ಮಂಗಳೂರು: ತುಳುವನ್ನು 8 ನೇ ಪರಿಚ್ಚೇದಕ್ಕೆ ಸೇರ್ಪಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.
ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದು, ಈ ವೇಳೆ ತುಳು ಭಾಷೆಯಲ್ಲಿಯೇ ಪ್ರಧಾನಿಯವರನ್ನು ಸ್ವಾಗತಿಸಿದ ವೀರೇಂದ್ರ ಹೆಗ್ಗಡೆಯವರು ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
Advertisement
ಬಳಿಕ ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ಮೈಸೂರು ಪೇಟ ತೊಡಿಸಿ, ಧರ್ಮಾಧಿಕಾರಿಯ ಪರವಾಗಿ ಪ್ರಾದೇಶಿಕ ಕ್ರೀಡೆ ಕಂಬಳದ ನೊಗದ ಮಾದರಿಯನ್ನು ಸಮರ್ಪಣೆ ಮಾಡಿದ್ರು. ವೀರೇಂದ್ರ ಹೆಗಡೆ ಅವರು ಪ್ರಧಾನಿಯನ್ನು ಶಾಲು ಹೊದಿಸಿ ಸನ್ಮಾನಿಸಿ, ಓಂ ನಮೋ ಶ್ರೀ ಮಂಜುನಾಥಃ ನಮೋ ನಮಃ ಎಂದು ಹೇಳುವ ಮೂಲಕ ಸ್ವಾಗತ ಕೋರಿದ್ರು.
Advertisement
Advertisement
ಉಜಿರೆಯ ಜನ್ ಧನ್ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದು, ಡಾ. ವಿರೇಂದ್ರ ಹೆಗಡೆ ಅವರ 50 ನೇ ವರ್ಷದ ಧರ್ಮಾಧಿಕಾರಿ ಪೂರೈಸಿದ ಅವಧಿಯಲ್ಲಿ ಆಗಮಿಸಿರುವ ಮೋದಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದ್ರು.
Advertisement
ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರು ಬಳಿಕ ಅಲ್ಲಿಂದ ನೇರವಾಗಿ ಧರ್ಮಸ್ಥಳಕ್ಕೆ ಬಂದು ಅಲ್ಲಿ ಶ್ರೀ ದೇವರ ದರ್ಶನ ಪಡೆದು, ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸೇವಿಸಿದ್ದಾರೆ. ಈ ವೇಳೆ ಪ್ರಧಾನಿ ಜೊತೆ ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಾ ಆರೋಗ್ಯದ ಬಗ್ಗೆ ಗಮನಹರಿಸುವಂತೆ ಕೇಳಿಕೊಂಡ್ರು. ಇದಕ್ಕುತ್ತರಿಸಿದ ಪ್ರಧಾನಿ ನನಗೆ ಕೆಲಸ ಮಾಡುವುದು ಅಭ್ಯಾಸವಾಗಿದೆ ಅಂತ ಹೇಳಿದ್ರು.
ನಂತರ ಪ್ರಧಾನಿಯವರು ಅಲ್ಲಿಂದ ಉಜಿರೆಯ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದತ್ತ ಆಗಮಿಸುತ್ತಿದ್ದಂತೆ ನೆರೆದಿದ್ದ ಜನರ ಮೋದಿ…ಮೋದಿ… ಎಂದು ಹರ್ಷದ್ಗೊರ ಎಲ್ಲಡೆಯಿಂದ ಕೇಳಿ ಬಂತು.