ಕರುನಾಡ ಕಣ್ಮಣಿ, ಕನ್ನಡದ ಮುತ್ತುರಾಜ್, ದಾದಾ ಸಾಹೇಬ್ ಫಾಲ್ಕೆ ವಿಜೇತ, ಕನ್ನಡದ ಮೇರುನಟ ಬಿರುದಾಂಕಿತ ಡಾ.ರಾಜ್ ಕಟ್ಟಿಸಿದ ಮನೆಯಲ್ಲಿ ಚಿತ್ರರಂಗದಿಂದ ನಿವೃತಿಯಾದ ಬಳಿಕ ಆ ಮನೆಯಲ್ಲಿ ವಾಸಿಸಬೇಕೆಂಬ ಮಹಾದಾಸೆ ಹೊಂದಿದ್ರು. ಆದ್ರೆ ಅವರ ಆಸೆ ಈಡೇರಲಿಲ್ಲ. ಮನೆಯೇನು ನಿರ್ಮಾಣವಾಯ್ತು ಅಲ್ಲಿ ವಾಸ ಮಾಡೋ ಭಾಗ್ಯ ಮಾತ್ರ ಆ ಮೇರುನಟನಿಗೆ ಸಿಗಲೇ ಇಲ್ಲ. ಆ ಮನೆಗೆ ಭೇಟಿ ಕೊಡುವ ವೇಳೆಗೂ ಮುನ್ನ ಕಾಡುಗಳ್ಳ ವೀರಪ್ಪನ್ ರಾಜ್ ಅವರನ್ನು ಕಿಡ್ನಾಪ್ ಮಾಡಿದರು. ನಂತರ ಗಾಜನೂರಿಗೆ ಅವರು ಬಂದು ವಾಸ ಮಾಡಲೂ ಸಾಧ್ಯವಾಗಿಲ್ಲ.
Advertisement
ಹೌದು, ಇಂದು ಕನ್ನಡದ ಮೇರುನಟ, ವರನಟ ಖ್ಯಾತಿಯ ಡಾ.ರಾಜ್‍ಕುಮಾರ್ ಅವರ 93 ನೇ ಹುಟ್ಟುಹಬ್ಬ. ಕನ್ನಡ ಚಿತ್ರರಂಗಕ್ಕೆ ರಾಜ್ ಅವರ ಕೊಡುಗೆ ಅನನ್ಯ. ಡಾ.ರಾಜ್‍ಕುಮಾರ್ ಹೊರತು ಪಡಿಸಿ ಸ್ಯಾಂಡಲ್‍ವುಡ್ ಕಲ್ಪನೆಯೂ ಅಸಾಧ್ಯ. ಮೇರು ನಟ ಗಡಿಜಿಲ್ಲೆ ಚಾಮರಾಜನಗರದ ಸುಪುತ್ರ ರಣಧೀರ ಕಂಠೀರವ, ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜ್ ತಮ್ಮ ಕಡೆಯ ದಿನಗಳನ್ನು ಹುಟ್ಟೂರು ಗಾಜನೂರಿನಲ್ಲಿ ಕಳೆಯಬೇಕೆಂಬ ಮಹಾದಾಸೆ ಹೊಂದಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB
Advertisement
Advertisement
ಈ ವಿಚಾರವನ್ನು ಕುಟುಂಬಸ್ಥರ ಬಳಿ ಹಲವು ಬಾರಿ ಕೂಡ ಹೇಳಿಕೊಂಡಿದ್ದರು. ಅವರ ಆಸೆ ಈಡೇರಿಸುವ ನಿಟ್ಟಿನಲ್ಲಿ ಕೂಡ ಚಾಮರಾಜನಗರದ ಗಡಿ ತಾಳವಾಡಿಯ ಗಾಜನೂರಿನಲ್ಲಿ ಒಂದು ಮನೆ ಕೂಡ ನಿರ್ಮಾಣ ಮಾಡಲಾಯ್ತು. ಆದ್ರೆ ಅವರು ಆ ಮನೆಯಲ್ಲಿ ವಾಸ ಮಾಡುವ ಕನಸು ಅವರ ಆಗಲಿಕೆಯಿಂದ ಕಮರಿ ಹೋಯ್ತು. ಇದೀಗ ಆ ಮನೆಯಲ್ಲಿ ಡಾ.ರಾಜ್ ಸಹೋದರಿ ನಾಗಮ್ಮ ಹಾಗೂ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಅಲ್ಲದೇ ಕಾಡುಗಳ್ಳ ವೀರಪ್ಪನ್ ಅಭಿಮಾನಿಗಳ ಆರಾಧ್ಯ ದೈವರನ್ನು ಅಪಹರಿಸಿದ್ದು ಗಾಜನೂರಿನಲ್ಲಿ. ಆ ಹಿನ್ನೆಲೆ ಮತ್ತೆ ಗಾಜನೂರಿನಲ್ಲಿ ಬಂದು ವಾಸಿಸಲು ಸಾಧ್ಯವಾಗಲೇ ಇಲ್ಲ.
