ಬೆಂಗಳೂರು: ಕೊರೊನಾ ನಾಲ್ಕೆನೇ ಅಲೆಯ ಸುದ್ದಿಯೇ ಎಲ್ಲ ಕಡೆ ಕೊರೊನಾದಂತೆ ಹರಡುತ್ತಿದೆ. ಸರ್ಕಾರವೂ ಸಹ ನಾಲ್ಕನೆ ಅಲೆಯ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಕಡ್ಡಾಯ ಆದೇಶವನ್ನು ಜಾರಿಗೆ ತಂದಿದೆ. ಕೊರೊನಾ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ಸರ್ಕಾರ ಮಾತ್ರವಲ್ಲ ಜನರು ಸಹ ಸಿದ್ದರಾಗಬೇಕು ಎಂದು ತಜ್ಞ ವೈದ್ಯರಾದ ಡಾ.ಸತ್ಯನಾರಾಯಣ್ ಮೈಸೂರು ಕರೆ ನೀಡಿದ್ದಾರೆ.
ಡಾ.ಸತ್ಯನಾರಾಯಣ್ ಮೈಸೂರು ಅವರು ಪಬ್ಲಿಕ್ ಟಿವಿ ಜೊತೆ ಕೊರೊನಾ ಅಲೆ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ಕೊಟ್ಟಿದ್ದು, ಕೊರೊನಾ ನಾಲ್ಕನೆ ಅಲೆಯನ್ನು ತಡೆಯೋ ಶಕ್ತಿ ನಮ್ಮ ಬಳಿಯೇ ಇದೆ. ಅದುವೇ ಮಾಸ್ಕ್ ಮತ್ತು ವ್ಯಾಕ್ಸಿನ್ ಹಾಕಿಸಿಕೊಳ್ಳುವುದು ಎಂದು ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಮಾಡಿ ಮಹಿಳೆಯನ್ನು ಕೊಲೆಗೈದ ಪಾಪಿಗಳು
Advertisement
Advertisement
ಕೊರೊನಾ ಅನ್ನೋದು ಒಂದು ಸಾಂಕ್ರಾಮಿಕ ಕಾಯಿಲೆ. ಇದು ವಿಶ್ವದಲ್ಲೇ ಇದೆ. ನಾವು ಮಾಸ್ಕ್ ಬಿಟ್ಟಷ್ಟು ಹೆಚ್ಚು ಕಾಡಲಿದೆ. ನಾಲ್ಕನೆಯ ಅಲೆಗೆ ಓಮಿಕ್ರಾನ್‍ನಿಂದ ಬಂದಿರೋ ಎಕ್ಸ್ ಇ, ಎಕ್ಸ್ ಡಿ ಮತ್ತು ಎಕ್ಸ್ ಏಫ್ ತಳಿಗಳೇ ಕಾರಣವಾಗದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
Advertisement
Advertisement
ನಮ್ಮ ದೇಶದಲ್ಲಿ ಎಕ್ಸ್ ಇ ವೈರಸ್ ಹೆಚ್ಚು ಕಾಣಿಸಿಕೊಂಡಿದೆ. ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ. ಅದರೇ ಜನ ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆವಹಿಸದ್ರೇ ನಾಲ್ಕನೇ ಅಲೆಯನ್ನ ತಡೆಯಲು ಸಾಧ್ಯವಾಗಲಿದೆ. ವ್ಯಾಕ್ಸಿನ್ ಮತ್ತು ಮಾಸ್ಕ್ ಕೊರೊನಾದಿಂದ ದೂರ ಇರಲು ಇರುವ ಆಯುಧ. ನಾವೂ ಅದನ್ನ ಈಗ ಮಾಡದೇ ಇದ್ರೇ ಕಂಟ್ರೋಲ್ ಮಾಡೋದು ಕಷ್ಟವಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: 4ನೇ ಅಲೆ ಆತಂಕ, ಕೂಡಲೇ ಜನರು 3ನೇ ಡೋಸ್ ತೆಗೆದುಕೊಳ್ಳಬೇಕು: ಸುಧಾಕರ್