Bengaluru City

ವರನಟ ಡಾ. ರಾಜ್‍ಕುಮಾರ್ ಅಗಲಿ ಇಂದಿಗೆ 11 ವರ್ಷ

Published

on

Share this

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಕನ್ನಡ ಕುಲಕೋಟಿಯನ್ನು ಅಗಲಿ ಇಂದಿಗೆ ಹನ್ನೊಂದು ವರ್ಷ. ಆದ್ರೆ ಅಭಿಮಾನಿಗಳೇ ದೇವರು ಎಂದಿರುವ ಆ ನಟ ಸಾರ್ವಭೌಮ ಕನ್ನಡಿಗರ ಎದೆಯಾಳದಲ್ಲಿ ಇಂದಿಗೂ ಅಜರಾಮರ.

ರಾಜ್‍ಕುಮಾರ್ ಅವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿ ಬಳಿ ಪೂಜೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ. ಸುಮಾರು 2000 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಗೆ ಸ್ಮಾರಕ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ರಾಜ್ ಕುಟುಂಬದ ಸದಸ್ಯರು ಕೆಲವೇ ಕ್ಷಣಗಳಲ್ಲಿ ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

 

Click to comment

Leave a Reply

Your email address will not be published. Required fields are marked *

Advertisement
Advertisement