ಚಾಮರಾಜನಗರ: ಪುನೀತ್ ರಾಜ್‍ಕುಮಾರ್ ಅವರ ಆಸೆ ಈಡೇರಿಕೆಯಾಗಿದೆ. ರಾಜ್ ಕುಟುಂಬಸ್ಥರು ಆಡಿ ಬೆಳೆದ ಮನೆಯನ್ನು ಮ್ಯೂಸಿಯಂನ್ನಾಗಿ ನಿರ್ಮಾಣ ಮಾಡಲು ರಾಜ್‍ಕುಟುಂಬ ಮುಂದಾಗಿದೆ.
Advertisement
ರಾಜ್‍ಕುಮಾರ್, ಪುನೀತ್ ನೆನಪು ಶಾಶ್ವತವಾಗಿ ಉಳಿಸಲು ಮ್ಯೂಸಿಯಂ ಮಾಡಲು ನಿರ್ಧಾರ ಮಾಡಲಾಗಿದೆ. ಅಭಿಮಾನಿಗಳಿಗೆ ಮನೆ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತೆ. ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಡಾ.ರಾಜ್ ಸಹೋದರಿ ನಾಗಮ್ಮ ಪುತ್ರ ಗೋಪಾಲ್ ಮಾತನಾಡಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ಮನೆಗಳತ್ತ ಮುಖಮಾಡಿದ ರೈತರು- ಪೊಲೀಸರಿಂದ ಬ್ಯಾರಿಕೇಡ್ ತೆರವು
Advertisement
Advertisement
ಚಾಮರಾಜನಗರ ಗಡಿಯ ತಮಿಳುನಾಡಿನ ತಾಳವಾಡಿ ಸಮೀಪದ ಗಾಜನೂರು ಡಾ. ರಾಜ್‍ಕುಮಾರ್ ಅವರ ಊರು. ಇಲ್ಲಿ ಈವರ ನಿವಾಸ ಇದೆ. ಈ ಮನೆ ಕುಸಿಯುವ ಸ್ಥಿತಿಯಲ್ಲಿದ್ದು, ಇತ್ತೀಚೆಗೆ ಬಿದ್ದ ಮಳೆಯಿಂದ ಮನೆಗೆ ಹಾನಿಯಾಗಿತ್ತು. ಸುಮಾರು 250 ವರ್ಷ ಇತಿಹಾಸವಿರುವ ಮನೆಯಾಗಿದೆ. ಕಳೆದ ಮೂರುವರೆ ತಿಂಗಳ ಹಿಂದೆ ಗಾಜನೂರಿನ ಹಳೆ ಮನೆಗೆ ಭೇಟಿ ಕೊಟ್ಟಿದ್ದ ಅಪ್ಪು, ಈ ವೇಳೆ ಹಳೆಯ ಮನೆ ಉಳಿವಿಗೆ ದುರಸ್ತಿ ಮಾಡಲೂ ನಿರ್ಧರಿಸಿದ್ದರು. ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು
Advertisement
ಅಪ್ಪು ಆಸೆ ಈಡೇರಿಸಲು ರಾಜ್ ಕುಟುಂಬ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ದುರಸ್ತಿ ಕಾರ್ಯ ಮುಗಿದ ನಂತರ ಮನೆ ವೀಕ್ಷಣೆಗೆ ಶಿವಣ್ಣ, ರಾಘಣ್ಣ ಭೇಟಿ ಕೊಡಲಿದ್ದಾರೆ. ಮನೆಯಲ್ಲಿ ಡಾ ರಾಜ್, ಪುನೀತ್‍ಗೆ ಸಂಬಂಧಿಸಿದ ಫೋಟೋ ಇಟ್ಟು ಮ್ಯೂಸಿಯಂ ಮಾಡಲು ನಿರ್ಧಾರ ಮಾಡಲಾಗಿದೆ.