ಬೆಂಗಳೂರು: ಸಾಮಾಜಿಕ ಪಿಡುಗುಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರನ್ನು ಜಾಗೃತರಾಗಿಸಬೇಕಾದ ಕಾಲೇಜೊಂದು ವಿದ್ಯಾರ್ಥಿಗಳಿಗೆ ವರದಕ್ಷಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಿ ಮಹಾ ಎಡವಟ್ಟು ಮಾಡಿಕೊಂಡಿದೆ. ಈಗ ಆ ಸ್ಟಡಿ ಮೆಟೀರಿಯಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಶಾಂತಿ ನಗರದಲ್ಲಿರುವ ಸೆಂಟ್ ಜೋಸೆಫರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವರದಕ್ಷಿಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಲಾಗಿದೆ. ಇದನ್ನ ವಿದ್ಯಾರ್ಥಿಯೊಬ್ಬರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
Advertisement
Advertisement
ವರದಕ್ಷಿಣೆಯಿಂದ ಕುರೂಪಿ ಹೆಣ್ಮಕ್ಕಳ ಮದುವೆ ಆಗುತ್ತದೆ. ವರದಕ್ಷಿಣೆಯಿಂದ ಒಳ್ಳೆಯ ಹ್ಯಾಂಡ್ಸಮ್ ಹುಡುಗ ಸಿಗುತ್ತಾನೆ. ವರರಿಗೆ ಸ್ವಯಂ ಉದ್ಯೋಗ ದೊರೆಯುತ್ತದೆ. ಇದರಿಂದ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಾರೆ. ಅಷ್ಟೇ ಅಲ್ಲದೇ ಬಡ ಹುಡುಗರಿಗೆ ಅನುಕುಲವಾಗುತ್ತೆ. ಇದರಿಂದ ಅವರು ತಮ್ಮ ಓದನ್ನು ಮುಂದುವರೆಸಬಹುದು. ನವ ದಂಪತಿಯ ಜೀವನ ಸುಖಮಯವಾಗಿರುತ್ತೆ. ಜೊತೆಗೆ ಆಸ್ತಿ ಮಾಡಬಹುದು ಎಂದೆಲ್ಲಾ ಅಧ್ಯಯನ ಸಾಮಗ್ರಿಯಲ್ಲಿ ಹೇಳಲಾಗಿದೆ.
Advertisement
ವರದಕ್ಷಿಣೆ ಬೆಂಬಲಿಸುವ ಈ ಪಾಠವನ್ನು ಚೆನ್ನೈನ ರಿತಿಕಾ ರಮೇಶ್ ಎಂಬುವರು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಇವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸೆಂಟ್ ಜೋಸೇಫ್ ಕಾಲೇಜು ಸ್ಪಷ್ಟನೆ ನೀಡಿದೆ.
Advertisement
ಇದು ಕಾಲೇಜಿನ ಲೆಕ್ಚರರ್ ನೀಡಿರುವ ಅಧ್ಯಯನ ಸಾಮಾಗ್ರಿ. ಇದಕ್ಕೂ ಕಾಲೇಜಿಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರದ ಒಂದು ಪಠ್ಯಪುಸ್ತಕದಿಂದ ತೆಗೆದ ವಿಷಯ. ವಿದ್ಯಾರ್ಥಿಗಳು ಇದನ್ನೇ ಫೇಸ್‍ಬುಕ್ ಗೆ ಹಾಕಿದ್ದಾರೆ ಎಂದು ಹೇಳಿದೆ.