ನಾಮಪತ್ರ ಸಲ್ಲಿಸಿದ ಡಾ.ಮಂಜುನಾಥ್ – ಡಿಕೆಸು ನೋಡಿ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು

Public TV
1 Min Read
Dr.CN Manjunath Files Nominations From Bengaluru Rural Constituency Lok Sabha Election

– ಬಿಜೆಪಿ ಕಾರ್ಯಕರ್ತರಿಗೆ ಕನ್ನಡ ಭಾವುಟ ತೋರಿಸಿ ತೆರಳಿದ ಡಿಕೆಸು

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bengaluru Rural Constituency) ಬಿಜೆಪಿ (BJP) ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ (Dr.CN Manjunath) ನಾಮಪತ್ರ ಸಲ್ಲಿಸಿದ್ದಾರೆ.

Dr.CN Manjunath Files Nominations From Bengaluru Rural Constituency Lok Sabha Election 1

ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ, ಅಶ್ವಥ್ ನಾರಾಯಣ್, ಮುನಿರತ್ನ ಹಾಗೂ ಡಾ.ಮಂಜುನಾಥ್ ಪೂಜೆ ಸಲ್ಲಿಸಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸಲು ತಡವಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೆರವಣಿಗೆ ರದ್ದು ಮಾಡಿ ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಂಜುನಾಥ್ ಅವರಿಗೆ ಅವರ ಪತ್ನಿ ಅನುಸೂಯ, ಎಮ್.ಕೃಷ್ಣಪ್ಪ ಹಾಗೂ ಚಿಂತಕಿ ಸುಧಾ ಬರಗೂರು ಸಾಥ್ ಕೊಟ್ಟಿದ್ದಾರೆ. ಇದನ್ನೂ ಓದಿ: ರೈತರಿಗೆ ಮಿಡಿಯುವ ಹೃದಯ ಕುಮಾರಸ್ವಾಮಿಯವ್ರದ್ದು: ನಿಖಿಲ್

ಮೆರವಣಿಗೆ ರದ್ದಾಗಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಆಗಮಿಸಿ ಮಂಜುನಾಥ್ ಅವರನ್ನು ಬೆಂಬಲಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಕಾರ್ಯಕರ್ತರ ಉತ್ಸಾಹ ನೋಡಿದರೆ, ಗೆಲುವು ಖಚಿತ ಎನ್ನಿಸುತ್ತಿದೆ. ಅಮಿತ್ ಶಾ ಕೂಡಾ ಆಗಮಿಸಿ ನನ್ನ ಪರ ರೋಡ್ ಶೋ ಮಾಡಿದ್ದಾರೆ. ಇದರಿಂದ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ಹೃದಯ ಒಂದಾಗಿದೆ. ನನ್ನ ಗೆಲುವಿಗಾಗಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಮತದಾರರು ಯಾವುದೇ ತಂತ್ರ, ಕುತಂತ್ರಕ್ಕೆ ಮಣೆ ಹಾಕುವುದಿಲ್ಲ. ಜನ ಬುದ್ಧಿವಂತರಿದ್ದಾರೆ, ಆಮೀಷಗಳಿಗೆ ಬಲಿಯಾಗದೇ ನನ್ನನ್ನ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಾ.ಮಂಜುನಾಥ್ ಒಳಗೆ ಹೋಗುತ್ತಿದ್ದಂತೆ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಬಂದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಡಾ.ಮಂಜುನಾಥ್, ಅಶ್ವಥ್ ನಾರಾಯಣ್, ಮುನಿರತ್ನ ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಬಳಿಕ ಅವರನ್ನು ನೊಡಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಕಾರ್‍ನಿಂದ ಹೊರ ಬಂದು ಕೈ ಮುಗಿದು ಕನ್ನಡ ಭಾವುಟ ತೋರಿಸಿ ಹೋಗಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಟಿಕೆಟ್ ಮಿಸ್ – ಲೋಕ ಜನಶಕ್ತಿ ಪಕ್ಷದ 22 ನಾಯಕರು ರಾಜೀನಾಮೆ

Share This Article