ದಾವಣಗೆರೆ: ಬಟ್ಟೆಗಿಂತ ಬದುಕು ಮುಖ್ಯವಾಗಿದ್ದು, ಬಟ್ಟೆ ಕಾರಣಕ್ಕಾಗಿ ಹುಟ್ಟಿದ ಸಂಘರ್ಷದಲ್ಲಿ ಬದುಕು ಹಾಳಾಗಬಾರದು ಎಂದು ಸಾಣಿಹಳ್ಳಿಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹಿಜಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತು ಮಕ್ಕಳಿಗೆ ತಿಳಿ ಹೇಳಿದ್ದಾರೆ.
Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮರಸ್ಯ ಬದುಕಿಗೆ ಬಸವತತ್ವದ ಸಂದೇಶವಿದೆ. ಅದನ್ನ ಪಾಲನೆ ಮಾಡಬೇಕಾಗಿದೆ. ವಿದ್ಯಾರ್ಥಿ ಸಮೂಹವನ್ನ ಗಮನದಲ್ಲಿ ಇಟ್ಟುಕೊಂಡು ಅವರಲ್ಲಿ ಜಾತಿ ವಿಷ ಬೀಜ ಬಿತ್ತುವ ಕೆಲಸ ನಡೆದಿದೆ. ನಾವು ಹಾಕಿಕೊಳ್ಳುವ ಬಟ್ಟೆಗಳು ಕಾವಿ, ಖಾಕಿ ಅಥವಾ ಖಾದಿ ಆಗಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕ್ತಾರೆ, ಈಗ ತೆಗೆಯೋಕಾಗಲ್ವಾ..?- ವಿದ್ಯಾರ್ಥಿಗಳು
Advertisement
Advertisement
ಈ ಬಟ್ಟೆಗಳಿಗಿಂತ ಬದುಕು ಮುಖ್ಯ. ಇದನ್ನ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸಾಮರಸ್ಯದ ಬದುಕಿನತ್ತ ಪ್ರತಿಯೊಬ್ಬರು ಸಾಗಬೇಕು. ಇದಕ್ಕೆ ಬಸವ ತತ್ವದಲ್ಲಿ ಇರುವ ಸಂದೇಶಗಳನ್ನ ಅರಿಯಬೇಕು. ಬಸವಧಿ ಶರಣರು ಅಜ್ಞಾನ ಅಳಿಸಿ ಸಮಾಜಿಕ ಸಾಮರಸ್ಯ ಮೂಡಿಸಿದ್ದರು. ಮಕ್ಕಳಲ್ಲಿ ಜಾತಿ ಧರ್ಮದ ಬಗ್ಗೆ ವಿಷಬೀಜ ಬಿತ್ತುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.