ಗದಗ: ಗಜೇಂದ್ರಗಡ ತಾಲೂಕಿನ ಹಾಲಕೇರಿ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಕೇರಿ ಮಠದ ಪೀಠಾಧಿಪತಿ ಶ್ರೀ.ಡಾ.ಸಂಗನಬಸವ(ಅಭಿನವ ಅನ್ನದಾನೇಶ್ವರ) ಮಹಾ ಸ್ವಾಮೀಜಿ(85) ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
Advertisement
Advertisement
ಸ್ವಾಮೀಜಿ ಶಿವಯೋಗ ಮಂದಿರ ಅಧ್ಯಕ್ಷರು ಆಗಿದ್ದ ಇವರು ನವೆಂಬರ್ 8,9,10 ರಂದು ಮಠಕ್ಕೆ ನೂತನ ಚಿರ ಪಟ್ಟಾಧಿಕಾರ ಕಾರ್ಯಕ್ರಮ ನಡೆಸಿದ್ದರು. ತಮ್ಮ ಸ್ಥಾನಕ್ಕೆ ನೂತನವಾಗಿ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರನ್ನು ನೇಮಿಸಿದ್ದರು. ಇದನ್ನೂ ಓದಿ: ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ
Advertisement
Advertisement
ಗದಗ, ಹಾಲಕೇರಿ, ಬಳ್ಳಾರಿ, ಹೊಸಪೇಟೆ ಅನೇಕ ಶಾಖಾ ಮಠಗಳ ಉತ್ತರಾಧಿಕಾರಿಯಾಗಿದ್ದ ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿಯವರ ನಿಧನ ಸುದ್ದಿ ಕೇಳಿ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಸ್ವಾಮೀಜಿಯವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ ಹಾಲಕೇರಿ ಗ್ರಾಮಕ್ಕೆ ಬರಲಿದೆ.