ಮಂಗಳೂರು: ನಮೀಬಿಯಾ (Namibia)ದಿಂದ ಭಾರತಕ್ಕೆ ಬಂದ ಚೀತಾ (Cheetah) ತಂಡದಲ್ಲಿ ಭಾರತೀಯ ಪಶುವೈದ್ಯರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಡಾ.ಸನತ್ ಕೃಷ್ಣ ಭಟ್ ಇದ್ದರು.
Advertisement
ನವದೆಹಲಿಯ ನ್ಯಾಷನಲ್ ಜಿಯೋಲಾಜಿಕಲ್ ಪಾರ್ಕ್ (National Zoological Park) ನಲ್ಲಿ ಸಹಾಯಕ ಪಶು ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸನತ್ ಕೃಷ್ಣ, ಬೆಂಗಳೂರಿನ ಪಶು ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬನ್ನೇರುಘಟ್ಟ (Bannerughatta) ಉದ್ಯಾನವನದಲ್ಲೂ ಕಾರ್ಯನಿರ್ವಹಿಸಿದ ಅನುಭವ ಇರುವ ಸನತ್ ಆಫ್ರಿಕಾದಲ್ಲೂ ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ
Advertisement
Advertisement
ಹುಲಿ (Tiger) ಗಳಿಗೆ ಮತ್ತು ಇತರ ವನ್ಯಜೀವಿಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಅರಿವಳಿಕೆ ಚುಚ್ಚುಮದ್ದು ನೀಡುವಿಕೆ ತಜ್ಞರಾದ ಡಾ.ಸನತ್ ಕೃಷ್ಣ ವನ್ಯಜೀವಿ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ದಿವಂಗತ ಕೇಶವ ಕೃಷ್ಣ ಮುಳಿಯ ಹಾಗೂ ಉಷಾ ದಂಪತಿಯ ಪುತ್ರನಾಗಿರುವ ಸನತ್ ಕೃಷ್ಣ (Sanath Krishna) ಅವರ ಪತ್ನಿ ಡಾ. ಪ್ರಿಯಾಂಕ ಜೇಸ್ತಾ ಕೂಡ ಪಶು ವೈದ್ಯೆಯಾಗಿದ್ದಾರೆ.