ಸೇನೆ ಸೇರಲು ಆಗದಿದ್ದರೂ ದೇಶ ಸೇವೆ ಮಾಡ್ತಿದ್ದಾರೆ ಹುಬ್ಬಳ್ಳಿಯ ಡಾ.ರಾಮಚಂದ್ರ

Public TV
1 Min Read
HBL DOCTOR

ಹುಬ್ಬಳ್ಳಿ: ಸೇನೆಗೆ ಸೇರಬೇಕು, ದೇಶ ಕಾಯಬೇಕು ಅನ್ನೋ ಆಸೆ ಹೊಂದಿದ್ದವರಿಗೆ ಅಪಘಾತವಾಗಿ ಮನೆ ಸೇರುವಂತಾಯ್ತು. ಆದರೆ, ಸೇನೆಗೆ ಸೇರಲಿಲ್ಲ ಅನ್ನೋ ಕೊರಗನ್ನ ಯೋಧರ ಸೇವೆ ಮೂಲಕ ಪರೋಕ್ಷವಾಗಿ ದೇಶ ಸೇವೆ ಮಾಡ್ತಿದ್ದಾರೆ ಪಬ್ಲಿಕ್ ಹೀರೋ ಧಾರವಾಡ ಡಾ. ರಾಮಚಂದ್ರ ಕಾರಟಗಿ.

ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರಾದ ರಾಮಚಂದ್ರ ಅವರು, ಮಾನಸಿಕ ಅಸ್ವಸ್ಥರು ಮತ್ತು ವಯೋವೃದ್ಧರ ಜೊತೆಯಲ್ಲಿ ನಗುಮೊಗದೊಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸೇನೆಗೆ ಸೇರಬೇಕು ಎನ್ನುವ ಕನಸು ಕಂಡವರು. ಆದ್ರೆ ಕಾಲಿನ ಮೂಳೆ ಮುರಿದು ಸರ್ಜರಿ ಆದ ಕಾರಣ ಅದು ನನಸಾಗಲಿಲ್ಲ.

vlcsnap 2018 08 16 08h51m49s143

ಬದಲಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರೊಫೆಸರ್ ಆಗಿದ್ದಾರೆ. ಆದರೂ, ದೇಶಸೇವೆಯ ತುಡಿತದಿಂದಾಗಿ ಹುಬ್ಬಳ್ಳಿಯ ಕೇಶವ ಕುಂಜದಲ್ಲಿ ಸ್ವಂತ ಕ್ಲಿನಿಕ್ ಸ್ಥಾಪಿಸಿ, ಇಲ್ಲಿಗೆ ಬರುವ ಸೈನಿಕರ ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡ್ತಿದ್ದಾರೆ. ಸೈನಿಕರ ಕುಟುಂಬಗಳ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಾರೆ.

ಡಾ.ರಾಮಚಂದ್ರ ಅವರು ತಮ್ಮೀ ಸೇವೆ ಜೊತೆಗೆ ಪ್ರತಿ ಭಾನುವಾರ ಹಾಗೂ ಬಿಡುವು ಸಿಕ್ಕಾಗ ನಗರದ ನಾನಾ ವೃದ್ಧಾಶ್ರಮಗಳಿಗೆ ತೆರಳಿ ಉಚಿತ ಚಿಕಿತ್ಸೆ ನೀಡ್ತಿದ್ದಾರೆ.  ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=KTzu0HIx0Ww

Share This Article
Leave a Comment

Leave a Reply

Your email address will not be published. Required fields are marked *