ರಾಜ್ಯದಲ್ಲೇ ಮೊದಲ ಬಾರಿಗೆ ಡಾ.ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ

Public TV
3 Min Read
PUNEETH 1

ಬೆಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ, ನಗುವಿನ ಒಡೆಯ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಅಧಿಕೃತವಾಗಿ ಅನಾವರಣಗೊಂಡಿದೆ. ರಾಜ್ ಕುಟುಂಬದ ಜೊತೆ ಸೇರಿ ಖುದ್ದು ಸಿಎಂ ಅವರೇ ಪುತ್ಥಳಿಯನ್ನ ಲೋಕರ್ಪಾಣೆ ಮಾಡಿದ್ದಾರೆ.

PUNEETH

ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಹೆಸರು ಕೇಳಿದರೆನೇ ಅದೇಷ್ಟೋ ಜನ ಭಾವುಕರಾಗ್ತಾರೆ. ಕಣ್ಣೀರು ಸುರಿಸ್ತಾರೆ. ಕನ್ನಡ ಚಿತ್ರರಂಗದ ಮೇರು ನಟನಲ್ಲದೇ, ತಮ್ಮ ಸಾಮಾಜಮುಖಿ ಕಾರ್ಯಗಳಿಂದ ಇಡೀ ಜಗತ್ತಿಗೆ ಪರಿಚಿತರಾಗಿರುವ ಅಪ್ಪುವಿಗೆ ಬಿಬಿಎಂಪಿ ನೌಕರರ ಕನ್ನಡ ಸಂಘ ವಿಶೇಷ ಗೌರವ ಸಲ್ಲಿಸಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಅಧಿಕೃತವಾಗಿ ಪುತ್ಥಳಿ ನಿರ್ಮಾಣ ಮಾಡಿ ಗೌರವ ಸಲ್ಲಿಸಿದೆ.

ASHWINI

ಬಿಬಿಎಂಪಿ ಕೇಂದ್ರ ಕಛೇರಿ ಆವರಣದ, ಬಿಬಿಎಂಪಿ ನೌಕರರ ಕನ್ನಡ ಸಂಘದ ಕಟ್ಟಡದ ಮುಂಭಾಗವೇ ಪುನೀತ್ ಪುತ್ಥಳಿ ಅನಾವರಣಗೊಂಡಿದೆ. ಮೂರುಕಾಲು ಅಡಿ ಎತ್ತರವಿರುವ ಈ ಪುತ್ಥಳಿಯ ವಿನ್ಯಾಸವನ್ನ ಸಪ್ತಗಿರಿ ಎಂಟರ್ ಪ್ರೈಸಸ್ ನ ಸಾಯಿದತ್ತ ಎಂಬುವವರು ಮಾಡಿದ್ದಾರೆ. ಪುತ್ಥಳಿ ಸಿದ್ಧಗೊಳ್ಳುವಾಗ, ರಾಜ್ ಫ್ಯಾಮಿಲಿ ಕೆಲ ಬದಲಾವಣೆಗಳನ್ನ ಮಾಡಿಸಿ, ಅಂತಿಮ ರೂಪ ಕೊಡಿಸಿದ್ದಾರೆ. ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಮುನಿರತ್ನ, ಅಶ್ವಿನಿ ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಸೇರಿದಂತೆ ಅವರ ಮನೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು ರಾಜ್ಯದ ಮೊದಲ ಪುತ್ಥಳಿಯನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಸಿಎಂ ಬೊಮ್ಮಾಯಿ ಅನಾವರಣ ಗೊಳಿಸಿದರು.

Puneeth 5

ಪುನೀತ್ ಪುತ್ಥಳಿ ಅನಾವರಣದ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್ ದೀಪ ಬೆಳಗುವುದರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತೆರಳಿದ್ರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಡಾ.ಪುನೀತ್ ರಾಜ್ ಕುಮಾರ್ ಪ್ರತಿಯೊಬ್ಬರ ಕನ್ನಡಿಗರ ಉಸಿರಿನಲ್ಲಿ ಬೆರೆತು ಹೋಗಿದ್ದಾರೆ. ಅವರ ಅಗಲಿಕೆ ನೋವಿನಿಂದ ಹೊರಬರುವುದಕ್ಕೆ ಸಾಧ್ಯ ಆಗ್ತಿಲ್ಲ. ರಾಜ್ಯದ ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ ಸದದ್ಯನನ್ನ ಕಳೆದಕೊಂಡ ನೋವು ರಾಜ್ಯದ ಮನೆ ಮನೆಯಲ್ಲಿ ಇದೆ. ಅವರ ಮುಗ್ಧತೆ ಅವರ ಆಕರ್ಷಣೆ ಪುನೀತ್ ಸದಾ ನಮ್ಮ ಜೊತೆನೆ ಇರ್ತಾರೆ. ಕರ್ನಾಟಕ ರತ್ನವನ್ನ ನಾವು ಘೋಷಣೆ ಮಾಡಿದ್ದೇವೆ. ಶೀಘ್ರದಲ್ಲೇ ಕುಟುಂಬದ ಸದಸ್ಯರ ಜೊತೆ ಮಾತನಾಡಿ ಸಮಯ ನಿಗದಿ ಮಾಡೋದಾಗಿ ತಿಳಿಸಿದ್ರು. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ ಸಂಜಯ್ ದತ್

