ಬೆಂಗಳೂರು: ಕೊರೊನಾ ಮೂರನೇ ಅಲೆ ನಮ್ಮ ದೇಶಕ್ಕೆ ಇನ್ನೂ ಬಂದಿಲ್ಲ ನಿಜ. ಆದರೇ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ, ಕೊರೊನಾ ಇನ್ನೂ ಜೀವಂತವಾಗಿದೆ. ಕೇರಳದಲ್ಲಿ ಪ್ರತಿನಿತ್ಯ 6 ರಿಂದ 8 ಸಾವಿರ ಕೇಸ್‍ಗಳು ಬರುತ್ತಿದೆ. ಜನ ನಿರ್ಲಕ್ಷ್ಯ ಮಾಡಬಾರದು ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೆಶಕರಾದ ಡಾ. ಮಂಜುನಾಥ್ ಹೇಳಿದ್ದಾರೆ.
Advertisement
ಈಗಾಗಲೇ ಕೊರೊನಾ ಮೂರನೇ ಅಲೆ ಬ್ರಿಟನ್, ರಷ್ಯಾ, ಅಮೆರಿಕಾ ಸೇರಿದಂತೆ ಹಲವೆಡೆ ಶುರುವಾಗಿದೆ. ರಷ್ಯಾದಲ್ಲಿ ಶೇ 75 ರಷ್ಟು ವ್ಯಾಕ್ಸಿನ್ ಆಗಿಲ್ಲದರ ಪರಿಣಾಮ ಅಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಭಾರತಕ್ಕೂ ಮೂರನೇ ಅಲೆ ಬರುವುದು ಪಕ್ಕ, ಆದರೇ ಯಾವಾಗ ಎನ್ನುವುದನ್ನು ನಿಖರವಾಗಿ ಜ್ಯೋತಿಷ್ಯ ರೀತಿ ಹೇಳುವುದಕ್ಕೆ ಆಗುವುದಿಲ್ಲ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಲಾಭಿಯೊಂದಿಗೆ ಸರ್ಕಾರವೂ ಶಾಮೀಲಾಗಿತ್ತೇ: ಕಾಂಗ್ರೆಸ್ ಪ್ರಶ್ನೆ
Advertisement
ಜನ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ಎಲ್ಲರೂ ವ್ಯಾಕ್ಸಿನ್ ಪಡೆಯಬೇಕು. ಇದರಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳವಣಿಗೆ ಆಗಲಿದೆ. ಹಾಗಂತ ವ್ಯಾಕ್ಸಿನ್ ಪಡೆದರೆ ಕೊರೊನಾ ಬರುವುದಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲು – ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು
Advertisement
Advertisement
ವ್ಯಾಕ್ಸಿನ್ ಪಡೆದವರಿಗೂ ಸೋಂಕು ಬರಬಹುದು, ವ್ಯಾಕ್ಸಿನ್ ಪಡೆದವರು ಸಹ ಕೊರೊನಾದಿಂದ ಮೃತಪಟ್ಟ ದಾಖಲೆಗಳಿವೆ. ಆದರೇ ಆ ಸಂಖ್ಯೆ ಕಡಿಮೆ ಇದೆ. ಶೇ 90 ರಷ್ಟು ವ್ಯಾಕ್ಸಿನ್ ಕೊರೊನಾದಿಂದ ರಕ್ಷಣೆ ನೀಡಿದರೆ ಮಾಸ್ಕ್ ಕೊರೊನಾ ಬರದಂತೆ ತಡೆಯುವ ಒಂದೇ ಒಂದು ಅಸ್ತ್ರ. ಹಾಗಾಗಿ ಜನ ಮಾಸ್ಕ್ ಇಲ್ಲದೇ ಮನೆಯಿಂದ ಹೊರಬರಲೇ ಬಾರದು. ಕೊರೊನಾ ನಿಯಮಗಳ ಪಾಲನೆ ಮಾಡುವುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.