ಬೆಂಗಳೂರು: ‘ಕನ್ನಡಿಗರ ಕಣ್ಮಣಿ’ ಪುನೀತ್ ರಾಜ್ ಕುಮಾರ್ ಅವರ ಮಹದಾಸೆ ಈಡೇರಿದೆ. ಯುವರತ್ನ ಪ್ರಚಾರದ ವೇಳೆ ಅಭಿಮಾನಿಗಳ ಅಭಿಮಾನ ಕಂಡು ಅಪ್ಪು ಪುಳಕಿತಗೊಂಡಿದ್ದರು. ಅಲ್ಲದೆ ‘ಅಭಿಮಾನಿ ದೇವರಿಗೆ’ ಒಟ್ಟಿಗೆ ಊಟ ಹಾಕಿಸುವ ಮನದಾಸೆಯೊಂದನ್ನು ಇಟ್ಟುಕೊಂಡಿದ್ದು, ಪತ್ನಿ ಅಶ್ವಿನಿ ಬಳಿ ಹೇಳಿಕೊಂಡಿದ್ದರು.
Advertisement
ಹೌದು. ದೊಡ್ಮನೆಯ ದೊಡ್ಡ ಗುಣ ಇದು. ಅನ್ನಸಂತರ್ಪಣೆ ಸ್ವತಃ ಪುನೀತ್ ಬಯಕೆ ಅಂತೆ. ಮಂಗಳವಾರ ಬೆಂಗಳೂರಿನಲ್ಲಿ ಪ್ಯಾಲೇಸ್ ಗ್ರೌಂಡ್‍ನಲ್ಲಿ 40 ಸಾವಿರಕ್ಕೂ ಹೆಚ್ಚು ಜನ ದೇವರ ಪ್ರಸಾದ ಎಂಬಂತೆ ಸ್ವೀಕರಿಸಿದ್ದಾರೆ. ಇದು ಅಪ್ಪು ಮಹದಾಸೆಯಾಗಿತ್ತು. ಇದನ್ನೂ ಓದಿ: 46 ವರ್ಷಕ್ಕೆ ನನ್ನ ತಮ್ಮ ದೇವರಿಗೆ ತುಂಬಾ ಇಷ್ಟ ಆಗ್ಬಿಟ್ಟ: ಶಿವಣ್ಣ
Advertisement
Advertisement
ಯುವರತ್ನ ಪ್ರಚಾರದ ವೇಳೆ ದೂರದೂರುಗಳಿಗೆ ಪ್ರಚಾರಕ್ಕಾಗಿ ಸುತ್ತಿದ್ದ ಅಪ್ಪುಗೆ ಜನರು ತೋರಿಸಿದ ಪ್ರೀತಿ ನೋಡಿ ಇವರಿಗೆಲ್ಲ ಒಂದೇ ಒಂದು ಬಾರಿ ಊಟ ಹಾಕಿಸಬೇಕಲ್ಲ ಎಂದು ಪತ್ನಿಯತ್ತ ಹೇಳಿಕೊಂಡಿದ್ದರಂತೆ. ಅಪ್ಪು ಆ ಮನದಾಸೆ, ಮಹದಾಸೆಯನ್ನು ಅಣ್ಣಾವ್ರ ಕುಟುಂಬ ಈಡೇರಿಸಿದೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ
Advertisement
ದೊಡ್ಮನೆ ಧನ್ಯವಾದ:
12 ದಿನಗಳ ಕಾಲ ಶಾಂತಿ ಸುವ್ಯವಸ್ಥೆ ಕಾಪಾಡಿದ ಅಭಿಮಾನಿಗಳು, ಪೊಲೀಸರಿಗೆ ದೊಡ್ಮನೆ ಕುಟುಂಬ ಪ್ರೀತಿಯಿಂದ ಕೃತಜ್ಞತೆ, ಧನ್ಯವಾದ ಅರ್ಪಿಸಿದೆ. ಅಭಿಮಾನಿ ಸಾಗರ ನೋಡಿದ ಅಪ್ಪು ಪತ್ನಿ ಅಶ್ವಿನಿ ಕಣ್ಣೀರಾಗಿದ್ರು. ಶಿವಣ್ಣ ಮಾತಾಡಿ, ಅಪ್ಪು ಅಗಲಿದ ನೋವಿದೆ. ಅಭಿಮಾನಿಗಳು ಪ್ರಸಾದ ಅಂತಿದ್ದಾರೆ. ಇದೇ ವೇಳೆ ಅಭಿಮಾನಿಗಳನ್ನು ದೇವರು ಅಂತ ಅಪ್ಪಾಜಿ ಹೇಳ್ತಿದ್ದನ್ನು ಸ್ಮರಿಸಿಕೊಂಡ್ರು. ರಾಘಣ್ಣ ಅವರಂತೂ ಅಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರ ಹೇಳಿದ್ರು. ಅಲ್ಲದೆ ಅಪ್ಪಾಜಿ, ಅಪ್ಪು ಅವರ ಒಳ್ಳೆಯ ಕೆಲಸಗಳನ್ನು ಮುಂದುವರಿಸೋಣ ಅಂತ ಕರೆ ನೀಡಿದ್ರು.