PUNEETH 3

ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್ ಪುನೀತ್ ನೆನೆದು ಭಾವುಕರಾದ್ರು. ಅಪ್ಪು ಬಗ್ಗೆ ಏನು ಮಾತಾಡೋದು ಮಾತು ಬರಲ್ಲ ಯೂನಿವರ್ಸಿಟಿಲಿ ನನ್ನ ತಮ್ಮನಿಗೆ ಡಾಕ್ಟರೇಟ್ ಕೊಟ್ಟಿದ್ದಾರೆ. 46 ನೇ ವಯಸ್ಸಿನಲ್ಲಿ ನನ್ನ ತಮ್ಮನಿಗೆ ಡಾಕ್ಟರೇಟ್ ಕೊಟ್ಟಿದ್ದಾರೆ. ಅಪ್ಪಾಜಿಗೂ 46 ನೇ ವಯಸ್ಸಿನಲ್ಲೂ ಡಾಕ್ಟರೇಟ್ ಗೆ ಬಂದಿದ್ದು. ಮತ್ತೆ ಪುತ್ಥಳಿ ಅನಾವರಣ ಕೂಡ ಅಪ್ಪಾಜಿದು ಮತ್ತು ಅಪ್ಪು ಒಂದೇ ತಿಂಗಳಲ್ಲಿ ಅನಾವರಣ ಆಗಿದೆ. ಇದನ್ನೆಲ್ಲಾ ನೋಡ್ತಾ ಇದ್ದರೆ ಯಾರು ಇದನ್ನ ಪೋಣಿಸುತ್ತಾ ಇದ್ದಾರೆ ಅನ್ಸುತ್ತೆ. ನನ್ನ ಕನ್ನಡಿಗರ ಸ್ವಂತ ಏನೋ ಹೇಳಬೇಕು ಅಂತಾ ಬಂದು ಅರ್ಜೆಂಟ್ ಅರ್ಜೆಂಟ್ ಆಗಿ ಹೋಗಿ ಬಿಟ್ಟ ಅಂತಾ ಭಾವುಕರಾದ್ರು. ಬಳಿಕ ಸಿಎಂ ಬೊಮ್ಮಾಯಿ ಮತ್ತು ಬಿಬಿಎಂಪಿ ನೌಕರರ ಸಂಘಕ್ಕೆ ಅಭಿನಂದನೆ ಸಲ್ಲಿಸಿದ್ರು.

RAJKUMAR

ಕಾರ್ಯಕ್ರಮದ ಪ್ರಮುಖ ಉದ್ದೇಶ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನು ವಿತರಣೆ ಮಾಡಿದ್ರು. ಕಾರ್ಯಕ್ರಮದ ಆಯೋಜನೆ ಮಾಡಿದ್ದ ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಪುನೀತ್ ರಾಜ್ ಕುಮಾರ್ ಸದಾ ನಮ್ಮ ಜೊತೆನೆ ಇರ್ತಾರೆ. ಪುತ್ಥಳಿ ಅನಾವರಣ ಇಲ್ಲೆ ಮೊದಲ ಮಾಡಬೇಕು ಅಂತಾ ತೀರ್ಮಾನ ಮಾಡಿದ್ದೆವು ಅದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅವರ ನೆನಪಿನ ಕಾರ್ಯಕ್ರಮಗಳು ಮುಂದುವರಿಸೋಣ ಅಂತಾ ತಿಳಿಸಿದ್ರು. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

RAGHANNA 1

ಒಟ್ಟಾರೆ ಪ್ರೀತಿಯ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅಗಲಿ ಐದು ತಿಂಗಳಾಗ್ತಿದೆ. ಅವರ ಅಗಲಿಕೆಯಿಂದ ಜನ ಹೊರ ಬರ್ತಿಲ್ಲ. ಅವರ ಸಮಾಜಮುಖಿ ಕಾರ್ಯ ಮತ್ತು ಆದರ್ಶಗಳನ್ನ ಪಾಲಿಸುತ್ತಾ ಅವರನ್ನ ಜೀವಂತವಾಗಿ ನಮ್ಮ ಹೃದಯದಲ್ಲಿ ಇಡೋಣ ಅನ್ಮೋದು ನಮ್ಮೆಲ್ಲರ ಆಶಯವಾಗಿದ.

Share This Article
Leave a Comment

Leave a Reply

Your email address will not be published. Required fields are marked *