ಲಕ್ನೋ: ಹುಲಿಯ ಘರ್ಜನೆ ಕೇಳಿ ಹೃದಯಾಘಾತಕ್ಕೊಳಗಾಗಿ 12 ಕೋತಿಗಳು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
12 ಕೋತಿಗಳು ಸತ್ತು ಬಿದ್ದಿರುವುದನ್ನ ಸ್ಥಳೀಯರು ನೋಡಿದ್ದರು. ಕೋತಿಗಳ ಸಾಮೂಹಿಕ ಸಾವು ನೋಡಿ ಗಾಬರಿಯಾಗಿದ್ರು. ಕೋತಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವನ್ನಪ್ಪಿರುವ ಎಲ್ಲಾ ಕೋತಿಗಳಿಗೂ ಒಂದೇ ಸಲಕ್ಕೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.
Advertisement
ಕೋಟ್ವಾಲಿ ಮೊಹಮ್ಮದ್ ಪ್ರದೇಶದ ಪಶುವೈದ್ಯರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಹೃದಯಾಘಾತದಿಂದ ಕೋತಿಗಳು ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಸಂಚರಿಸುವುದರಿಂದ ಹುಲಿಯ ಘರ್ಜನೆ ಕೇಳಿ ಕೋತಿಗಳಿಗೆ ಹೃದಯಾಘಾತವಾಗಿರಬಹುದು ಎಂದು ಪಶುವೈದ್ಯರಾದ ಡಾ. ಸಂಜೀವ್ ಕುಮಾರ್ ಹೇಳಿದ್ದಾರೆ.
Advertisement
ಮೃತ ಕೋತಿಗಳು ಸೋಮವಾರದಂದು ಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಅವುಗಳನ್ನ ಪ್ಲಾಸ್ಟಿಕ್ ಕವರ್‍ನಲ್ಲಿ ತುಂಬಿದ್ದಾರೆ.
Advertisement
ಈ ಪ್ರದೇಶದಲ್ಲಿ ಆಗಾಗ ಹುಲಿಗಳು ಸಂಚರಿಸುತ್ತವೆ. ಕೋತಿಗಳು ಸಾವನ್ನಪ್ಪಿದ ಸಂದರ್ಭದಲ್ಲೂ ಹುಲಿಗಳ ಘರ್ಜನೆ ಕೇಳುತ್ತಿತ್ತು ಎಂದು ಇಲ್ಲಿನ ಗ್ರಾಮಸ್ಥರು ಹೇಳಿದ್ದಾರೆ.
Advertisement
ಆದರೆ ಕೋತಿಗಳಿಗೆ ಒಂದೇ ಬಾರಿಗೆ ಹೃದಯಾಘಾತವಾಗಿದೆ ಎಂಬ ಅಂಶವನ್ನು ವನ್ಯಜೀವಿ ತಜ್ಞರು ತಳ್ಳಿ ಹಾಕಿದ್ದಾರೆ. ಇನ್ಫೆಕ್ಷನ್‍ನಿಂದಾಗಿ ಕೋತಿಗಳು ಸಾವನ್ನಪಿರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಕೋತಿಗಳು ಕಾಡು ಪ್ರಾಣಿಗಳು. ಅವು ಈ ರೀತಿ ಸಾವನ್ನಪ್ಪಲು ಸಾಧ್ಯವಿಲ್ಲ. ಎಲ್ಲಾ ಕೋತಿಗಳೂ ಯಾವುದೋ ಒಂದು ಇನ್ಫೆಕ್ಷನ್‍ನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಪಶುವೈದ್ಯರಾದ ಡಾ. ಬ್ರಿಜೆಂದ್ರ ಸಿಂಗ್ ಹೇಳಿದ್ದಾರೆ.
https://www.youtube.com/watch?v=VKTDsc67U04