ಬೆಂಗಳೂರು: ಅಂತರಾಷ್ಟ್ರೀಯ ಪುತ್ರಿಯರ ದಿನಾಚರಣೆ ಮತ್ತು ಸಾವಿತ್ರಿ ದಯಾಳ್ ಹುಟ್ಟುಹಬ್ಬದ ಪ್ರಯುಕ್ತ ರೇಸ್ ಕೋರ್ಸ್ ರೆನಿಸ್ಸನ್ ಹೋಟೆಲ್ ಸಭಾಂಗಣದಲ್ಲಿ 100 ಶಾಲಾ ಮಕ್ಕಳಿಗೆ ಟ್ಯಾಬ್, ಪಠ್ಯಪುಸ್ತಕ ಮತ್ತು 200 ಮಹಿಳೆಯರಿಗೆ ಟೈಲರಿಂಗ್ ಯಂತ್ರಗಳನ್ನು ದಯಾಳ್ ಫೌಂಡೇಷನ್ ಅಧ್ಯಕ್ಷರಾದ ನಿಶಾಂತ್ ದಯಾಳ್, ರಜನಿಶ್ವರ್ ದಯಾಳ್ ಮತ್ತು ಸುನೀತಾ ದಯಾಳ್ ಅವರು ವಿತರಿಸಿದರು.
ಅಧ್ಯಕ್ಷರಾದ ನಿಶಾಂತ್ ದಯಾಳ್ ಅವರು ಈ ಕುರಿತು ಮಾತನಾಡಿದ್ದು, ಕಳೆದ 15 ವರ್ಷದಿಂದ ದಯಾಳ್ ಫೌಂಡೇಷನ್ ವತಿಯಿಂದ ಶಿಕ್ಷಣ, ಪರಿಸರ ಕ್ರೀಡೆ, ಆರೋಗ್ಯದ ಬಗ್ಗೆ ಜನರ ಸೇವೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ
ಬಡ ಮಕ್ಕಳ ಹೃದಯ ಚಿಕಿತ್ಸೆಗೆ ಸಹಾಯಧನ ಮತ್ತು ಕ್ರೀಡೆಗಳಿಗೆ ಉತ್ತೇಜನ ನೀಡಲು ಕ್ರೀಡಾಪಟುಗಳಿಗೆ ಕ್ರೀಡಾ ಸಲಕರಣೆ ವಿತರಣೆ ಮಾಡಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ವರುಣ್ ಆರೋನ್ ಆಟಗಾರನಿಗೆ ಕ್ರೀಡಾ ಸಲಕರಣೆ ನಮ್ಮ ಫೌಂಡೇಷನ್ ನಿಂದ ವಿತರಿಸಲಾಯಿತು ಎಂದು ಹೇಳಿದರು. ಇದನ್ನೂ ಓದಿ: ನ್ಯಾಯಾಂಗದಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಬೇಕು: ಸಿಜೆಐ ರಮಣ
ಹೆಣ್ಣು ಮಗು ಎಂದು ಕೊರಗಬೇಡಿ, ಹೆಣ್ಣು ಮಕ್ಕಳು ಸಮಾಜದ ಕಣ್ಣು. ಮದರ್ ಥೇರಸಾ, ಇಂದಿರಾಗಾಂಧಿ, ಪಿ.ವಿ.ಸಿಂಧೂ, ಕಲ್ಪನಾ ಚಾವ್ಲ ಎಲ್ಲರೂ ಹೆಣ್ಣು ಮಕ್ಕಳಾಗಿ ಹುಟ್ಟಿ ವಿಶ್ವವೇ ಮೆಚ್ಚುವಂತಹ ಸಾಧನೆ ಮಾಡಿದರು. ಪುರುಷರಂತೆ ಸರಿಸಮಾನವಾಗಿ ಬಾಳಬೇಕು ಮತ್ತು ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಟೈಲರಿಂಗ್ ಯಂತ್ರಗಳನ್ನು ವಿತರಿಸಲಾಗಿದೆ. ಬೆಂಗಳೂರಿನಲ್ಲಿ ಎರಡು ಅನಾಥ ಶಾಲೆಯ ನೂರಾರು ಮಕ್ಕಳನ್ನು ದತ್ತು ಪಡೆಯಲಾಗಿದ್ದು, ವಸತಿ ಮತ್ತು ಶಿಕ್ಷಣವನ್ನು ಉಚಿತವಾಗಿ ನೀಡಿಲಾಗುತ್ತಿದೆ ಎಂದು ಹೇಳಿದರು.