ನಟ ಪುನೀತ್ ರಾಜ್ ಕುಮಾರ್ (Puneeth Raj Kumar) ಅರು ನಮ್ಮನ್ನಗಲಿ ಇಂದಿಗೆ ಭರ್ತಿ ಒಂದು ವರ್ಷವಾಗಿದೆ. ಅಂದಿನಿಂದಲೂ ಇಂದಿನವರೆಗೂ ಅಭಿಮಾನಿಗಳು ಮಾತ್ರ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಅಪ್ಪುವನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಅಭಿಮಾನಿಗಳ ದಂಡು ಸಮಾಧಿಯತ್ತ ಹರಿದುಬರುತ್ತಿದ್ದು, ಕಣ್ಣೀರಾಕುತ್ತಿದ್ದಾರೆ.
Advertisement
ಕಂಠೀರವ ಸ್ಟುಡಿಯೋ (Kanteerava Studio) ಮುಂಭಾಗದಲ್ಲಿ ಅಭಿಮಾನಿಗಳು ನೆರೆದಿದ್ದು, ಅಪ್ಪು ಫೋಟೋ ನೋಡಿಕೊಂಡು ಮಹಿಳಾ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಅಂತೆಯೇ ಶಿವಮೊಗ್ಗದಿಂದ ಬಂದಿರುವ ವೃದ್ಧೆಯೊಬ್ಬರು ಮತ್ತೊಮ್ಮೆ ಹುಟ್ಟಿ ಬನ್ನಿ. ಯಾರ ಹೊಟ್ಟೆಯಲ್ಲಾದರೂ ಸರಿ ಮತ್ತೊಮ್ಮೆ ಹುಟ್ಟಿ ಬಾರಪ್ಪ ಅಂತ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು `ಗಂಧದಗುಡಿ’ ತೊರೆದು 1 ವರ್ಷ- ನೋವು, ಕಣ್ಣೀರಿನ ಮಧ್ಯೆ ಪುಣ್ಯಸ್ಮರಣೆ
Advertisement
Advertisement
ಇತ್ತ ಗುಬ್ಬಿಯಿಂದ ಬಂದಿರುವ ವೃದ್ಧೆ ಸುಮಿತ್ರಾ ಬಾಯಿ ಕಡ್ಲೆಪುರಿ ಹಾಗೂ ಬತ್ತಾಸು ಹಾರ ತಂದಿದ್ದಾರೆ. 20 ದಿನಗಳ ಕಾಲ ಸೂಕ್ಷ್ಮವಾಗಿ ಕಡ್ಲೆಪುರಿಗಳನ್ನು ಪೋಣಿಸಿ ಇದರ ಮಧ್ಯೆ ಬತ್ತಾಸು ಸೇರಿಸಿ ಅಜ್ಜಿ ಹಾರ ತಯಾರಿಸಿದ್ದಾರೆ. ಇದೀಗ ಈ ಹಾರದೊಂದಿಗೆ ಅಪ್ಪು ಸಮಾಧಿಗೆ ಭೇಟಿ ನೀಡಿದ್ದು, ಅಶ್ವಿನ್ ಪುನೀತ್ ರಾಜ್ ಕುಮಾರ್ ಅವರಿಂದ ಸಮಾಧಿಗೆ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ ಅಸೌಇನಿ ಅವರ ಬರುವಿಕೆಗಾಗಿ ಅಜ್ಜಿ ಕಾಯುತ್ತಾ ಕುಳಿತಿದ್ದಾರೆ.
Advertisement
ಇನ್ನೊಂದೆಡೆ ಬೆಣ್ಣೆಯಲ್ಲಿ ಅಪ್ಪು ಪುತ್ಥಳಿ ಕೆತ್ತನೆ ಮಾಡಿ ಕಲಾವಿದರು ಸಮಾಧಿ ಬಳಿ ತಂದಿದ್ದಾರೆ. ಬೆಂಗಳೂರಿನ ಚೆನ್ನೈಸ್ ಅಮೃತಾ ಕಲಾ ಸಂಸ್ಥೆಯ ಕಲಾವಿದರ ಕೈ ಚಳಕದಿಂದ 46 ಕೆಜಿ ಬೆಣ್ಣೆಯಲ್ಲಿ ಪುನೀತ್ ಫೋಟೋ ಅರಳಿದೆ. ಬೆಣ್ಣೆಯ ಪುತ್ಥಳಿಗೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಇಂದು ಕರ್ನಾಟಕ ರತ್ನಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಅಪ್ಪು ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.