ಮೈಸೂರು: ಪ್ರಜಾಪ್ರಭುತ್ವ (Democracy) ಒಳ್ಳೆಯವರನ್ನು ಬಯಸುತ್ತದೆ. ಮಂಜುನಾಥ್ (Dr. C.N. Manjunath) ಅವರಂತಹವರು ರಾಜಕಾರಣಕ್ಕೆ ಬರಬೇಕು ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (HR Ranganath) ಹೇಳಿದರು.
ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್ ಮಂಜುನಾಥ್ ಅವರಿಗಾಗಿ ಮೈಸೂರಿನ ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕಾರ್ಯಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದರು.
ಜನರ ಬಯಕೆ ಪ್ರಕಾರ ಒಂದು ಸವಾಲು ಸ್ವೀಕರಿಸಿ. 35 ವರ್ಷ ಸರ್ಕಾರಿ ಸೇವೆ ಮುಗಿಸಿದ ಮೇಲೆ ಈ ರೀತಿಯ ಜನಾಭಿಪ್ರಾಯ ಮೂಡುವುದು ಕಷ್ಟ. ಆದರೆ ಡಾ. ಮಂಜುನಾಥ್ ಅವರಿಗೆ ಅದು ಸಿಕ್ಕಿದೆ. ಆಗ ಪ್ರಜಾಪ್ರಭುತ್ವಕ್ಕೆ ಒಬ್ಬ ಒಳ್ಳೆಯವರು ಸಿಕ್ಕಂತೆ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ದುಬೈನಲ್ಲಿ ಗೌಡರ ಗೌಜಿ ಗಮ್ಮತ್ತು-2024 – ಒಕ್ಕಲಿಗ ಸಮುದಾಯಗಳ ಕುಟುಂಬ ಸಮಾಗಮ
ಸರ್ಕಾರಿ ಸಂಸ್ಥೆಯನ್ನು ಮುನ್ನಡೆಸುವುದು ಇಂದು ಬಹಳ ಕಷ್ಟ. ಹಾಗಿರುವಾಗ ಜಯದೇವ ಆಸ್ಪತ್ರೆಯನ್ನು ಜನ ಮೆಚ್ಚುವಂತೆ ಮುನ್ನಡೆಸಿದ್ದಾರೆ. ಡಾ. ಮಂಜುನಾಥ್ ಅವರ ಈ ಸಾಧನೆ ಪಿಹೆಚ್‌ಡಿಗೆ ಯೋಗ್ಯವಾದ ಒಂದು ವಿಷಯ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ರಾಜಕಾರಣ ಕೆಟ್ಟದಲ್ಲ. ಎಸ್.ಎಂ. ಕೃಷ್ಣ ಅವರು ನಾನು ಪ್ರೀತಿಸುವ ರಾಜಕಾರಣಿ. ಅದೇ ರೀತಿಯ ವ್ಯಕ್ತಿತ್ವ ಮಂಜುನಾಥ್ ಅವರದ್ದು. ನಿಮ್ಮಂಥವರು ರಾಜಕಾರಣಕ್ಕೆ ಬರಬೇಕು. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಟನ್ ಲೇಖಕಿ ನಿತಾಶಾ ಕೌಲ್‌ಗೆ ನೋ ಎಂಟ್ರಿ – ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್