– ಡಾ.ರಾಜ್ ಕುಟುಂಬಸ್ಥರು ಭಾಗಿ
ಚಾಮರಾಜನಗರ: ದೊಡ್ಮನೆ ಕುಟುಂಬದ ನಾಗಮ್ಮ ಇನ್ನು ನೆನಪು ಮಾತ್ರ. ವರನಟ ಡಾ.ರಾಜಕುಮಾರ್ (Dr Rajkumar) ಅವರ ಮಕ್ಕಳಿಗೆ ಸಾಕು ತಾಯಿಯೇ ಆಗಿದ್ದ ನಾಗಮ್ಮ (Nagamma) ಅವರ ಅಂತ್ಯಕ್ರಿಯೆ ಡಾ.ರಾಜ್ ಹುಟ್ಟೂರು ದೊಡ್ಡಗಾಜನೂರಿನಲ್ಲಿ (Doddagajanur) ನೆರವೇರಿತು. ಅಂತ್ಯಕ್ರಿಯೆಯಲ್ಲಿ ಡಾ.ರಾಜ್‌ಕುಮಾರ್ ಕುಟುಂಬಸ್ಥರು ಭಾಗಿಯಾದರು.
ವರನಟನ ಮಕ್ಕಳಿಗೆ ಒಂದು ರೀತಿಯಲ್ಲಿ ಸಾಕು ತಾಯಿಯೇ ಆಗಿದ್ದ ನಾಗಮ್ಮ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ರಾಜ್ ಕುಟುಂಬ ದೊಡ್ಡಗಾಜನೂರಿಗೆ ಆಗಮಿಸಿತ್ತು. ಶುಕ್ರವಾರ ಸಂಜೆಯೇ ರಾಘವೇಂದ್ರ ರಾಜಕುಮಾರ್ ಅವರು ತಮ್ಮ ಪತ್ನಿ ಹಾಗು ಮಕ್ಕಳಾದ ವಿನಯ್ ರಾಜ್‌ಕುಮಾರ್ ಹಾಗು ಯುವ ರಾಜ್‌ಕುಮಾರ್ ಅವರೊಂದಿಗೆ ದೌಡಾಯಿಸಿದ್ದರು. ನಮ್ಮ ಅತ್ತೆ ನಮ್ಮನ್ನೆಲ್ಲಾ ಎದೆ ಹಾಲು ಕುಡಿಸಿ ಬೆಳೆಸಿದ್ದಾರೆ ಎಂದು ಸ್ಮರಿಸಿಕೊಂಡಿದ್ದರು. ಇದನ್ನೂ ಓದಿ: ವಿಕಸಿತ ಭಾರತ್ @ 2047: ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನ
ಇನ್ನು ಶುಕ್ರವಾರ ಗೋವಾಗೆ ತೆರಳಿದ್ದ ಶಿವರಾಜಕುಮಾರ್ ಅವರು ನಾಗಮ್ಮ ನಿಧನದ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಂದ ವಾಪಸ್ಸಾಗಿ ತಮ್ಮ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ತಮ್ಮ ಪುತ್ರಿಯರೊಂದಿಗೆ ಮಧ್ಯರಾತ್ರಿಯೇ ದೊಡ್ಡಗಾಜನೂರಿಗೆ ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಮಗಳು ವಂದಿತಾ, ಡಾ.ರಾಜಕುಮಾರ್ ಅವರ ಪುತ್ರಿಯರು, ಮೊಮ್ಮಕ್ಕಳು, ಪಾರ್ವತಮ್ಮ ರಾಜಕುಮಾರ್ ಅವರ ಸಹೋದರರಾದ ಎಸ್ ಎ ಗೋವಿಂದರಾಜು, ಚಿನ್ನೇಗೌಡ ಸೇರಿದಂತೆ ಅಪಾರ ಸಂಖ್ಯೆಯ ಬಂದು ಬಳಗದವರು ನಾಗಮ್ಮ ಅವರ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ
ಈ ವೇಳೆ ಸೋದರತ್ತೆ ನಾಗಮ್ಮ ಅವರೊಡನೆ ಬಾಲ್ಯದ ನೆನಪು ಮೆಲಕು ಹಾಕಿದ ಡಾ.ಶಿವರಾಜಕುಮಾರ್, ನನಗೆ ನಮ್ಮವ್ವ ಒಬ್ಬರೇ ತಾಯಿಯಲ್ಲ, ಸಾಕಿ ಸಲಹಿದ ನಾಗಮ್ಮ ಕೂಡ ಒಬ್ಬರು ತಾಯಿಯಾಗಿದ್ದರು ಎಂದು ಸ್ಮರಿಸಿದರು. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ – ಹೈಡೆಲ್ ಪ್ರಾಜೆಕ್ಟ್ ಸೈಟ್‌ನಲ್ಲಿದ್ದ 12 ಕಾರ್ಮಿಕರಿಗೆ ಗಾಯ
ನಾಗಮ್ಮ ಅವರು ಗುಡ್ಡೆ ಮಠ ದೀಕ್ಷೆ ಪಡೆದಿದ್ದು, ಗುಡ್ಡೆ ಮಠದ ರಾಘವೇಂದ್ರ ಸ್ವಾಮಿ ನೇತೃತ್ವದಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ದೊಡ್ಮನೆ ಸದಸ್ಯರೆಲ್ಲಾ ನಾಗಮ್ಮ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸುವ ಮೂಲಕ ನಾಗಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಡಾ.ರಾಜಕುಮಾರ್ ಅವರ ಗಾಜನೂರಿನ ಮನೆಯ ಹಿಂಭಾಗದ ತೋಟದಲ್ಲಿ ನಾಗಮ್ಮ ಪತಿ ವೆಂಕಟೇಗೌಡ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದನ್ನೂ ಓದಿ: ತಾನು ಕಳ್ಳ ಪರರ ನಂಬ ಮಾನಸಿಕತೆಯಿರುವ ರಾಹುಲ್ ಗಾಂಧಿ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಸಿ.ಟಿ ರವಿ