Advertisement
ಪ್ರೀತಿಯ ತಂಗಿ ನಾಗಮ್ಮ ಅಂದ್ರೆ ರಾಜ್‍ಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಸದಾ ಶೂಟಿಂಗ್‍ನಲ್ಲಿ ಬ್ಯುಸಿಯಿರುತ್ತಿದ್ದ ರಾಜ್‍ಕುಮಾರ್ ಹಾಗೂ ಅವರ ಮಡದಿ ಪಾರ್ವತಮ್ಮ ರಾಜ್‍ಕುಮಾರ್. ಈ ವೇಳೆ ರಾಜ್ ಅವರ ಕುಟುಂಬದ ಮುದ್ದು ಮಕ್ಕಳಾದ ಶಿವಣ್ಣ, ರಾಘಣ್ಣ, ಪುನೀತ್ ಅವರನ್ನು ಲಾಲನೆ, ಪೋಷಣೆ ಮಾಡಿದ್ದೆ ನಾಗಮ್ಮ. ಇದೀಗ ನಾಗಮ್ಮ ಕೂಡ ಅಣ್ಣನಿಗೆ ಬರ್ತ್ ಡೇ ವಿಶ್ ಮಾಡಿದ್ದು, ಪ್ರೀತಿಯ ಅಣ್ಣನನ್ನು ನೆನೆದು ಕಣ್ಣೀರಾಕಿದ್ದಾರೆ. ಅಲ್ಲದೆ ಅಣ್ಣನ ಆಸೆಯ ಮನೆಯಲ್ಲಿ ತಾವು ವಾಸಿಸುತ್ತಿರುವ ಬಗ್ಗೆ ಕುಟುಂಬದವರು ನೆನೆದುಕೊಳ್ತಿದ್ದಾರೆ.
ಹೊಸ ಮನೆಯಷ್ಟೇ ಹಳೆಯ ಮನೆಯಲ್ಲೂ ಕೂಡ ಅಣ್ಣಾವ್ರ ಬಾಲ್ಯದ ನೆನಪು ಬಹಳಷ್ಟಿದೆ. ಅವರು ಹುಟ್ಟಿ ಬೆಳೆದಿದ್ದು ಹಳೆಯ ಮನೆಯಲ್ಲಿ. ನಾಟಕಗಳಿಗೆ ಹೋದ ನಂತರ ಇಲ್ಲಿಗೆ ಬರೋದು ಕಡಿಮೆಯಾಯ್ತು. ಸಿನಿಮಾ ನಟನೆಗೆ ಹೋದ ಮೇಲೆ ರಾಜ್ ಅವರು ಚೆನೈನಲ್ಲಿ ವಾಸ ಮಾಡ್ತಿದ್ರು. ಹಳೆಯ ಮನೆಯನ್ನು ದೇವರ ಮನೆ ಅನ್ನೋ ರೀತಿ ನೋಡುತ್ತಿದ್ದರು. ಈ ಹಿನ್ನೆಲೆ ಹಳೆಯ ಮನೆಯನ್ನು ಕೂಡ ರಾಜ್ ಕುಟುಂಬ ಉಳಿಸಿಕೊಂಡಿದೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್ ನೆನೆದು ತಂಗಿ ಕಣ್ಣೀರು
ರಾಜ್ ಭೌತಿಕವಾಗಿ ಇಹಾ ಲೋಕ ತ್ಯಜಿಸಿದರೂ ಕೂಡ ಅಭಿಮಾನಿಗಳ ನೆಚ್ಚಿನ ಅಣ್ಣಾವ್ರು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಸಾಕಷ್ಟು ಆಸೆ,ನಿರೀಕ್ಷೆ ಇಟ್ಟು ಕಟ್ಟಿಸಿದ ಮನೆಯಲ್ಲಿ ರಾಜ್ ವಾಸ ಮಾಡಲಿಲ್ಲ ಅನ್ನೋ ಕೊರಗು ಮಾತ್ರ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಮನೆ ಮಾಡಿದೆ.