ವರನಟ ರಾಜ್‌ಕುಮಾರ್ (Rajkumar) ಮೊಮ್ಮಗ ಧೀರೇನ್ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ನನ್ನ ಹೆಸರಿಗೆ ತಾತನ ಹೆಸರು ಸೇರಿಸಿಕೊಂಡು ಈ ಲೆಗ್ಗಸಿಯನ್ನು ಗೌರವಿಸುತ್ತೇನೆ ಎಂದು ಧೀರೇನ್ ತಿಳಿಸಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆಯಿದೆ: ರಚಿತಾ ರಾಮ್
ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ಮತ್ತು ರಾಮ್ ಕುಮಾರ್ (Ram Kumar) ದಂಪತಿ ಪುತ್ರ ಧೀರೇನ್ ಹೆಸರು ಬದಲಾವಣೆ ಬಗ್ಗೆ ತಿಳಿಸಿದ್ದಾರೆ. ನನ್ನ ಹೆಸರಿನ ಮುಂದೆ ನನ್ನ ತಾತ ರಾಜ್‌ಕುಮಾರ್ ಅವರ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ನಾನು ಡಾ. ರಾಜ್‌ಕುಮಾರ್ ಕುಟುಂಬದ ಲೆಗ್ಗಸಿಗೆ ಗೌರವ ಸೂಚಿಸುತ್ತಿದ್ದೇನೆ. ಡಾ.ರಾಜ್‌ಕುಮಾರ್ ಮೊಮ್ಮಗನಾಗಿರುವ ನಾನು ಅವರ ಹೆಸರನ್ನು ನನ್ನ ಹೆಸರಿನ ಮುಂದೆ ಸೇರಿಸಿಕೊಂಡು ಈ ಮೂಲಕ ಅವರ ಮನೆತನಕ್ಕೆ ಗೌರವ ಸೂಚಿಸುತ್ತಿದ್ದೇನೆ ಎಂದಿದ್ದಾರೆ.
ಕಾನೂನಿನ ಪ್ರಕಾರ, ಹೆಸರನ್ನು ಬದಲಾಯಿಸಿಕೊಂಡು ಧೀರೇನ್ ರಾಮ್‌ಕುಮಾರ್ ಅವರು ಈಗ ಧೀರೇನ್ ಆರ್ ರಾಜ್‌ಕುಮಾರ್ (Dheeren R Rajkumar) ಆಗಿದ್ದಾರೆ.
ಇದೀಗ ಕೆಆರ್‌ಜಿ ಬ್ಯಾನರ್‌ನ ಹೊಸ ಸಿನಿಮಾದಲ್ಲಿ ಧೀರೇನ್ ಆರ್ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಳೆದ ವರ್ಷ ‘ಶಿವ 143’ (Shiva 143) ಸಿನಿಮಾದಲ್ಲಿ ಧೀರೇನ್ ಹೀರೋ ಆಗಿ ಪಾದಾರ್ಪಣೆ ಮಾಡಿದ್ದರು. ಚಿತ್ರಕ್ಕೆ ಮಾನ್ವಿತಾ ಕಾಮತ್ (Manvita Kamat) ನಾಯಕಿಯಾಗಿ ನಟಿಸಿದ್ದರು.