ತುಮಕೂರು: ಚುನಾವಣೆ ಸಮೀಪಿಸುತಿದ್ದಂತೆ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G Parameshwar) ಹಿಂದೂ (Hindu) ಧರ್ಮದ ಜಪ ಮಾಡುತ್ತಿದ್ದಾರೆ. ಕೊರಟಗೆರೆ ಕ್ಷೇತ್ರದ ಚಿಕ್ಕತೊಟ್ಲುಕೆರೆ ಅಟವಿ ಮಠದಲ್ಲಿ ಧರ್ಮಗೋಷ್ಠಿ ಮತ್ತು ಗೋ ಪೂಜೆ (Go Pooja) ಆಯೋಜನೆ ಮಾಡಿದ್ದಾರೆ.
Advertisement
ಈ ವೇಳೆ ಧರ್ಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿ.ಪರಮೇಶ್ವರ್, ಹಿಂದೂ ಧರ್ಮ ಬಹಳ ಶ್ರೇಷ್ಠವಾದ ಧರ್ಮ, ಹಿಂದೂ ಧರ್ಮದ ಬದ್ಧತೆಗಳು, ಹಿಂದೂ ಧರ್ಮ ಕೊಟ್ಟ ಅನೇಕ ವಿಚಾರಧಾರೆಗಳನ್ನು ಚರ್ಚೆ ಮಾಡಿ ಸಮಾಜಕ್ಕೆ ಇನ್ನೊಮ್ಮೆ ತಿಳಿಸುವ ಅವಶ್ಯಕತೆ ಇದೆ ಹೀಗಾಗಿ ಧರ್ಮಗೋಷ್ಠಿ ಆಯೋಜನೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ 108 ಅಂಬುಲೆನ್ಸ್ ನೌಕರರ ಹೋರಾಟದ ಎಚ್ಚರಿಕೆ
Advertisement
Advertisement
ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಬಗ್ಗೆ ಗೊಂದಲ ಎದ್ದಿದೆ. ಈ ಧರ್ಮ ಸಭೆಯಲ್ಲಿ ಅದಕ್ಕೆ ಸ್ಪಷ್ಟೀಕರಣ ಸಿಗಲಿದೆ ಎಂದಿದ್ದು, ಗೋ ಪೂಜೆಯ ಮಹತ್ವವನ್ನೂ ಸಾರಿದ್ದಾರೆ. ಗೋ ಪೂಜೆ ಅನ್ನೋದು ಹಿಂದೂ ಧರ್ಮದಲ್ಲಿ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ. ಗೋ ಪೂಜೆ ಮಾಡೋದ್ರಿಂದ ನಾವು 33 ಕೋಟಿ ದೇವರುಗಳಿಗೆ ತಲುಪುತ್ತೇವೆ. ಹಾಗಾಗಿ ನಾವು ಇವತ್ತು ಗೋ ಪೂಜೆ ಮಾಡಿ ಆ ಶ್ರೇಷ್ಠತೆಯನ್ನು ಗಳಿಸಿಕೊಳ್ಳಬೇಕು. ಅದರಿಂದ ಸಮಾಜಕ್ಕೆ, ಮನುಕುಲಕ್ಕೆ ಒಳ್ಳೆದಾಗಬೇಕು ಎಂದಿದ್ದಾರೆ. ಗೋ ಹತ್ಯೆ ನಿಷೇಧ ಕಾನೂನು ವಿರೋಧಿಸುವ ಪಕ್ಷದ ನಾಯಕ ಗೋ ಪೂಜೆಗೆ ಬೆಂಬಲ ಸೂಚಿಸಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ವಿಕೃತಕಾಮಿ ಉಮೇಶ್ ರೆಡ್ಡಿಗೆ ರಿಲೀಫ್ – ಸುಪ್ರೀಂನಿಂದ ಗಲ್ಲು ಶಿಕ್ಷೆ ರದ್ದು