ನವದೆಹಲಿ: ಭೇಟಿಯಾಗಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಟಾಯ್ಸ್ ಪಾರ್ಕ್ ನಿರ್ಮಾಣ ಮಾಡುವಂತೆ ಸಂಸದ ಡಾ.ಸಿ.ಎನ್.ಮಂಜುನಾಥ್ (Dr C N Manjunath) ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ (Nithin Gadkari) ಅವರಿಗೆ ಮನವಿ ಮಾಡಿದರು.
ಬೊಂಬೆನಾಡು ಚನ್ನಪಟ್ಟಣ ಬಳಿ ಬೆಂಗಳೂರು – ಮೈಸೂರು ಎಕ್ಸಪ್ರೆಸ್ ಕಾರಿಡಾರ್ ನಲ್ಲಿ Toys Park ನಿರ್ಮಿಸಿ ಬೊಂಬೆ ತಯಾರಿಕೆ ಉದ್ಯಮದ ಮೇಲೆ ಅವಲಂಬಿತರಾಗಿರುವ ಸ್ಥಳೀಯರಿಗೆ ವೇದಿಕೆ ಕಲ್ಪಿಸುವ ಬಗ್ಗೆ ಮತ್ತು ಬೊಂಬೆ ಉದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಕೇಂದ್ರ ಸಚಿವರಾದ ಶ್ರೀ @nitin_gadkari ಅವರನ್ನು ಭೇಟಿಯಾಗಿ ಮನವಿ ಮಾಡಿದೆ.
ನನ್ನ ಮನವಿಗೆ… pic.twitter.com/cdaLIFoiMR
— Dr.C.N.Manjunath (@DrCNManjunath) March 12, 2025
ದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿ ಅವರನ್ನು ಡಾ. ಮಂಜುನಾಥ್ ಬುಧವಾರ ಭೇಟಿಯಾದರು. ಈ ವೇಳೆ ಅವರು, ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ `ಚನ್ನಪಟ್ಟಣ ಬೊಂಬೆಗಳನ್ನು’ ಉತ್ತೇಜಿಸುವ ನಿಟ್ಟಿನಲ್ಲಿ ಟಾಯ್ಸ್ ಪಾರ್ಕ್ ನಿರ್ಮಿಸಿ ಸ್ಥಳೀಯ ಬೊಂಬೆ ತಯಾರಿಕರಿಗೆ ಮತ್ತು ಪ್ರವಾಸಿಗರಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಕೆಂಪು ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಚನ್ನಪಟ್ಟಣ ಬೊಂಬೆಗಳಿಗೆ ಐತಿಹಾಸಿಕ ಹಿನ್ನಲೆಯಿದ್ದು, ಬೊಂಬೆಗಳ ನಾಡು ಎಂದೇ ಪ್ರಸಿದ್ಧವಾಗಿದೆ. ಸಾವಿರಾರು ಕುಟುಂಬಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೊಂಬೆ ಉದ್ಯಮದ ಮೇಲೆ ಅವಲಂಬಿತವಾಗಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣದ ನಂತರ ಚನ್ನಪಟ್ಟಣ ನಗರಕ್ಕೆ ಆಗಮಿಸುವ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಹುಲ್-ಅಥಿಯಾ – ಬೇಬಿ ಬಂಪ್ ಫೋಟೋ ಶೂಟ್
ಇದರಿಂದಾಗಿ ಈ ಉದ್ಯಮದ ಮೇಲೆ ಅವಲಂಬಿತರಾಗಿರುವವರ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆ ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಚನ್ನಪಟ್ಟಣ ಸಮೀಪ ಟಾಯ್ಸ್ ಪಾರ್ಕ್ ನಿರ್ಮಿಸುವುದರಿಂದ ಸ್ಥಳೀಯವಾಗಿ ಬೊಂಬೆ ತಯಾರಿಕೆಯ ಮೇಲೆ ಅವಲಂಬಿತರಾಗಿರುವವರಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ. ಅಲ್ಲದೇ ಬೊಂಬೆಗಳ ನಾಡು ಎಂಬ ಚನ್ನಪಟ್ಟಣದ ಹಿರಿಮೆಯನ್ನು ಹೆಚ್ಚಿಸದಂತಾಗುತ್ತದೆ. ಈ ವಿಷಯವಾಗಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆದಷ್ಟು ಬೇಗ ನಿರ್ಮಾಣ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.