ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರಿಗೆ ಇಸಿಜಿಗೆ ಟೆಸ್ಟ್ ನಡೆಸಿದಾಗ ಅವರಿಗೆ ಹಾರ್ಟ್ ಅಟ್ಯಾಕ್ ಆಗಿರುವ ಬಗ್ಗೆ ಸುಳಿವು ಸಿಕ್ಕಿರುವುದಾಗಿ ಡಾ. ರಮಣ ರಾವ್ ಹೇಳಿದ್ದಾರೆ.
Advertisement
ಈ ಕುರಿತಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಅಪ್ಪು ಅವರು ಇಲ್ಲಿ ಕುಸಿದು ಬೀಳಲಿಲ್ಲ. ನಮಗೆ ಇಸಿಜಿ ಪರೀಕ್ಷೆಯಲ್ಲಿ ಹಾರ್ಟ್ ಪ್ಲಾಬ್ಲಂ ಆಗುತ್ತಿರುವ ನಗ್ಗೆ ಸುಳಿವು ಸಿಕ್ಕಿದ ನಂತರ ಆಸ್ಪತ್ರೆಗೆ ಹೋಗೋಣ ಎಂದು ನಿರ್ಧರಿಸಿದೆವು. ಆಗ ಅಪ್ಪು ನಿಲ್ಲಲು ಪ್ರಯತ್ನಿಸಿದರು. ನನಗೆ ಸ್ವಲ್ಪ ನೋವಾಗುತ್ತಿದೆ ಎಂದರು. ಈ ವೇಳೆ ಅವರನ್ನು ನಿಲ್ಲಿಸಲು ಕಷ್ಟ ಎಂದು ಅವರನ್ನು ಎತ್ತುಕೊಂಡು ಕಾರಿನಲ್ಲಿ ಮಲಗಿಸಿದೆವು. ಈ ವೇಳೆ ಅಪ್ಪುಗೆ ಪ್ರಜ್ಞೆ ಇತ್ತು. ನಾವು ಹೇಳುತ್ತಿದ್ದನ್ನೆಲ್ಲಾ ಸರಿಯಾಗಿ ಪಾಲಿಸುತ್ತಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ ಎಂದರು.
Advertisement
Advertisement
ಐಸಿಯು, ಕಾರ್ಡಿಯಾಕೇರ್ ಎಲ್ಲಿ ಅಗತ್ಯವಾಗಿ ದೊರೆಯುತ್ತದೆಯೋ ಅಲ್ಲಿಗೆ ಕಳುಹಿಸುವುದು ನಮ್ಮ ಕೆಲಸವಾಗಿತ್ತು. ಹೀಗಾಗಿ ಅವರಿಗೆ ಹಾರ್ಟ್ ಪ್ರಾಬ್ಲಂ ಆಗುತ್ತಿದೆ ಎಂದಾಗಲೇ ತಕ್ಷಣ ನಾವು ಪ್ರಾಥಮಿಕ ಚಿಕಿತ್ಸೆ ನೀಡಿದ್ದೇವೆ. ನಂತರ ಅಪ್ಪುವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ಆ ವೇಳೆ ಅಪ್ಪು ಉಸಿರಾಡುತ್ತಿದ್ದರು. ಅಪ್ಪು ನಾಡಿ ಬಡಿತ, ಹೃದಯ ಬಡಿತ ಎಲ್ಲವನ್ನು ನಾರ್ಮಲ್ ಆಗಿತ್ತು. ಇದನ್ನೂ ಓದಿ: ನಟ ದಿ. ಪುನೀತ್ ಮನೆಗೆ ಭೇಟಿ ನೀಡಿ ಸಿಎಂ ಸಾಂತ್ವನ
Advertisement
ಬೆಳಗ್ಗೆ 11.20ರಷ್ಟೊತ್ತಿಗೆ ಅಪ್ಪು ಕ್ಲಿನಿಕ್‍ಗೆ ಬಂದಿದ್ದರು. ಚಿಕಿತ್ಸೆ ವೇಳೆ ಅಪ್ಪು ಬೆವರುತ್ತಿದ್ದರು. ಸಾಮಾನ್ಯವಾಗಿ ಪ್ರತಿ ಭಾರೀ ವ್ಯಾಯಾಮ ಮಾಡಿದ ನಂತರ ಬೆವರು ನನಗೆ ಬರುತ್ತದೆ ಎಂದು ಹೇಳಿದ್ದರು. ಕ್ಲಿನಿಕ್‍ಗೆ ಬಂದ 1 ನಿಮಿಷದಲ್ಲೇ ಇಸಿಜಿ ಮಾಡಿದ್ವಿ. ಆದರೆ ಅಪ್ಪು ಬೆವರುತ್ತಿರುವುದನ್ನು ಕಂಡು ಆತಂಕ ಹಾಗೂ ಅನುಮಾನದಿಂದ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದೆ. ಇನ್ನೂ ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋದರೆ ತಡವಾಗುತ್ತದೆ ಎಂದು ಅವರ ಕಾರಿನಲ್ಲಿಯೇ ಕೇವಲ 7 ನಿಮಿಷದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ ಎಂದರು. ಇದನ್ನೂ ಓದಿ: ವಾರ ಕಳೆದ್ರೂ ಅಪ್ಪು ಸ್ಮಾರಕಕ್ಕೆ ಜನಸಾಗರ- ಮಳೆ ಲೆಕ್ಕಿಸದೇ ದರ್ಶನ ಪಡೆದ ಅಭಿಮಾನಿಗಳು
ಅಪ್ಪು ಸ್ಟಾರ್ ನಟ, ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನನಗೆ ನನ್ನ ಮಗನನ್ನು ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ನಾವು ಅಪ್ಪುಗೆ ಎಲ್ಲ ರೀತಿಯ ಕಾಳಜಿ ವಹಿಸಿದ್ದೇನೆ. ನನ್ನ ಮನಸ್ಸಿಗೆ ನಾನು ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಿದ್ದೇವೆ ಎಂಬ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ.