ಬೆಂಗಳೂರು: ಪಾರ್ವತಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಅವರು ಬದುಕಿ ಬರ್ತಾರೆ ಅನ್ನೋ ನಂಬಿಕೆ ಇತ್ತು ಅಂತಾ ರಾಮಯ್ಯ ಆಸ್ಪತ್ರೆ ವೈದ್ಯರು ಗದ್ಗದಿತರಾದ್ರು.
ನಿನ್ನೆಯವರೆಗೂ ಅವರು ಚೇತರಿಕೆಯಾಗ್ತಾರೆ ಅಂತಾ ಅಂದುಕೊಂಡಿದ್ವಿ. ಯಾಕಂದ್ರೆ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿತ್ತು. ಅಂತೆಯೇ ಅವರು ಮಾತನಾಡಲು ಪ್ರಯತ್ನಿಸುತ್ತಿದ್ದರು. ಆದ್ರೆ ನಿನ್ನೆ ರಾತ್ರಿ ದಿಢೀರ್ ಬ್ಲಡ್ ಪ್ರೆಷರ್ ಜಾಸ್ತಿ ಆಗಿದ್ದು, ಕಂಟ್ರೋಲ್ ಗೆ ಸಿಕ್ಕಿಲ್ಲ. ಹೀಗಾಗಿ ರಾತ್ರಿ 10 ಗಂಟೆ ಸುಮಾರಿಗೆ ಕಂಪ್ಲೀಟ್ ಆಗಿ ನಮ್ಗೆ ಹೋಪ್ಸ್ ಹೋಯ್ತು ಅಂತಾ ಭಾವುಕರಾದ್ರು.
ಪಾರ್ವತಮ್ಮ ಅವರಿಗೆ ಕ್ಯಾನ್ಸರ್, ಶುಗರ್, ಕಿಡ್ನಿ ಹಾಗೂ ಲಿವರ್ ಇನ್ ಫೆಕ್ಷನ್ ಆಗಿತ್ತು. ಹೀಗಾಗಿ ಇಂದು ಮುಂಜಾನೆ ಸುಮಾರು 4.40ರ ವೇಳೆಗೆ ಅವರಿಗೆ ಹೃದಯಾಘಾತವಾಯ್ತು. ಈ ಸಂದರ್ಭದಲ್ಲಿ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಇದ್ರು. ಬಳಿಕ ಅವರ ಕುಟುಂಬಸ್ಥರಿಗೆ ಮಾಹಿತಿ ನಿಡಿದ್ದೇವೆ ಅಂತಾ ಹೇಳಿದ್ರು.