ನವದೆಹಲಿ: ಕೊರೊನಾ ವೈರಸ್ ಹರಡುವಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ವಿರುದ್ಧ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಆಲ್ ಇಂಡಿಯಾ ಬಾರ್ ಅಸೊಶಿಯೇಶನ್, ಇಂಟರ್‍ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ ವತಿಯಿಂದ ಈ ದೂರು ದಾಖಲಿಸಿದ್ದು, ಅನಿರ್ದಿಷ್ಟ ಮೊತ್ತ ಪರಿಹಾರಕ್ಕೆ ಅರ್ಜಿಯಲ್ಲಿ ವಕೀಲ ಅದೀಶ್ ಸಿ.ಅಗ್ರವಾಲ್ ಆಗ್ರಹಿಸಲಾಗಿದೆ.
Advertisement
Advertisement
ಕೊರೊನಾ ವಿಚಾರದಲ್ಲಿ ಚೀನಾ ಹೊಣೆಗಾರಿಕೆ ಮರೆತು ನಿಯಮಗಳ ಉಲ್ಲಂಘಿಸಿದೆ. ವಿಶ್ವಾದ್ಯಂತ ಕೊರೊನಾ ವೈರಸ್ ಹರಡಿದೆ, ಇದನ್ನು ತಡೆಯವ ವಿಚಾರದಲ್ಲಿ ನಿಷ್ಕ್ರಿಯತೆ ತೋರಿದೆ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದೆ ಜೈವಿಕ ಅಸ್ತ್ರದ ಮೂಲಕ ಇತರೆ ದೇಶಗಳನ್ನು ಮುಗಿಸಿ ತಾನು ನಂಬರ್ ಒನ್ ಆಗಲು ಪ್ರಯತ್ನಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
Advertisement
ಚೀನಾ ಸರ್ಕಾರದ ವಿರುದ್ಧ ತನಿಖೆಗೆ ಆಗ್ರಹಿಸಿರು ಅಗ್ರವಾಲ್, ಜಾಗತಿಕ ಮಟ್ಟದಲ್ಲಿ ವೈರಸ್‍ನ ಹರಡಿದಕ್ಕೆ ಆರ್ಥಿಕವಾಗಿ ದೇಶಗಳು ಕುಸಿದಿದೆ. ಇದಕ್ಕಾಗಿ ಚೀನಾ ಬೆಲೆ ತೆರಬೇಕಿದೆ. ಭಾರತವೂ ಸೇರಿ ಇತರೆ ದೇಶಗಳಿಗೆ ಪರಿಹಾರ ನೀಡುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.