ಹಾಸನ: ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಲೂರು (Alur) ತಾಲೂಕಿನ ಹಳ್ಳಿಯೂರು (Halliyur) ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಮೂಲತಃ ಸಕಲೇಶಪುರ (Sakaleshapura) ತಾಲೂಕಿನ ಬ್ಯಾಕೆರೆಗಡಿ ಗ್ರಾಮದ ಧನ್ಯಶ್ರೀ (20) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ʻಗೇಮ್ ಚೇಂಜರ್ʼ ಸಿನಿ ನಿರ್ಮಾಪಕ ದಿಲ್ ರಾಜುಗೆ ಐಟಿ ಶಾಕ್ – 55 ತಂಡ, 8 ಕಡೆ ಏಕಕಾಲಕ್ಕೆ ದಾಳಿ
ಎರಡು ವರ್ಷದ ಹಿಂದೆ ಧನ್ಯಶ್ರೀ ಹಾಗೂ ಪ್ರೇಮ್‌ಕುಮಾರ್ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದಿಂದ ಪ್ರೇಮ್‌ಕುಮಾರ್ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ತವರು ಮನೆಗೆ ಹೋಗಿದ್ದ ಧನ್ಯಶ್ರೀ ಭಾನುವಾರ ಅತ್ತೆ ಮನೆಗೆ ವಾಪಸ್ ಬಂದಿದ್ದಳು. ಆ ವೇಳೆ ಯಾಕೆ ವರದಕ್ಷಿಣೆ ತಂದಿಲ್ಲ ಎಂದು ಜಗಳ ಮಾಡಿ ಆಕೆಯ ಮೇಲೆ ಹಲ್ಲೆ ಮಾಡಿದ್ದ.
ಇದೇ ಸಮಯದಲ್ಲಿ ಪತಿಯೊಂದಿಗೆ ಅತ್ತೆ ಭವಾನಿ, ಮಾವ ಪ್ರದೀಪ್ ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಮನನೊಂದ ಮಹಿಳೆ ಸೋಮವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ʻಟಿಪ್ಪು ಸುಲ್ತಾನ್ – ದಿ ಸಾಗಾ ಆಫ್ ಮೈಸೂರು’ ಪುಸ್ತಕ ಬಿಡುಗಡೆ ಮಾಡಿದ ಸಂಸದ ಯದುವೀರ್