ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ನಿಂದ ಈಗಾಗಲೇ ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಡಾ.ರಾಜ್‍ಕುಮಾರ್ ಹುಟ್ಟುಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ.
ಇಂದು ಡಾ.ರಾಜ್‍ಕುಮಾರ್ ಅವರಿಗೆ 91ನೇ ವರ್ಷದ ಹುಟ್ಟುಹಬ್ಬದ ದಿನ. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಯಾವುದೇ ಅದ್ಧೂರಿ ಆಚರಣೆ ಇಲ್ಲ. ಆದ್ದರಿಂದ ಕುಟುಂಬಸ್ಥರು ಸರಳವಾಗಿ ಪೂಜೆ ಮಾಡಿ ಕಾರ್ಯ ಮಾಡಲಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿಗೆ ಅಭಿಮಾನಿಗಳಿಲ್ಲದೆ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ.
Advertisement
ಪ್ರೀತಿಯ ಅಪ್ಪಾಜಿಯ ಹುಟ್ಟು ಹಬ್ಬಕ್ಕೆ ನಮ್ಮ ಅಭಿಮಾನಿಗಳಿಂದ ವಿಶೇಷ ಕಾಮನ್ ಡಿಪಿ.
ಅಪ್ಪಾಜಿಯ ಹುಟ್ಟು ಹಬ್ಬವನ್ನು ಈ ಬಾರಿ ನಿಮ್ಮ ನಿಮ್ಮ ಮನೆಯಲ್ಲೆ ಆಚರಿಸಿ ಮನೆಯವರ ಜೊತೆಯಲ್ಲೆ ಆಚರಿಸಿ. #StayHomeStaySafe pic.twitter.com/xYAtmbCK7Z
— DrShivaRajkumar (@NimmaShivanna) April 23, 2020
Advertisement
ನಟ ಶಿವರಾಜ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿ ಮನೆಯಲ್ಲಿ ಇರಿ ಮನೆಯಲ್ಲೇ ಆಚರಣೆ ಮಾಡಿ ಅನ್ನೋ ಸಂದೇಶ ಕೊಟ್ಟಿದ್ದಾರೆ. “ಪ್ರೀತಿಯ ಅಪ್ಪಾಜಿಯ ಹುಟ್ಟುಹಬ್ಬಕ್ಕೆ ನಮ್ಮ ಅಭಿಮಾನಿಗಳಿಂದ ವಿಶೇಷ ಕಾಮನ್ ಡಿಪಿ. ಅಪ್ಪಾಜಿಯ ಹುಟ್ಟುಹಬ್ಬವನ್ನು ಈ ಬಾರಿ ನಿಮ್ಮ ನಿಮ್ಮ ಮನೆಯಲ್ಲೆ ಆಚರಿಸಿ ಮನೆಯವರ ಜೊತೆಯಲ್ಲೆ ಆಚರಿಸಿ” ಎಂದು ಬರೆದುಕೊಂಡಿದ್ದಾರೆ.
Advertisement
ಈ ಹಿಂದೆ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸೇರಿದಂತೆ ಹಲವೆಡೆ ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದರು. ಅಲ್ಲದೇ ಏಪ್ರಿಲ್ 24ರ ದಿನ ಪ್ರತೀ ವರ್ಷ ಅಭಿಮಾನಿಗಳು ತುಂಬಿ ತುಳುಕುತ್ತಿದ್ದರು. ಆದರೆ ಇದಕ್ಕೆಲ್ಲಾ ಕೊರೊನಾ ವೈರಸ್ ಅಡ್ಡಿ ಮಾಡಿದೆ.
Advertisement
ಇದೇ ದಿನ ದೊಡ್ಮನೆ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡಲಿದೆ. ರಾಘವೇಂದ್ರ ರಾಜ್‍ಕುಮಾರ್ ಪುತ್ರ ಯುವರಾಜ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಹುಟ್ಟುಹಬ್ಬದ ದಿನ ಫೇಸ್‍ಬುಕ್ ಲೈವ್ ಬಂದು ರಾಜ್‍ಕುಮಾರ್ ಅವರ ಬಗ್ಗೆ ರವಿಶಂಕರ್ ಗುರೂಜಿ ಜೊತೆ ಮಾತನಾಡಲಿದ್ದಾರೆ. ಕೇವಲ ಕುಟುಂಬದವರು ಮತ್ತು ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
Going live tomorrow with @SriSri tomorrow on appaji’s birthday ,please join us. #StayHomeStaySafe pic.twitter.com/1CbsMhMWie
— DrShivaRajkumar (@NimmaShivanna) April 23, 2020