ರಾಮನಗರ: ಕಾಂಗ್ರೆಸ್ ಕುಟುಂಬ ರಾಜಕಾರಣ ಆರೋಪಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ (Dr. CN Manjunath) ತಿರುಗೇಟು ನೀಡಿದ್ದಾರೆ.
Advertisement
ರಾಮನಗರದಲ್ಲಿ (Ramanagara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ (Family Politics) ಅನ್ನೋದು ರಾಜ್ಯ, ದೇಶದಲ್ಲಿ ಅಪ್ರಸ್ತುತ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ (Congress Candidates List) ತೆಗೆದು ನೋಡಿದ್ರೆ ಗೊತ್ತಾಗುತ್ತೆ. ಮಗ-ಮಗಳು, ಸೊಸೆ-ಅಳಿಯ, ಅಣ್ಣ ಎಲ್ಲರೂ ಇದ್ದಾರೆ. ಅವರ ಟೀಕೆಗಳ ಬಗ್ಗೆ ಚರ್ಚೆ ಈಗ ಅಪ್ರಸ್ತುತ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹಣವಿಲ್ಲದೇ ರಾಜಕೀಯ ಪಕ್ಷ ನಡೆಸುವುದು ಸುಲಭವಲ್ಲ: ನಿತಿನ್ ಗಡ್ಕರಿ
Advertisement
Advertisement
ಕಳೆದ 10 ದಿನಗಳಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಸರಣಿ ಸಭೆಗಳನ್ನ ಮಾಡ್ತಿದ್ದಾರೆ. ನಿನ್ನೆ ಬೆಂಗಳೂರು ದಕ್ಷಿಣ, ಆರ್.ಆರ್ ನಗರ, ಕುಣಿಗಲ್‌ಗೆ ಹೋಗಿದ್ದೆ. ಬಹುಮುಖ್ಯವಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಎರಡೂ ಹೃದಯ ಒಟ್ಟಾಗಿದೆ. ಇದನ್ನೆಲ್ಲ ನೋಡ್ತಿದ್ರೆ ನಮ್ಮ ಗೆಲುವು 100% ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಇದು ಧರ್ಮ ಮತ್ತು ಅಧರ್ಮ ನಡುವೆ ಈ ಚುನಾವಣೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾನು ವ್ಯಾಖ್ಯಾನ ಮಾಡೋದಕ್ಕೆ ಹೋಗೋದಿಲ್ಲ. ಪ್ರತಿಯೊಂದು ಚುನಾವಣೆ ಆರೋಗ್ಯಕರವಾಗಿ ನಡೆಯಬೇಕು. ಮತದಾರರನ್ನ ಯಾವುದೇ ರೀತಿಯ ಅಡ್ಡ ದಾರಿಗೆ ಎಳೆಯಬಾರದು ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಖಚಿತ – ಜೋಶಿ ಭವಿಷ್ಯ