಕಳು. ಶಾಹೀನ್, ಪರ್ವೇಜ್ ಇಬ್ಬರೂ ನನ್ನ ಮಕ್ಕಳೇ. ಹಿರಿಯ ಪುತ್ರ ಶೊಯೇಬ್ ಜೊತೆ ಈಗ ವಾಸವಾಗಿದ್ದೇನೆ. ಎರಡನೇಯವಳು ಶಾಹೀನ್. ಮೂರನೇಯವನು ಪರ್ವೇಜ್ ಅನ್ಸಾರಿ. ಶಾಹೀನ್‌ಗೆ ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿತ್ತು. ಆಕೆ ಫರೀದಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳು ಇಂತಹ ಕೃತ್ಯದಲ್ಲಿ ತೊಡಗಿದ್ದಾಳೆ ಅಂತ ನಂಬೋಕಾಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ತಿಂಗಳಿನಿಂದ ಶಾಹೀನ್ ಜೊತೆ ನಾನು ಮಾತನಾಡಿಲ್ಲ. ಪರ್ವೇಜ್ ಜೊತೆ ವಾರಕ್ಕೊಮ್ಮೆ ಮಾತಾಡ್ತೀನಿ. ನಾನು ಕೊನೆಯ ಬಾರಿಗೆ ಶಾಹೀನ್ ಜೊತೆ ಮಾತನಾಡಿದ್ದು ಸುಮಾರು ಒಂದು ತಿಂಗಳ ಹಿಂದೆ. ಆದರೆ, ಪರ್ವೇಜ್ ಜೊತೆ ಪ್ರತಿ ವಾರ ಮಾತನಾಡುತ್ತೇನೆ. ಶಾಹೀನ್ ಬಂಧನದ ಬಗ್ಗೆ ನನಗೆ ತಿಳಿದಿರಲಿಲ್ಲ. ಹಿಂದಿನ ಮಂಗಳವಾರ ಪರ್ವೇಜ್ ಜೊತೆ ಮಾತನಾಡಿದ್ದೆ. ಅವನ ಯೋಗಕ್ಷೇಮವನ್ನು ಹೊರತುಪಡಿಸಿ ನಾವು ಬೇರೇನನ್ನೂ ಚರ್ಚಿಸಲಿಲ್ಲ ಎಂದು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಪೊಲೀಸರು ಪರ್ವೇಜ್ ಮನೆ ಮೇಲೆ ದಾಳಿ ಮಾಡಿದ್ದು ಗೊತ್ತಿದೆ ಎಂದು ಸೈಯದ್ ಅಹ್ಮದ್ ಅನ್ಸಾರಿ ತಿಳಿಸಿದ್ದಾರೆ. ಶಾಹೀನ್ ತನಿಖೆ ಬಳಿಕ ಪರ್ವೇಜ್ ಮನೆಗೆ ತನಿಖಾ ತಂಡ ದಾಳಿ ಮಾಡಿತ್ತು.
ಶಾಹೀನ್ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಹೊಂದಿದ್ದಾಳೆ. ಫರಿದಾಬಾದ್‌ನಲ್ಲಿ ಬಾಡಿಗೆಗೆ ಪಡೆದಿದ್ದ ಎರಡು ಕೊಠಡಿಗಳಿಂದ 2,900 ಕೆಜಿ ಸ್ಫೋಟಕಗಳು ಮತ್ತು ದಹನಕಾರಿ ವಸ್ತುಗಳನ್ನು ವಶಪಡಿಸಿಕೊಂಡ ನಂತರ ಬಂಧಿಸಲ್ಪಟ್ಟ ಕಾಶ್ಮೀರಿ ವೈದ್ಯ ಡಾ. ಮುಜಮ್ಮಿಲ್ ಜೊತೆ ಕೂಡ ನಿಕಟ ಸಂಪರ್ಕ ಹೊಂದಿದ್ದಾಳೆಂದು ವರದಿಯಾಗಿದೆ.
ಮುಜಮ್ಮಿಲ್ ಅವರ ಮಾಹಿತಿಯ ಆಧಾರದ ಮೇಲೆ, ಫರಿದಾಬಾದ್ ಪೊಲೀಸರು ಅಲ್-ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ವೈದ್ಯರಿಗೆ ಸೇರಿದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನದಿಂದ ಕಲಾಶ್ನಿಕೋವ್ ಅಸಾಲ್ಟ್ ರೈಫಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

